ದರ್ಶನ್​ಗೆ ವಂಚನೆ ಕೇಸ್; ಕ್ಷಣಕ್ಕೊಂದರಂತೆ.. ದಿನಕ್ಕೊಂದರಂತೆ ಹೇಳಿಕೆ ನೀಡುತ್ತಿರುವ ಆರೋಪಿ ಅರುಣ ಕುಮಾರಿ

ದರ್ಶನ್​ಗೆ ವಂಚನೆ ಕೇಸ್; ಕ್ಷಣಕ್ಕೊಂದರಂತೆ.. ದಿನಕ್ಕೊಂದರಂತೆ ಹೇಳಿಕೆ ನೀಡುತ್ತಿರುವ ಆರೋಪಿ ಅರುಣ ಕುಮಾರಿ
ಮಹಿಳೆ ಹಾಗೂ ದರ್ಶನ್​

ನಟ ದರ್ಶನ್ ಹೆಸರಲ್ಲಿ ವಂಚಿಸಲು ಮುಂದಾಗಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿ ಅರುಣ ಕುಮಾರಿ ಎಲ್ಲರನ್ನೂ ಯಾಮಾರಿಸ್ತಿದ್ದಾರಾ ಅನ್ನೋ ಅನುಮಾನ ಮೂಡ್ತಿದೆ. ಆಕೆ ಕ್ಷಣಕ್ಕೊಂದರಂತೆ.. ದಿನಕ್ಕೊಂದರಂತೆ ನೀಡ್ತಿರೋ ಹೇಳಿಕೆಗಳೇ ಈ ಅನುಮಾನ ಏಳಲು ಕಾರಣವಾಗ್ತಿದೆ. ಒಬ್ಬೊಬ್ಬರ ಎದುರು ಒಂದೊಂದು ರೀತಿಯ ಹೇಳಿಕೆ ನೀಡ್ತಿರೋ ಅರುಣಕುಮಾರಿ ಪ್ರಕರಣದ ಕುರಿತು ಗೊಂದಲ ಏಳಲು ಕಾರಣವಾಗಿದ್ದಾಳೆ.

TV9kannada Web Team

| Edited By: Ayesha Banu

Jul 13, 2021 | 8:44 AM


ಬೆಂಗಳೂರು: ಸ್ಯಾಂಡಲ್ವುಡ ನಟ ದರ್ಶನ್ ಹೆಸರಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿ ವಂಚನೆಗೆ ಸಂಬಂಧಿಸಿದಂತೆ ದಿನಕ್ಕೊಂದು.. ಕ್ಷಣಕ್ಕೊಂದು ಟ್ವಿಸ್ಟ್ ಸಿಗ್ತಿದೆ. ಇದಕ್ಕೆಲ್ಲಾ ಕಾರಣ ಪ್ರಕರಣದ ಪ್ರಮುಖ ಆರೋಪಿಯಾಗಿರೋ ಅರುಣಕುಮಾರಿ ಒಬ್ಬೊಬ್ಬರ ಮುಂದೆ ಒಂದೊಂದು ಹೇಳಿಕೆ ನೀಡ್ತಿದ್ದಾಳೆ. ಬೆಂಗಳೂರು ಪೊಲೀಸರ ಎದುರು ಒಂದು ಹೇಳಿಕೆ ನೀಡಿರೋ ಅರುಣಕುಮಾರಿ.. ದರ್ಶನ್ ಎದುರು.. ಮೈಸೂರು ಪೊಲೀಸರ ಎದುರು ಬೇರೊಂದು ರೀತಿಯ ಹೇಳಿಕೆ ನೀಡಿ ಇಡೀ ಪ್ರಕರಣವೇ ಗೊಂದಲಮಯವಾಗಲು ಕಾರಣಳಾಗಿದ್ದಾಳೆ. ಹೀಗಾಗಿ ಅರುಣಕುಮಾರಿ ನೀಡಿರೋ ಯಾವ ಹೇಳಿಕೆಯನ್ನ ನಂಬಬೇಕು ಅನ್ನೋ ಪ್ರಶ್ನೆ ಏಳುವಂತೆ ಮಾಡಿದೆ.

