ಬೆಳಗಾವಿ ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸಿದ್ದ ಖತರ್ನಾಕ್ ಗ್ಯಾಂಗ್; ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ ಅಂತೀರಾ? ಈ ಸ್ಟೋರಿ ನೋಡಿ

ಜಿಲ್ಲೆಯ ಜನರನ್ನೇ ಬೆಚ್ಚಿ ಬೀಳಿಸಿದ್ದ ಖತರ್ನಾಕ್ ಗ್ಯಾಂಗ್​, ಪೊಲೀಸರ ಭಯವಿಲ್ಲದೇ ಕಳ್ಳತನ, ಕೊಲೆ ಮಾಡುತ್ತಾ ಓಡಾಡ್ತಿದ್ದವರು ಕಡೆಗೂ ಪೊಲೀಸರ ಖೆಡ್ಡಾಗೆ ಬಿದ್ದಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದ್ದ ಪೊಲೀಸರಿಗೆ ಶಾಕಿಂಗ್ ವಿಚಾರವೊಂದು ಗೊತ್ತಾಗಿದೆ.

ಬೆಳಗಾವಿ ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸಿದ್ದ ಖತರ್ನಾಕ್ ಗ್ಯಾಂಗ್; ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ ಅಂತೀರಾ? ಈ ಸ್ಟೋರಿ ನೋಡಿ
ಸಾಂಧರ್ಬಿಕ ಚಿತ್ರ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 24, 2023 | 9:33 AM

ಬೆಳಗಾವಿ: ಜಿಲ್ಲೆಯ ಜನರ ನಿದ್ದೆಗೆಡಿಸಿದ್ದ ಖತರ್ನಾಕ್ ಗ್ಯಾಂಗ್ ಅದು, ಊರಲ್ಲಿ ಮಚ್ಚು ಲಾಂಗು ಹಿಡಿದುಕೊಂಡು ಹವಾ ಮಾಡುವುದರ ಜೊತೆಗೆ ಹಣಕ್ಕಾಗಿ ಹೆದರಿಸುತ್ತಿದ್ದರು. ಗ್ರಾಮದಲ್ಲಿ ಈ ಗ್ಯಾಂಗ್ ವಿರುದ್ಧ ಹೋದ್ರೆ ನಾವೇ ಕೊಲೆಯಾಗ್ತೀವಿ, ನಮಗ್ಯಾಕೆ ಅಂತಾ ಅಂದುಕೊಂಡು ಜನರು ಅನ್ಯಾಯ ಆಗ್ತಿದ್ರೂ ಸುಮ್ಮನಿದ್ರು. 13ಜನರ ಈ ಗ್ಯಾಂಗ್ ಬರೀ ಊರಲ್ಲಿ ಅಷ್ಟೇ ಅಲ್ಲದೆ ಜಿಲ್ಲೆಯ ನಾನಾ ಕಡೆ ದರೋಡೆ, ಕಳ್ಳತನ, ಸುಲಿಗೆ ಮಾಡ್ತಾ ಬಿಂದಾಸ್ ಲೈಫ್ ಕಳೆಯುತ್ತಿದ್ದರು. ಹೀಗಿದ್ದ ಗ್ಯಾಂಗ್​ನ್ನ ಒಂದು ಜೆಸಿಬಿ ಕಳ್ಳತನ ಪ್ರಕರಣದಿಂದ ಇದೀಗ ಪೊಲೀಸರು ಹೇಡೆಮುರಿ ಕಟ್ಟಿದ್ದಾರೆ.

