ದೆಹಲಿಯಲ್ಲಿ ಹಾಡಹಗಲೇ ಗುಂಡಿಕ್ಕಿ ವಕೀಲನ ಬರ್ಬರ ಕೊಲೆ; ಮುಂದುವರಿದ ತನಿಖೆ

ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕಾರಿನೊಳಗೆ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ತನಿಖೆ ನಡೆಯುತ್ತಿದ್ದು, ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುವ ಮೂಲಕ ದಾಳಿಕೋರರನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ದೆಹಲಿಯಲ್ಲಿ ಹಾಡಹಗಲೇ ಗುಂಡಿಕ್ಕಿ ವಕೀಲನ ಬರ್ಬರ ಕೊಲೆ; ಮುಂದುವರಿದ ತನಿಖೆ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Apr 01, 2023 | 8:48 PM

ದೆಹಲಿಯ (Delhi) ದ್ವಾರಕಾ-1 (Dwarka) ಪ್ರದೇಶದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ವಕೀಲರೊಬ್ಬರನ್ನು ಗುಂಡಿಕ್ಕಿ ಕೊಂದ (Murder) ಘಟನೆ ಶನಿವಾರ ನಡೆಸಿದೆ. ಗುಂಡಿಗೆ ಬಲಿಯಾದ ವ್ಯಕ್ತಿಯನ್ನು ದ್ವಾರಕಾದ ಸೆಕ್ಟರ್ 12 ನಿವಾಸಿ, ವಕೀಲ ವೀರೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕಾರಿನೊಳಗೆ ಹತ್ತುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ತನಿಖೆ ನಡೆಯುತ್ತಿದ್ದು, ಸಮೀಪದ ಸಿಸಿಟಿವಿ ದೃಶ್ಯ ಸ್ಕ್ಯಾನ್ ಮಾಡುವ ಮೂಲಕ ದಾಳಿಕೋರರನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ವೈಯಕ್ತಿಕ ದ್ವೇಷವೇ ಅಪರಾಧಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಶಂಕಿಸಿದ್ದಾರೆ.

ಪೊಲೀಸರು ಹೇಳಿದ್ದೇನು?

ದಾಳಿಕೋರರು ಬೈಕ್‌ನಲ್ಲಿ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ದುಷ್ಕರ್ಮಿಗಳು ವಕೀಲ ವೀರೇಂದ್ರ ಕುಮಾರ್ ನರ್ವಾಲ್ ಅವರ ಎರ್ಟಿಗಾ ಕಾರಿನಲ್ಲಿದ್ದಾಗ ಗುಂಡು ಹಾರಿಸಿದ್ದಾರೆ. ಇದಾದ ಕೂಡಲೇ ಶೂಟರ್ ಪರಾರಿಯಾಗಿದ್ದು, ಹುಡುಕಾಟ ಆರಂಭಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Chikkaballapur: ಫೋಟೋ ಶೂಟ್​​ ಮಾಡಲು ಹೋಗಿ 3 ವಿದ್ಯಾರ್ಥಿಗಳು ನೀರು ಪಾಲು: ಚಿಕ್ಕಬಳ್ಳಾಪುರದಲ್ಲಿ ಹೃದಯ ವಿದ್ರಾವಕ ಘಟನೆ

ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ವಕೀಲ ವೀರೇಂದ್ರ ಕುಮಾರ್ ಅವರ ಮೇಲೆ ಈ ಹಿಂದೆಯೂ ಹಲ್ಲೆ ನಡೆದಿತ್ತು, ವೈಯಕ್ತಿಕ ದ್ವೇಷದ ಕಾರಣ ಅವರನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಸದ್ಯ ಪೊಲೀಸರು ಕೊಲೆಗೆ ಯಾವುದೇ ಕಾರಣ ನೀಡಿಲ್ಲ ಆದರೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಅದೇ ವೇಳೆ ವೀರೇಂದ್ರ ಕುಟುಂಬದವರಿಂದ ಏನನ್ನೂ ಹೇಳಿಲ್ಲ. ಹಗಲು ಹೊತ್ತಿನಲ್ಲಿ ಕೊಲೆಯಾದ ಘಟನೆ ಇದೇ ಮೊದಲಲ್ಲ. ಇತ್ತೀಚೆಗೆ ಎಎಸ್‌ಐ ಶಂಭು ದಯಾಳ್ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:28 pm, Sat, 1 April 23