ಒಬ್ಬೊಬ್ಬರ ಎದುರು.. ಒಂದೊಂದು ಹೇಳಿಕೆ ನೀಡಿದ ಅರುಣ
ಕೆನರಾ ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಅರುಣಕುಮಾರಿ, ಪ್ರಕರಣದ ದಿಕ್ಕು ತಪ್ಪಿಸಲು ಒಂದೊಂದು ಬಾರಿ ಒಂದೊಂದು ಹೇಳಿಕೆ ನೀಡ್ತಿದ್ದಾಳೆ. ಬೆಂಗಳೂರಿನ ಜಯನಗರ ಠಾಣೆಯಲ್ಲಿ, ದರ್ಶನ್ ಆಪ್ತ ಸ್ನೇಹಿತರಾದ ಹರ್ಷ ಹಾಗೂ ರಾಕೇಶ್ ಪಾಪಣ್ಣ ವಿರುದ್ಧ ಹೇಳಿಕೆ ನೀಡಿದ್ಲಂತೆ. ಹರ್ಷ ಮತ್ತು ರಾಕೇಶ್ ತನ್ನ ಮಗನಿಗೆ ಜೀವ ಬೆದರಿಕೆ ಹಾಕಿದ್ದಾರೆ ಅಂತಾ ಆರೋಪಿಸಿದ್ದಾರಂತೆ.

ಇದೇ ವಿಚಾರವಾಗಿ ಉಮಾಪತಿ ಸಹಾ ಜಯನಗರದ ಆಕೆಯ ಸ್ಟೇಟ್ಮೆಂಟ್ ಸಹ ಪರಿಗಣಿಸಿ ಅಂತಾ ಹೇಳ್ತಿದ್ದಾರೆ. ಅರುಣಾಕುಮಾರಿ ನಟ ದರ್ಶನ್ ಮುಂದೆ ಉಮಾಪತಿ ಹೆಸರು ಬಾಯಿಬಿಟ್ಟಿದ್ದಾಳೆ. ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ನಟ ದರ್ಶನ್ ಸಂಪರ್ಕಿಸಿದ ಅರುಣ ಕುಮಾರಿ ಎಲ್ಲಾ ಸತ್ಯ ಹೇಳ್ತೀನಿ. ಇದಕ್ಕೆಲ್ಲಾ ಉಮಾಪತಿಯೇ ಕಾರಣ.. ಅವರೇ ನನಗೆ ಈ ರೀತಿ ಮಾಡಲು ಹೇಳಿದ್ದರು ಅಂತಾ ಹೇಳಿದ್ದಾಳೆ. ಅಷ್ಟೇ ಅಲ್ಲ ಮೈಸೂರು ಪೊಲೀಸರು ಡಿಸಿಪಿ ಪ್ರದೀಪ್ ಗುಂಟಿ ಮುಂದೆ ಸಹ ಇದೇ ಮಾತುಗಳನ್ನು ಹೇಳಿದ್ದಾಳಂತೆ.