ಜಿಲ್ಲೆಯ ರಾಯಬಾಗ ತಾಲೂಕಿನ ಖಣದಾಳ ಗ್ರಾಮದಲ್ಲಿ ಕಳೆದ ಆರು ತಿಂಗಳ ಹಿಂದೆ ಒಂದು ಜೆಸಿಬಿ ಕಳ್ಳತನವಾಗಿತ್ತು. ಸೆ.8ರಂದು ಕಳ್ಳತನವಾಗಿದ್ದ ಜೆಸಿಬಿ ಹುಡುಕಿಕೊಡುವಂತೆ ವ್ಯಕ್ತಿಯೊಬ್ಬ ಮುಗಳಖೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುತ್ತಾರೆ. ಕೇಸ್ ತೆಗೆದುಕೊಂಡ ಪೊಲೀಸರು ಜೆಸಿಬಿ ಪತ್ತೆ ಮಾಡಲು ಸಾಕಷ್ಟು ಪ್ರಯತ್ನ ಮಾಡಿದ್ರೂ ಅದು ಸಿಗುವುದಿಲ್ಲ. ಕಳ್ಳತನ ಮಾಡಿಕೊಂಡು ಮಹಾರಾಷ್ಟ್ರಕ್ಕೆ ಅದನ್ನ ತೆಗೆದುಕೊಂಡು ಹೋಗಿದ್ದಾರೆ ಅನ್ನೋ ವಿಚಾರ ಪೊಲೀಸರಿಗೆ ಗೊತ್ತಾಗುತ್ತೆ. ಹೀಗಾಗಿ ಆರಂಭದಲ್ಲಿ ಹೊರ ರಾಜ್ಯದ ಕಳ್ಳರೇ ಅದನ್ನ ಕದ್ದುಕೊಂಡು ಹೋಗಿದ್ದಾರೆ ಅಂತಾ ಅಂದುಕೊಂಡಿದ್ದ ಪೊಲೀಸರಿಗೆ ಕೆಲವೇ ದಿನಗಳಲ್ಲಿ ಗ್ರಾಮದಲ್ಲೇ ಓರ್ವ ಈ ಕೃತ್ಯ ಎಸಗಿದ್ದಾನೆ ಅನ್ನೋ ವಿಚಾರ ಕಿವಿಗೆ ಬೀಳುತ್ತೆ.

ಇದನ್ನೂ ಓದಿ:ಹಾಸನ: ಐಫೋನ್ ಆಸೆಗಾಗಿ ಕೊರಿಯರ್​ ಬಾಯ್​ನ ಬರ್ಬರ ಕೊಲೆ; ಕಣ್ಣೀರು ಹಾಕುತ್ತಿರುವ ಕುಟುಂಬಸ್ಥರು

ಹೌದು ಇದೇ ಗ್ರಾಮದ ವಾಸುದೇವ ನಾಯಕ್ ಎಂಬಾತನೆ ಕಳ್ಳತನ ಮಾಡಿರುಬಹುದು ಎಂಬ ಸುಳಿವಿದ್ದು, ಆತನಿಗಾಗಿ ನಿರಂತರ ಶೋಧ ಕಾರ್ಯ ಪೊಲೀಸರು ಮಾಡ್ತಿರುತ್ತಾರೆ. ಇದೆಲ್ಲ ಬೆಳವಣಿಗೆ ನಡುವೆ ಕೆಲ ದಿನಗಳ ಹಿಂದೆ ಮುಗಳಖೋಡ ಪೊಲೀಸರಿಗೆ ಖಣದಾಳ ಗ್ರಾಮದಿಂದ ಅದೊಬ್ಬ ಮೂಕ ಅರ್ಜಿಯನ್ನ ಬರೆದಿರುತ್ತಾನೆ. ಗ್ರಾಮದಲ್ಲಿ ವಾಸುದೇವ ನಾಯಕ್ ಎಂಬಾತನ ಉಪಟಳ ಹೆಚ್ಚಾಗಿ ಆತ ಕೆಲವರನ್ನ ಕಿಡ್ನಾಪ್ ಮಾಡಿ ಹಣ ಕಸಿದುಕೊಂಡು ಬ್ಲ್ಯಾಕ್ ಮೇಲ್ ಮಾಡ್ತಿದ್ದಾನೆ ಅನ್ನೋದನ್ನ ಆ ಅರ್ಜಿಯಲ್ಲಿ ಬರೆದಿರುತ್ತಾರೆ. ಯಾವಾಗ ಈ ಮೂಕ ಅರ್ಜಿ ಪೊಲೀಸರ ಕೈ ಸೇರುತ್ತೋ ಕೂಡಲೇ ಅಲರ್ಟ್ ಆದ ಪೊಲೀಸರು ವಾಸುದೇವ ನಾಯಕ್ ಎಂಬಾತನಿಗಾಗಿ ತೀವ್ರ ಶೋಧ ಆರಂಭಿಸುತ್ತಾರೆ. ಕೆಲವೇ ದಿನಗಳಲ್ಲಿ ಆತನನ್ನ ಪತ್ತೆ ಹಚ್ಚಿ ಠಾಣೆಗೆ ಕರೆದುಕೊಂಡು ಬಂದು ಪೊಲೀಸ್​ ಭಾಷೆಯಲ್ಲಿ ಮಾತಾಡಿಸುತ್ತಾರೆ. ಈ ವೇಳೆ ಹಣಕ್ಕಾಗಿ ತಾನೇ ಜೆಸಿಬಿ ಕದ್ದಿದ್ದು ಅನ್ನೋದನ್ನ ವಾಸುದೇವ ನಾಯಕ್ ಒಪ್ಪಿಕೊಳ್ತಾನೆ.

