ರಾಯಚೂರು: ನದಿ ನೀರಲ್ಲಿ ಆಟವಾಡ್ತಿದ್ದ ಬಾಲಕನ ಮೇಲೆ ಮೊಸಳೆ ದಾಳಿ, ಸ್ಥಳೀಯರ ಸಮಯಪ್ರಜ್ಞೆಯಿಂದ ಉಳಿಯಿತು ಪುಟ್ಟ ಜೀವ
ಮಹಿಳೆಯರೆಲ್ಲ ನದಿ ದಡದಲ್ಲಿ ಬಟ್ಟೆ ತೊಳೆಯುತ್ತಿದ್ದರು. ಆದ್ರೆ ಪವನ್ ಸ್ವಲ್ಪ ಮುಂದೆ ಹೋಗಿ ನೀರಿನಲ್ಲಿ ಆಟವಾಡುತ್ತಿದ್ದ. ಈ ವೇಳೆ ಘಟನೆ ಸಂಭವಿಸಿದೆ.
ರಾಯಚೂರು: ಜಿಲ್ಲೆಯ ಕೊರ್ತಕುಂದ ಗ್ರಾಮದಲ್ಲಿ 9 ವರ್ಷದ ಬಾಲಕನ ಮೇಲೆ ಮೊಸಳೆ ದಾಳಿ ಮಾಡಿದ ಘಟನೆ ನಡೆದಿದೆ. ಕುಟುಂಬಸ್ಥರ ಜೊತೆ ನದಿಗೆ ತೆರಳಿದ್ದ ಪವನ್ ಮೇಲೆ ಮೊಸಳೆ ದಾಳಿ ನಡೆಸಿದ್ದು ಕೂಡಲೇ ಮೊಸಳೆಯಿಂದ ಬಾಲಕ ಪವನ್ನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಬಾಲಕ ಬದುಕುಳಿದಿದ್ದಾನೆ.
ಕೊರ್ತಕುಂದದಲ್ಲಿ ಗ್ರಾಮದ ತಿಮ್ಮಪ್ಪ ಜಾತ್ರೆ ಹಿನ್ನೆಲೆ ಅಜ್ಜಿ ಮನೆಗೆ ಬಂದಿದ್ದ ಪವನ್, ಕುಟುಂಬಸ್ಥರ ಜೊತೆ ನದಿಗೆ ತೆರಳಿದ್ದ. ಮಹಿಳೆಯರೆಲ್ಲ ನದಿ ದಡದಲ್ಲಿ ಬಟ್ಟೆ ತೊಳೆಯುತ್ತಿದ್ದರು. ಆದ್ರೆ ಪವನ್ ಸ್ವಲ್ಪ ಮುಂದೆ ಹೋಗಿ ನೀರಿನಲ್ಲಿ ಆಟವಾಡುತ್ತಿದ್ದ. ಈ ವೇಳೆ ಘಟನೆ ಸಂಭವಿಸಿದೆ. ಸದ್ಯ ಬಾಲಕ ಪವನ್ಗೆ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಮತ್ತೆ ಹುಲಿ ಹಾವಳಿ
ಕೊಡಗು: ವಿರಾಜಪೇಟೆ ತಾಲೂಕಿನ ಮಾಯಮುಡಿ ಬಳಿಯ ರುದ್ರಬೀಡು ಗ್ರಾಮದಲ್ಲಿ ಹುಲಿ ಮತ್ತೆ ಕಾಣಿಸಿಕೊಂಡಿದ್ದು ಹಸು ಕೊಂದು ಹಾಕಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Bengaluru News: ಕೆಲಸ ಕೊಡಿಸ್ತೀವಿ ಅಂತಾ ಕರೆದು ಸುಲಿಗೆ ಮಾಡಿದ್ದ ಗ್ಯಾಂಗ್ ಬಂಧನ
ರಾಜಕೀಯ ಪಕ್ಷದ ಬಂಟಿಂಗ್ಸ್ಗೆ ಸಿಲುಕಿ ಅಮಾಯಕ ಕೋತಿಯ ದುರ್ಮರಣ
ದೊಡ್ಡಬಳ್ಳಾಪುರ: ಮುಂಬರುವ ಅಸೆಂಬ್ಲಿ ಚುನಾವಣೆಯ ಕಾವು ಜೋರಾಗಿಯೇ ಇದೆ. ಆದರೆ ಚುನಾವಣೆ ನಿಮಿತ್ತ ಪಕ್ಷಗಳ ಆರ್ಭಟದ ಮಧ್ಯೆ ಅಮಾಯಕ ಪ್ರಾಣಿಯೊಂದು ಅಸುನೀಗಿದೆ. ರಾಜಕೀಯ ಪಕ್ಷವೊಂದು ಪ್ರಚಾರ ನಿಮಿತ್ತ ಮರದಲ್ಲಿ ನೇತು ಹಾಕಿದ್ದ ಬಂಟಿಂಗ್ಸ್ (Buntings)ಗೆ ಸಿಲುಕಿ ಕೋತಿಯೊಂದು ಪ್ರಾಣ ಬಿಟ್ಟಿದೆ. ಮರಕ್ಕೆ ಕಟ್ಟಿದ್ದ ಬಂಟಿಂಗ್ಸ್ನಿಂದ ಕೋತಿ (Monkey) ನೇಣು ಬಿಗಿದ ಸ್ಥಿತಿಯಲ್ಲಿ (Hanging) ಮೃತಪಟ್ಟಿದೆ. ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆದೊಡ್ಡಬಳ್ಳಾಪುರ (Doddaballapur) ತಾಲೂಕಿನ ಆರೂಡಿ ಗ್ರಾಮದಲ್ಲಿ ಈ ಕರುಣಾಜನಕ ಘಟನೆ ನಡೆದಿದೆ.
ರಾಜಕೀಯ ಪಕ್ಷದ ಬಂಟಿಂಗ್ ನಲ್ಲಿ ಆಟವಾಡುವ ವೇಳೆ ಅದು ಕೋತಿಯ ಕುತ್ತಿಗೆಗೆ ಸುತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಅದು ಬಿಗಿಯಾಗಿ ಕುತ್ತಿಗೆಗೆ ಸುತ್ತಿಕೊಂಡ ಕಾರಣ ಕೋತಿ ಸಾವು ಕಂಡಿದೆ. ಅಂದಹಾಗೆ ಬಿಜೆಪಿ ಕಾರ್ಯಕ್ರಮಕ್ಕಾಗಿ ಕಟ್ಟಿದ್ದ ಬಂಟಿಂಗ್ಸ್ ಅದಾಗಿತ್ತು. ಮರದ ತುದಿಯಲ್ಲಿ ಬಂಟಿಂಗ್ಸ್ ಗೆ ಸಿಲುಕಿ, ಕೋತಿ ಸಾವನ್ನಪಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:51 pm, Fri, 3 February 23