ಅರುಣ ಕುಮಾರಿ ಒಂದೊಂದು ಕಡೆ ಒಂದೊಂದು ರೀತಿ ಹೇಳಿಕೆ ನೀಡಿರುವುದು ಪ್ರಕರಣದಲ್ಲಿ ಗೊಂದಲ ಏಳಲು ಕಾರಣವಾಗಿದೆ. ಜೊತೆಗೆ ಆರೋಪಿ ಅರುಣ ಕುಮಾರಿ, ಆಕೆ ಜೊತೆಯಲ್ಲಿದ್ದ ನಂದೀಶ್ ಮತ್ತು ಮಧುಕೇಶವ, ದರ್ಶನ್ ಸ್ನೇಹಿತ ಹರ್ಷ ಒಡೆತನದ ಮೈಸೂರು ಯೂನಿಯನ್ ರೆಸ್ಟೋರೆಂಟ್‌ಗೆ ಬಂದು ಹೋಗಿದ್ದಾರೆ. ಮತ್ತೊಂದೆಡೆ ಮೈಸೂರಿನ ಟಿ ನರಸೀಪುರ ರಸ್ತೆಯ ದರ್ಶನ್ ಫಾರ್ಮ್ ಹೌಸ್‌ಗೂ ಭೇಟಿ ನೀಡಿದ್ದಾರೆ. ಹರ್ಷ ಇದರ ಹಿಂದಿನ ಮಾಸ್ಟರ್ ಮೈಂಡ್ ಅನ್ನೋದನ್ನ ದರ್ಶನ್ ತಳ್ಳಿ ಹಾಕಿದ್ದಾರೆ. ರಾಕೇಶ್ ಪಾಪಣ್ಣ, ರಾಕೇಶ್ ಶರ್ಮಾಗೂ ಕ್ಲೀನ್ ಚಿಟ್ ನೀಡಿದ್ದಾರೆ.

ದರ್ಶನ್ ಈ ರೀತಿ ಹೇಳುತ್ತಿದ್ದಂತೆ ನಿರ್ಮಾಪಕ ಉಮಾಪತಿಯವರನ್ನ ಅನುಮಾನದಿಂದ ನೋಡುವಂತಾಗಿದೆ. ಇದಕ್ಕೆ ಪೂರಕವಾಗಿ, ದರ್ಶನ್ ಉಮಾಪತಿ ಬಗ್ಗೆ ಅನುಮಾನ ಏಳುವ ಹಲವು ಸಂಗತಿಗಳನ್ನ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಈ ನಡುವೆ ವಾಯ್ಸ್ ರೆಕಾರ್ಡ್ಗಳನ್ನು ಸಹ ಕೇಳಿಸಿದ್ರು. ಇದೆಲ್ಲಾ ಆದ ಬಳಿಕ ದರ್ಶನ್ ಮತ್ತೆ ಹೇಳಿದ ಮಾತು ಮತ್ತೆ ಹಲವು ಗೊಂದಲಗಳು ಅನುಮಾನಕ್ಕೆ ಕಾರಣವಾಯಿತು. ಉಮಾಪತಿಯವರನ್ನ ಆರೋಪಿ ಸ್ಥಾನದಲ್ಲಿ ನಿಲ್ಲಸಲ್ಲ. ಉಮಾಪತಿ ಸಹ ಮಿಕ ಆಗಿರಬಹುದು ಅಂತಾ ಹೇಳಿದ್ರು. ಹೀಗಾಗಿ ಈ ಪ್ರಕರಣ ಮತ್ತಷ್ಟು ಗೊಂದಲದ ಗೂಡಾಗಲು ಕಾರಣರಾಗಿದ್ದಾರೆ. ಹೀಗಾಗಿ ಮೋಸದಾಟದ ಮಾಸ್ಟರ್ ಮೈಂಡ್ ಯಾರೋ ಅನ್ನೋ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರ ಸಿಕ್ಕಿಲ್ಲ.

ಇದನ್ನೂ ಓದಿ: ದರ್ಶನ್​ಗೆ ವಂಚನೆ ಕೇಸ್​ಗೆ ಸ್ಫೋಟಕ ಟ್ವಿಸ್ಟ್; ಆಡಿಯೋ, ಚಾಟಿಂಗ್, ವಿಡಿಯೋ, ಸಿಸಿಟಿವಿ ಸಾಕ್ಷ್ಯ


Follow us on

Related Stories

Most Read Stories

Click on your DTH Provider to Add TV9 Kannada