ಹೀಗೆ ಒಂದು ಕಡೆ ಜೆಸಿಬಿ ಕದ್ದಿದ್ದನ ಕಕ್ಕಿದ್ದ ಇತ ಇನ್ನೊಂದು ವಿಚಾರವನ್ನ ಬಾಯಿ ಬಿಡ್ತಾನೆ ಅದನ್ನ ಕೇಳಿದ ಪೊಲೀಸರು ಕೂಡ ಒಂದು ಕ್ಷಣ ದಂಗಾಗ್ತಾರೆ. ಬರೀ ಜೆಸಿಬಿ ಕಳ್ಳತನ ಪ್ರಕರಣದಲ್ಲಿ ಸಿಕ್ಕಿದ್ದ ಈ ಪಾಪಿ ವಾಸುದೇವ ನಾಯಕ್ ಮಾಡಬಾರದ ಕೆಲಸಗಳನ್ನ ಮಾಡಿ ಸಮಾಜದ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತಿದ್ದದ್ದೂ ಅಂದು ಬೆಳಕಿಗೆ ಬರುತ್ತೆ. ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಅದೊಂದು ಕಿಡ್ನಾಪ್ ಮತ್ತು ಮರ್ಡರ್ ವಿಚಾರ ಕೂಡ ಹೊರ ಬರುತ್ತೆ. ಅಷ್ಟೇ ಅಲ್ಲದೇ ಈ ಪಾಪಿ ಮೇಲೆ ಸುಮಾರು ಇಪ್ಪತ್ತು ಪ್ರಕರಣಗಳಿದ್ದು ಬಾಗಲಕೋಟೆ ಸೇರಿದಂತೆ ಬೆಳಗಾವಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಇತ ವಾಂಟೆಡ್ ಕೂಡ ಆಗಿದ್ದನು.

