ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್‌ಗೆ ವಂಚನೆ? ಸಿನಿಮಾ ನಿರ್ದೇಶಕ ಕರಮಲ ಬಾಲರವೀಂದ್ರನಾಥ್ ಬಂಧನ

ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳನ್ನು ಹರಾಜು ಹಾಕ್ತೀವಿ ಅಂದಾಗಲೂ ಅದರ ಮಾಲಿಕ ಡೋಂಟ್​ ಕೇರ್​ ಎಂದಿದ್ದರಿಂದ ಬ್ಯಾಂಕ್​ ಸಿಬ್ಬಂದಿಗೆ ಅನುಮಾನ ಬಂತು. ಪರಿಶೀಲಿಸಿ ನೋಡಿದಾಗ ಆಘಾತ ಕಾದಿತ್ತು.

ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್‌ಗೆ ವಂಚನೆ? ಸಿನಿಮಾ ನಿರ್ದೇಶಕ ಕರಮಲ ಬಾಲರವೀಂದ್ರನಾಥ್ ಬಂಧನ
ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್‌ಗೆ ವಂಚನೆ? ಸಿನಿಮಾ ನಿರ್ದೇಶಕ ಕರಮಲ ಬಾಲರವೀಂದ್ರನಾಥ್ ಬಂಧನ
TV9kannada Web Team

| Edited By: Madan Kumar

Aug 17, 2021 | 4:07 PM

ವಂಚನೆ ಪ್ರಕರಣಗಳಲ್ಲಿ ಸಿನಿಮಾ ಮಂದಿಯ ಹೆಸರು ಪದೇಪದೇ ಕೇಳಿಬರುವಂತಾಗಿದೆ. ನಕಲಿ ಚಿನ್ನಾಭರಣ ಅಡವಿಟ್ಟು ಬ್ಯಾಂಕ್​ಗೆ ವಂಚಿಸಿದ ಆರೋಪದ ಮೇಲೆ ಸ್ಯಾಂಡಲ್​ವುಡ್​ ಸಿನಿಮಾ ನಿರ್ದೇಶಕ ಕರಮಲ ಬಾಲರವೀಂದ್ರನಾಥ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. 2016ರಲ್ಲಿ ‘ಮಧುರ ಸ್ವಪ್ನ’ ಚಿತ್ರಕ್ಕೆ ಕರಮಲ ಬಾಲರವೀಂದ್ರನಾಥ್ ನಿರ್ದೇಶನ ಮಾಡಿದ್ದರು. ಈಗ ಪೊಲೀಸರ ಅತಿಥಿ ಆಗಿದ್ದಾರೆ. ಅವರ ಮೇಲೆ ಗಂಭೀರ ಆರೋಪ ಎದುರಾಗಿದೆ. ನಕಲಿ ಚಿನ್ನ ಅಡವಿಟ್ಟು ಹಲವು ಬ್ಯಾಂಕ್​ಗಳಿಗೆ ಲಕ್ಷಾಂತರ ರೂ. ವಂಚಿಸಿರುವ ಶಂಕೆ ವ್ಯಕ್ತವಾಗಿದೆ.

ಅಚ್ಚರಿ ಎಂದರೆ ಸಿನಿಮಾ ಶೈಲಿಯಲ್ಲಿ ಕರಮಲ ಬಾಲರವೀಂದ್ರನಾಥ್ ಖತರ್ನಾಕ್​ ಕೆಲಸ ಮಾಡಿರುವುದು ಬೆಳಕಿಗೆ ಬಂದಿದೆ. ಖಾಸಗಿ ಬ್ಯಾಂಕ್​ನಲ್ಲಿ ಚಿನ್ನ ಅಡವಿಟ್ಟು ಬರೋಬ್ಬರಿ 42.91 ಲಕ್ಷ ರೂ. ಹಣವನ್ನು ಅವರು ಪಡೆದಿದ್ದರು. ನಂತರ ಬಡ್ಡಿ ಕಟ್ಟಲು ನೋಟೀಸ್ ನೀಡಿದರೂ ಅದಕ್ಕೆ ಕರಮಲ ಬಾಲರವೀಂದ್ರನಾಥ್ ತಲೆ ಕೆಡಿಸಿಕೊಳ್ಳಲಿಲ್ಲ. ಅಡವಿಟ್ಟುಕೊಂಡಿದ್ದ ಚಿನ್ನ ಹರಾಜು ಹಾಕ್ತೀವಿ ಅಂತ ಬ್ಯಾಂಕ್​ನವರು ಹೇಳಿದರೂ ಬಾಲರವೀಂದ್ರನಾಥ್ ಕಡೆಯಿಂದ ಪ್ರತಿಕ್ರಿಯೆ ಬರಲಿಲ್ಲ. ಆಗಲೇ ಬ್ಯಾಂಕ್​ ಸಿಬ್ಬಂದಿಗೆ ಅನುಮಾನ ಶುರುವಾಯ್ತು.

ಅಷ್ಟು ಬೆಲೆ ಬಾಳುವ ಚಿನ್ನಾಭರಣಗಳನ್ನು ಹರಾಜು ಹಾಕ್ತೀವಿ ಅಂದಾಗಲೂ ಅದರ ಮಾಲಿಕ ಡೋಂಟ್​ ಕೇರ್​ ಎಂದಿದ್ದು ಗಮನಿಸಿ ಬ್ಯಾಂಕ್​ ಸಿಬ್ಬಂದಿಗೆ ಯಾಕೋ ಎಡವಟ್ಟಾಗಿದೆ ಅನಿಸಿತು. ಅನುಮಾನ ಬಂದು ಪರಿಶೀಲಿಸಿದಾಗ ಅವರಿಗೆ ಆಘಾತ ಕಾದಿತ್ತು. ಹೊರಗಿನಿಂದ ಚಿನ್ನ, ಒಳಗೆಲ್ಲ ಲೋಹ ತುಂಬಿಸಿ ಅಡವಿಟ್ಟಿದ್ದ ಕರಮಲ ಬಾಲರವೀಂದ್ರನಾಥ್ ಮಾಸ್ಟರ್​ ಪ್ಲ್ಯಾನ್​ ಬಯಲಾಯಿತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಾಜಿನಗರ ಪೊಲೀಸರಿಂದ ಆರೋಪಿ ಬಾಲರವಿಂದ್ರನಾಥ ಬಂಧನವಾಗಿದೆ. ಇನ್ನೂ ಹಲವೆಡೆ ಇದೇ ರೀತಿ ವಂಚಿಸಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಅವರನ್ನು ವಶಕ್ಕೆ ಪಡೆದಿರುವ ರಾಜಾಜಿನಗರ ಪೊಲೀಸರು ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ. ವಂಚನೆ ಪ್ರಕರಣದ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:

ದೊಡ್ಡಬಳ್ಳಾಪುರದ ಮಾಜಿ ಶಾಸಕ ಮತ್ತು ಪತ್ನಿ ವಿರುದ್ಧ ಕೇಸ್ ದಾಖಲು; 3 ಕೋಟಿ ರೂ. ಪಡೆದು ವಂಚನೆ ಆರೋಪ

ದರ್ಶನ್​ಗೆ ವಂಚನೆ ಕೇಸ್; ಕ್ಷಣಕ್ಕೊಂದರಂತೆ.. ದಿನಕ್ಕೊಂದರಂತೆ ಹೇಳಿಕೆ ನೀಡುತ್ತಿರುವ ಆರೋಪಿ ಅರುಣ ಕುಮಾರಿ

(Bank cheating Case: Madhura Swapna Kannada movie director Karamala Balaravindranath arrested)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada