ಉದ್ಯಮಿಯ ಮನೆಗೆ ನುಗ್ಗಿ ಕುಟುಂಬವನ್ನು ಒತ್ತೆಯಾಳಾಗಿರಿಸಿ 1.3 ಕೋಟಿ ರೂ. ದೋಚಿದ ಶಸ್ತ್ರಸಜ್ಜಿತ ದರೋಡೆಕೋರರು
ಶಸ್ತ್ರಸಜ್ಜಿತ ದರೋಡೆಕೋರರು ಉದ್ಯಮಿಯ ಮನೆಗೆ ನುಗ್ಗಿ ಕುಟುಂಬದವರನ್ನು ಒತ್ತೆಯಾಳಾಗಿರಿಸಿಕೊಂಡು 1.3 ಕೋಟಿ ರೂ. ದೋಚಿ ಪರಾರಿಯಾಗಿದ್ದಾರೆ.
ಶಸ್ತ್ರಸಜ್ಜಿತ ದರೋಡೆಕೋರರು ಉದ್ಯಮಿಯ ಮನೆಗೆ ನುಗ್ಗಿ ಕುಟುಂಬದವರನ್ನು ಒತ್ತೆಯಾಳಾಗಿರಿಸಿಕೊಂಡು 1.3 ಕೋಟಿ ರೂ. ದೋಚಿ ಪರಾರಿಯಾಗಿದ್ದಾರೆ. ಅಷ್ಟೇ ಅಲ್ಲದೆ 2 ಕೆಜಿ ಚಿನ್ನವನ್ನು ಕೂಡ ಕದ್ದೊಯ್ದಿದ್ದಾರೆ, ಭಾನುವಾರ ಬೆಳಗ್ಗೆ ಮನೆಯ ಕಿಟಕಿ ಗ್ರಿಲ್ಗಳನ್ನು ಕತ್ತರಿಸಿ ಬಳಿಕ ಮನೆಗೆ ನುಗ್ಗಿದ್ದಾರೆ. ಅಶೋಕ್ ವಿಹಾರ್ 2 ನೇ ಹಂತದಲ್ಲಿ ವಾಸಿಸುವ ಉದ್ಯಮಿಯು ಪೇಪರ್ ವ್ಯಾಪಾರವನ್ನು ಹೊಂದಿದ್ದಾರೆ ಮತ್ತು ಅವರ ತಂದೆ ಗುತ್ತಿಗೆದಾರರಾಗಿದ್ದಾರೆ.
ಬಂದೂಕು ತೋರಿಸಿ ಕುಟುಂಬದ ಸದಸ್ಯರನ್ನು ರೂಮಿನಲ್ಲಿ ಕೂಡಹಾಕಿ, ಬಳಿಕ ಚಾಕು ಹಾಗೂ ಗನ್ ಹಿಡಿದು ಚಿನ್ನಾಭರಣ ಹಣವನ್ನು ಎಲ್ಲಿ ಇಟ್ಟಿದ್ದಾರೆ ಎಂದು ತೋರಿಸುವಂತೆ ಒತ್ತಾಯಿಸಿದರು. ಮಧ್ಯಾಹ್ನ 1.30 ರ ವೇಳೆಗೆ ದರೋಡೆಕೋರರು ಮನೆಗೆ ನುಗ್ಗಿದ್ದಾರೆ. ಕುಟುಂಬದವರನ್ನು ಸುಮಾರು 1 ಗಂಟೆಗಳ ಕಾಲ ಒತ್ತೆಯಾಳಾಗಿರಿಸಿಕೊಂಡಿದ್ದರು.
ಮತ್ತಷ್ಟು ಓದಿ: ವಿಜಯಪುರ ನಗರದಲ್ಲಿ ಗುಂಡಿಕ್ಕಿ ಕಾರ್ಪೊರೇಟರ್ ಪತಿಯ ಹತ್ಯೆ; ಸ್ಥಳದಲ್ಲಿ ಭಯದ ವಾತಾವರಣ
ದರೋಡೆಕೋರರು ಮನೆಯಿಂದ ಹೋಗುವ ಮುನ್ನ ಒಂದೊಮ್ಮೆ ವಿಷಯ ಪೊಲೀಸರಿಗೆ ತಿಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಆವರಣದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳು ಶಂಕಿತರು 2.45 ರ ಸುಮಾರಿಗೆ ಮನೆಯಿಂದ ಹೊರಹೋಗುವುದನ್ನು ತೋರಿಸಿದೆ.
ಅಪರಾಧ ಎಸಗಿದ ನಂತರ ಆರೋಪಿಗಳು ರೈಲು ನಿಲ್ದಾಣದಿಂದ ಪರಾರಿಯಾಗಿರಬಹುದು ಎಂದು ಹೇಳಲಾಗಿದೆ. ತನಿಖಾಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ, ಎರಡು ಬ್ಯಾಗ್‌ಗಳನ್ನು ಹೊತ್ತಿರುವ ಪುರುಷರ ಗುಂಪು ರೈಲು ಹಳಿಗಳ ಮೇಲೆ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