ಗ್ರಾಮದ ರೈತ ಕುಟುಂಬವನ್ನೇ ಬಲಿ ತೆಗೆದುಕೊಂಡ ಗ್ಯಾಂಗ್​

ವಾಸುದೇವ ನಾಯಕ್​ನ ಹಿನ್ನೆಲೆ ಕೆದಕುತ್ತಾ ವಿಚಾರಣೆ ನಡೆಸಿದ ಪೊಲೀಸರಿಗೆ ಖಣದಾಳ ಗ್ರಾಮದಲ್ಲಿ ಅದೊಂದು ರೈತ ಕುಟುಂವನ್ನೇ ಹಿಂಡಿ ಹಿಪ್ಪೆ ಮಾಡಿ ಕೊಡಬಾರದ ಕಷ್ಟ ಕೊಟ್ಟು ದೌರ್ಜನ್ಯ ಮೆರೆದಿದ್ದು ಕೂಡ ಬೆಳಕಿಗೆ ಬರುತ್ತೆ. ಹೌದು ಖಣದಾಳ ಗ್ರಾಮದ ನಿವಾಸಿ 71ವರ್ಷದ ಭೂಪಾಲ್ ಆಜೂರೆ ಎಂಬುವವರ ಕುಟುಂಬದ ಮೇಲೆ ಈ ಪಾಪಿಯ ಕಣ್ಣು ಬಿದ್ದು ಇನ್ನಿಲ್ಲದಂತೆ ಆ ಕುಟುಂಬವನ್ನ ಪೀಡಿಸಿ ಇದೀಗ ಬೀದಿಗೆ ತಂದು ನಿಲ್ಲಿಸಿದ್ದಾನೆ ಈ ವಾಸುದೇವ ನಾಯಕ್. ಭೂಪಾಲ್ ಆಜೂರೆಗೆ ಎರಡು ಮಕ್ಕಳಿದ್ದು ಅದರಲ್ಲಿ ಚಿಕ್ಕ ಮಗ ಬಾಳಪ್ಪನನ್ನ ರೌಡಿ ಈ ವಾಸುದೇವ ನಾಯಕ್ ತನ್ನ ಪಟಾಲಂ ಜತೆಗೆ 2022ರ ಆಗಷ್ಟ್ 18ರಂದು ಮಧ್ಯಾಹ್ನದ ವೇಳೆ ಕಿಡ್ನಾಪ್ ಮಾಡಿರುತ್ತಾನೆ. ಹೀಗೆ ಕಿಡ್ನಾಪ್ ಮಾಡಿಕೊಂಡು ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿದ್ದ ಈತ ಅವರ ಕುಟುಂಬಸ್ಥರಿಗೆ ಕರೆ ಮಾಡಿ 50 ಲಕ್ಷ ಹಣಕ್ಕೆ ಭೇಡಿಕೆ ಇಟ್ಟಿದ್ದ. ಈ ವೇಳೆ ಆತನಿಗೆ ಹೆದರಿದ ಕುಟುಂಬಸ್ಥರು ಬಾಳಪ್ಪನ ಪಾಲಿಗೆ ಬಂದಿದ್ದ ಆಸ್ತಿ ಪೈಕಿ ಒಂದೂವರೆ ಎಕರೆ ಜಮೀನು ಮಾರಾಟ ಮಾಡಿ ಅದ್ರಲ್ಲಿ ಮೂವತ್ತು ಲಕ್ಷ ಹಣ ನೀಡ್ತಾರೆ. ಬಳಿಕ ಆರೋಪಿ ವಾಸುದೇವ ನಾಯಕ್ ಬಾಳಪ್ಪನ ತಂದೆ ಭೂಪಾಲ್ ಗೆ ಕರೆ ಮಾಡಿ ನಿಮ್ಮ ಮಗ ಕಲ್ಲು ಎಸೆದು ಓಡಿ ಹೋಗಿದ್ದಾನೆ ಅಂತಾ ಹೇಳಿ ಮತ್ತೆ ಆತ ಊರಿಗೆ ವಾಪಾಸ್ ಆಗ್ತಾನೆ. ಹೀಗೆ ಊರಿಗೆ ಬಂದ ಪಾಪಿ ಪೊಲೀಸರಿಗೆ ಈ ವಿಚಾರ ತಿಳಿಸಿದ್ರೇ ನಿಮ್ಮನ್ನ ಜೀವ ಸಮೇತ ಉಳಿಸುವುದಿಲ್ಲ ಎಂದು ಕುಟುಂಬಸ್ಥರಿಗೆ ಜೀವ ಬೇದರಿಕೆ ಹಾಕುತ್ತಾನೆ. ಇದರಿಂದ ಹೆದರಿದ ಕುಟುಂಬಸ್ಥರು ವಿಚಾರವನ್ನ ಪೊಲೀಸರಿಗೆ ತಿಳಿಸುವುದಿಲ್ಲ.

