ಯುವತಿಯರ ನಗ್ನ ಫೋಟೋ ಕ್ರಿಯೇಟ್ ಮಾಡುತ್ತಿದ್ದ ಕಿರಾತಕ ಅರೆಸ್ಟ್​

ಹಾಸನ: ಯುವತಿಯರ ನಗ್ನ ಫೋಟೋ ಕ್ರಿಯೇಟ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಕಿರಾತಕ ಪೊಲೀಸರ ಅತಿಥಿಯಾಗಿದ್ದಾನೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಕೇಡಿಗೆ ಗ್ರಾಮದ ನಿವಾಸಿ ಪ್ರಶಾಂತ ರಾಜಶೇಖರ್ ವಾಮ ಬಂಧಿತ ಆರೋಪಿ. ಮೊದಲಿಗೆ ಫೇಸ್​ಬುಕ್​ನಲ್ಲಿ ಯುವತಿಯರ ಫೋಟೋ ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದರು. ಬಳಿಕ ಯುವತಿಯರ ಫೋಟೋಗಳಿಗೆ ನಗ್ನ ರೂಪ ಕೊಡುತ್ತಿದ್ದರು. ನಂತರ ಯುವತಿಯರ ಫೋನ್ ನಂಬರ್ ಸಂಗ್ರಹಿಸಿ ಹಣಕ್ಕೆ ಬೇಡಿಕೆಯಿಡುತ್ತಿದ್ದರು. ಹಣ ಕೊಡದಿದ್ದರೆ ನಗ್ನ ಫೋಟೋ ಅಪ್ ಲೋಡ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದರು. ಹಾಸನದ ಯುವತಿಯೊಬ್ಬಳಿಗೆ […]

ಯುವತಿಯರ ನಗ್ನ ಫೋಟೋ ಕ್ರಿಯೇಟ್ ಮಾಡುತ್ತಿದ್ದ ಕಿರಾತಕ ಅರೆಸ್ಟ್​
ಸಾಧು ಶ್ರೀನಾಥ್​

Updated on: Dec 07, 2019 | 12:07 PM

ಹಾಸನ: ಯುವತಿಯರ ನಗ್ನ ಫೋಟೋ ಕ್ರಿಯೇಟ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಕಿರಾತಕ ಪೊಲೀಸರ ಅತಿಥಿಯಾಗಿದ್ದಾನೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಕೇಡಿಗೆ ಗ್ರಾಮದ ನಿವಾಸಿ ಪ್ರಶಾಂತ ರಾಜಶೇಖರ್ ವಾಮ ಬಂಧಿತ ಆರೋಪಿ.

ಮೊದಲಿಗೆ ಫೇಸ್​ಬುಕ್​ನಲ್ಲಿ ಯುವತಿಯರ ಫೋಟೋ ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದರು. ಬಳಿಕ ಯುವತಿಯರ ಫೋಟೋಗಳಿಗೆ ನಗ್ನ ರೂಪ ಕೊಡುತ್ತಿದ್ದರು. ನಂತರ ಯುವತಿಯರ ಫೋನ್ ನಂಬರ್ ಸಂಗ್ರಹಿಸಿ ಹಣಕ್ಕೆ ಬೇಡಿಕೆಯಿಡುತ್ತಿದ್ದರು. ಹಣ ಕೊಡದಿದ್ದರೆ ನಗ್ನ ಫೋಟೋ ಅಪ್ ಲೋಡ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದರು.

ಹಾಸನದ ಯುವತಿಯೊಬ್ಬಳಿಗೆ 25 ಸಾವಿರ ಹಣಕ್ಕೆ ಬೇಡಿಕೆಯಿಟ್ಟಿದ್ದ. ಒಮ್ಮೆ‌ ಹಣ ವಸೂಲಿ ಮಾಡಿ ಮತ್ತೊಮ್ಮೆ ಹಣಕ್ಕೆ ಬೇಡಿಕೆಯಿಟ್ಟಿದ್ದ. ದೂರಿನ ಆಧಾರದ ಮೇಲೆ ದಾಳಿ ನಡೆಸಿದ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us