ಟ್ರಾಫಿಕ್​ ಪೊಲೀಸರೊಬ್ಬರಿಗೆ ಚಾಕುವಿನಿಂದ ಇರಿದು 63 ಸಾವಿರ ರೂ. ದೋಚಿದ್ದ ಮೂವರ ಬಂಧನ

ಟ್ರಾಫಿಕ್ ಪೊಲೀಸರೊಬ್ಬರಿಗೆ ಚಾಕುವಿನಿಂದ ಇರಿದು 63 ಸಾವಿರ ರೂ. ದೋಚಿ ಪರಾರಿಯಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಟ್ರಾಫಿಕ್​ ಪೊಲೀಸರೊಬ್ಬರಿಗೆ ಚಾಕುವಿನಿಂದ ಇರಿದು 63 ಸಾವಿರ ರೂ. ದೋಚಿದ್ದ ಮೂವರ ಬಂಧನ
ಪೊಲೀಸ್( ಸಾಂದರ್ಭಿಕ ಚಿತ್ರ)Image Credit source: NDTV
Follow us
|

Updated on: Apr 02, 2023 | 8:57 AM

ಟ್ರಾಫಿಕ್ ಪೊಲೀಸರೊಬ್ಬರಿಗೆ ಚಾಕುವಿನಿಂದ ಇರಿದು 63 ಸಾವಿರ ರೂ. ದೋಚಿ ಪರಾರಿಯಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ಸಿಗ್ನೇಚರ್ ಸೇತುವೆ ಬಳಿಯ ಟ್ರಾಫಿಕ್ ಸರ್ಕಲ್ ಬಳಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಗೆ ಚಾಕುವಿನಿಂದ ಇರಿದು ಹಣವನ್ನು ದೋಚಿದ್ದರು. ಬಂಧಿತ ಆರೋಪಿಗಳನ್ನು ಆರಿಫ್ ಅಲಿಯಾಸ್ ಖುಜ್ಲಿ, ಅಬಿದ್ ಅಲಿಯಾಸ್ ಕಲ್ಲುವ ಮತ್ತು ಅನುಪ್ ಅಲಿಯಾಸ್ ಜುಲ್ಫಿ ಎಂದು ಗುರುತಿಸಲಾಗಿದೆ. ಆರಿಫ್ ಮತ್ತು ಅಬಿದ್ ಅವರು ಅನುಪ್‌ಗೆ ಫೋನ್‌ಗಳನ್ನು ಮಾರಾಟ ಮಾಡಿದ್ದಾರೆ ಮತ್ತು ಇ-ವ್ಯಾಲೆಟ್, ಎಟಿಎಂ ಕಾರ್ಡ್ ಮತ್ತು ಸಿಮ್ ಕಾರ್ಡ್ ಬಳಸಿ ದೂರುದಾರ ಎಚ್‌ಸಿ ಮೋಹಿತ್ ಅವರ ಬ್ಯಾಂಕ್ ಖಾತೆಯಿಂದ 63,000 ಸಾವಿರ ದೋಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ದೆಹಲಿಯಲ್ಲಿ ಹಾಡಹಗಲೇ ಗುಂಡಿಕ್ಕಿ ವಕೀಲನ ಬರ್ಬರ ಕೊಲೆ; ಮುಂದುವರಿದ ತನಿಖೆ

6 ಟಾಪ್ ಎಂಡ್ ಮೊಬೈಲ್ ಫೋನ್ ಗಳು, 4 ಎಟಿಎಂ ಕಾರ್ಡ್ ಗಳು ಹಾಗೂ ಪೊಲೀಸರ ವ್ಯಾಲೆಟ್ ನಿಂದ ಡ್ರಾ ಮಾಡಿದ್ದ 60,000 ರೂ. ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಎಚ್‌ಸಿ ಮೋಹಿತ್ ಮಾರ್ಚ್ 29 ರಂದು ಕರ್ತವ್ಯ ಮುಗಿಸಿ ಹಿಂತಿರುಗುತ್ತಿದ್ದಾಗ ಸಿಗ್ನೇಚರ್ ಸೇತುವೆಯ ಘಟನೆ ನಡೆದಿತ್ತು.

ಚಾಕುವಿನಿಂದ ಇರಿದು ಆತನ ಬಳಿಯಿದ್ದ ಎಟಿಎಂ ಕಾರ್ಡ್, ಐ-ಕಾರ್ಡ್, 6,000 ರೂ. ಹಾಗೂ ಮೊಬೈಲ್ ಫೋನ್ ದೋಚಿದ್ದರು. ಆರೋಪಿ ಅನುಪ್ ಅಲಿಯಾಸ್ ಜುಲ್ಫಿ ಗ್ಯಾಂಗ್‌ನ ರಿಂಗ್ ಲೀಡರ್ ಆಗಿದ್ದು, ಉಸ್ಮಾನ್‌ಪುರ ಬಳಿಯ ಪುಷ್ಟ, ಖಜೂರಿ ಮತ್ತು ಸಿಗ್ನೇಚರ್ ಬ್ರಿಡ್ಜ್ ಪ್ರದೇಶದಲ್ಲಿ ಡಾರ್ಕ್ ಸ್ಪಾಟ್‌ಗಳಲ್ಲಿ ಒಂಟಿ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ದರೋಡೆ ನಡೆಸುತ್ತಿದ್ದರು.

ದೆಹಲಿ ಪೊಲೀಸ್ ಸಿಬ್ಬಂದಿ ಮಾಹಿತಿ ಮೇರೆಗೆ ಆರೋಪಿಗಳ ಹುಡುಕಾಟ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರಿಫ್ ಈ ಹಿಂದೆ ಇದೇ ರೀತಿಯ ದರೋಡೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ 25 ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ, ಅನುಪ್ 37 ದರೋಡೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿದುಬಂದಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