ಇದನ್ನೂ ಓದಿ:ಐತಿಹಾಸಿಕ ಸಿದ್ದಾರೂಢ ರಥೋತ್ಸವ ಜಾತ್ರೆ ದಿನವೇ ಮನಬಂದಂತೆ ಕೊಚ್ಚಿ ಯುವಕನ ಕೊಲೆ

ಇದಾದ ಬಳಿಕ ಕಿಡ್ನಾಪ್ ಆಗಿದ್ದ ಬಾಳಪ್ಪನ ತಂದೆ ಭೂಪಾಲ್ ಆಜೂರೆಯನ್ನ ಸೆ.23, 2022ರಲ್ಲಿ ಅಪಹರಣ ಮಾಡುತ್ತಾನೆ. ಹೀಗೆ ಕಿಡ್ನಾಪ್ ಮಾಡಿಕೊಂಡು ಹೋದ ಬಳಿಕ ಮತ್ತೆ ಕುಟುಂಬಸ್ಥರಿಗೆ ಕರೆ ಮಾಡಿ ಬಾಳಪ್ಪ ನನಗೆ ಕೊಡಬೇಕಿದ್ದ 30ಲಕ್ಷ ಹಣವನ್ನ ಕೊಟ್ಟು ಭೂಪಾಲ್ ನನ್ನ ಬಿಡಿಸಿಕೊಂಡು ಹೋಗಿ ಅಂತಾ ಹೆದರಿಸುತ್ತಾನೆ. ಆಗ ಭಯಗೊಂಡ ಕುಟುಂಬಸ್ಥರು ಗ್ರಾಮದ ಮುಖಂಡರ ಬಳಿ ಹೋಗ ಪರಿಸ್ಥಿತಿಯನ್ನ ಹೇಳ್ತಾರೆ ಆಗ ಹಿರಿಯರೂ ಕೂಡ ಆತನಿಗೆ ಕೊಡಬೇಕಾದ ಹಣ ಕೊಟ್ಟು ಭೂಪಾಲ್ ನನ್ನ ಬಿಡಿಸಿಕೊಂಡು ಬನ್ನಿ ಅಂತಾ ಹೇಳ್ತಾರೆ. ಆಗ ಮತ್ತೆ ಹದಿನೇಳು ಲಕ್ಷ ಹಣ ಕೊಟ್ಟು ವೃದ್ದ ಭೂಪಾಲ್ ನನ್ನ ಬಿಡಿಸಿಕೊಂಡು ಬಂದಿರುತ್ತಾರೆ ಕುಟುಂಬಸ್ಥರು.

ಇಷ್ಟೇಲ್ಲಾ ಆದ್ರು ಆಗಾಗ ಭೂಪಾಲ್ ಗೆ ಜೀವ ಬೆದರಿಕೆ ಹಾಕುವುದು ಇನ್ನೂ 15ಲಕ್ಷ ಹಣ ಕೊಡುವಂತೆ ಪೀಡಿಸುತ್ತಾ ಇರ್ತಾನೆ ವಾಸುದೇವ ನಾಯಕ್. ಆದ್ರೂ ತಮ್ಮ ಪಾಡಿಗೆ ತಾವಿದ್ದ ಕುಟುಂಬಸ್ಥರು ಬಾಳಪ್ಪನನ್ನ ಹುಡುಕುವ ಕೆಲಸಕ್ಕೂ ಹೋಗಿರುವುದಿಲ್ಲ.  ವಾಸುದೇವ್ ಗೆ ಅಂಜಿ ಊರುಬಿಟ್ಟಿದ್ದಾನೆ. ಎಲ್ಲೋ ಇದ್ರೂ ಜೀವಂತ ಆದ್ರೂ ಇದಾನೆ ಅಂದುಕೊಂಡು ಬಾಳಪ್ಪನ ಹೆಂಡತಿ ಎರಡು ಮಕ್ಕಳನ್ನ ಸಾಕಿಕೊಂಡು ಜೀವನ ಕಟ್ಟಿಕೊಳ್ತಿರುತ್ತಾಳೆ. ಮನೆ ಕಟ್ಟಬೇಕು ಅಂತಾ ಸಿದ್ದತೆ ಮಾಡಿಕೊಂಡು ಈಗಾಗಲೇ ಮನೆ ಕೆಲಸ ಆರಂಭ ಮಾಡಿದ್ದ ಬಾಳಪ್ಪ ಇನ್ನೂ ಮನೆ ಅರ್ಧ ಮಾಡಿದ್ದು ಅದೇ ಮನೆಯಲ್ಲಿ ಎರಡು ಮಕ್ಕಳನ್ನ ಕರೆದುಕೊಂಡು ಬಾಳಪ್ಪನ ಹೆಂಡತಿ ಸವಿತಾ ಗಂಡನ ಬರುವಿಕೆಗಾಗಿ ನಿತ್ಯವೂ ಕಣ್ಣೀರಿಡ್ತಾ ಕಾಯುತ್ತಿರುತ್ತಾಳೆ.

ಇದನ್ನೂ ಓದಿ:UP Rasgulla Crime: ಆರತಕ್ಷತೆ ಕಾರ್ಯಕ್ರಮದಲ್ಲಿ ರಸಗುಲ್ಲಕ್ಕಾಗಿ ಹೊಡೆದಾಟ, ವಧುವಿನ ಸಂಬಂಧಿ ಕೊಲೆ

ಈ ಎಲ್ಲ ವಿಚಾರವನ್ನ ಆರೋಪಿ ವಾಸುದೇವ್ ಪೊಲೀಸರ ಮುಂದೆ ಬಾಯಿಬಿಟ್ಟ ಬಳಿಕ ಮೊದಲು ಕಿಡ್ನಾಪ್ ಮಾಡಿದ್ದ ಬಾಳಪ್ಪ ಎನಾದ ಎಂದು ಕೇಳಿದಾಗ, ಈ ವೇಳೆ ಎಲ್ಲ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಆತನನ್ನ ಮಹಾರಾಷ್ಟ್ರದ ವಿಶಾಲಗಡ ಕಾಡಿನಲ್ಲಿ ಕೊಲೆ ಮಾಡಿ ಎಸೆದು ಬಂದಿದ್ದೇವೆ ಅಂತಾ ಸತ್ಯ ಬಾಯಿ ಬಿಟ್ಟಿದ್ದಾನೆ. ಇದನ್ನ ಕೇಳಿ ಶಾಕ್ ಆದ ಪೊಲೀಸರು ಕೂಡಲೇ ಬಾಳಪ್ಪನ ಕುಟುಂಬಸ್ಥರನ್ನ ಕರೆಯಿಸಿ ಅವರ ಕಡೆಯಿಂದ ಒಂದು ಕಿಡ್ನಾಪ್ ಮತ್ತೊಂದು ಕೊಲೆ ಪ್ರಕರಣ ಎರಡನ್ನೂ ದಾಖಲಿಸಿಕೊಂಡು ತನಿಖೆ ಆರಂಭಿಸುತ್ತಾರೆ. ಒಟ್ಟು ಹದಿಮೂರು ಜನರ ಮೇಲೆ ಕೇಸ್ ದಾಖಲಿಸಿಕೊಂಡು ಪ್ರಕರಣದ ಬೆನ್ನು ಬಿದ್ದಿರುವ ಪೊಲೀಸರು ಇದೀಗ ಕೊಲೆಯಾದ ಬಾಳಪ್ಪನ ಶವಕ್ಕಾಗಿ ಶೋಧ ಕಾರ್ಯ ನಿರಂತರವಾಗಿ ನಡೆಸಿದ್ದಾರೆ. ಕಿಡ್ನಾಪ್ ವಿಚಾರದಲ್ಲಿ ಭೂಪಾಲ್ ಕುಟುಂಬ ಒಂದೂವರೆ ಎಕರೆ ಜಮೀನು ಹಾಗೂ ಈ ವರೆಗೂ ಸುಮಾರು ಐವತ್ತು ಲಕ್ಷ ಹಣ ಕಳೆದುಕೊಂಡು ಬೀದಿಗೆ ಬಂದಿದೆ.

ಇನ್ನೂ ಪ್ರಕರಣದಲ್ಲಿ ಭಾಗಿಯಾದ ವಾಸುದೇವ ನಾಯಕ್ ಜೊತೆಗೆ ಭುಜಂಗ ಜಾಧವ್, ಈರಯ್ಯಾ ಹಿರೇಮಠ, ಶಿವಾನಂದ ಸಲಖಾನ್ ಬಂಧಿಸಿ ಜೈಲಿಗಟ್ಟಿದ್ದಾರೆ. ಇನ್ನೂ ಭಾಗಿಯಾದವರು ತಲೆ ಮರೆಸಿಕೊಂಡಿದ್ದು ಅವರನ್ನೂ ಹುಡುಕುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ. ಇನ್ನೂ ಬಂಧಿತರಿಂದ ಎರಡು ಕಾರ್, ತಲ್ವಾರ್, ನಾಲ್ಕು ಲಕ್ಷ ಕ್ಯಾಶ್, ಚಾಕು, ಒಂದು ಕಪ್ಪು ಕನ್ನಡಕ ಜಪ್ತಿ ಮಾಡಿಕೊಂಡಿದ್ದಾರೆ. ಸ್ಥಳೀಯ ಜನರಿಗೆ ಆತ್ಮವಿಶ್ವಾಸ ಭಯ ಹೋಗಲಿ ಎಂಬ ಕಾರಣಕ್ಕೆ ಪ್ರಕರಣವನ್ನ ಭೇದಿಸಿ ಅದೇ ಠಾಣೆಯಲ್ಲೇ ಎಸ್.ಪಿ ಡಾ.ಸಂಜೀವ ಪಾಟೀಲ್ ಭೇಟಿ ನೀಡಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮಸ್ಥರಲ್ಲಿ ದೈರ್ಯ ತುಂಬುವ ಕೆಲಸ ಮಾಡಿದ್ದು ಯಾರೂ ಭಯ ಪಡುವ ಅಗತ್ಯವಿಲ್ಲ. ಕಾನೂನಿಗಿಂತ ಯಾರು ದೊಡ್ಡವರಲ್ಲಾ ಎನೇ ಇದ್ರೂ ಪೊಲೀಸರಿಗೆ ವಿಚಾರ ತಿಳಿಸಿ ಇಲ್ಲವಾದ್ರೇ ನನಗೆ ನೇರವಾಗಿ ಮಾಹಿತಿ ನೀಡಿ ಎಂದು ಸಾರ್ವಜನಿಕರಲ್ಲಿ ಎಸ್.ಪಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ದೊಡ್ಡಬಳ್ಳಾಪುರ: ಕೊಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳ ಮೇಲೆ ಪೊಲೀಸ್​​ ಫೈರಿಂಗ್​

ಸದ್ಯ ಕೇಸ್ ನಲ್ಲಿ ಭಾಗಿಯಾದ ಇನ್ನಷ್ಟು ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕಿಡ್ನಾಪ್ ಆಗಿ ಕೊಲೆಯಾದ್ರೂ ಕೂಡ ಆ ಕುಟುಂಬಸ್ಥರು ರೌಡಿಗಳ ಭಯಕ್ಕೆ ಕೇಸ್ ನೀಡದೇ ಸುಮ್ಮನಿದ್ರೇ ಇನ್ನೂ ಅನೇಕರು ರೌಡಿಗಳ ಉಸಾಬರಿ ಯಾಕೆ ಅಂತಾ ಸುಮ್ಮನಿದ್ದರು. ಆದರೆ ಒಂದು ಜೆಸಿಬಿ ಕಳ್ಳತನದಿಂದಾಗಿ ಆರು ತಿಂಗಳ ಹಿಂದೆ ನಡೆದು ಮುಚ್ಚಿ ಹೋಗಿದ್ದ ಕೇಸ್ ಇದೀಗ ಬಯಲಿಗೆ ಬಂದಿದ್ದು. ಹಣ ಕೊಟ್ಟು ಮನೆಯ ಮಗನನ್ನ ಕಳೆದುಕೊಂಡ ಕುಟುಂಬ ಈಗಲೂ ಭಯದಲ್ಲಿ ಬದುಕುತ್ತಿದ್ದು ಆ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮತ್ತು ಅವರು ಕಳೆದುಕೊಂಡು ಹಣ ವಾಪಾಸ್ ಕೊಡಿಸುವ ಕೆಲಸ ಪೊಲೀಸರು ಮಾಡಬೇಕಾಗಿದೆ.

ವರದಿ: ಸಹದೇವ ಮಾನೆ ಟಿವಿ9 ಬೆಳಗಾವಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:53 am, Fri, 24 February 23

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು