ಆಗ್ರಾದ ಗೆಸ್ಟ್ಹೌಸ್ನಲ್ಲಿ ದೆಹಲಿಯ ನರ್ಸ್ ಒಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಸುಮ್ ಕುಮಾರಿ ಆಗ್ರಾ ಮೂಲದವಳಾದರೂ ದೆಹಲಿಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಕುಸುಮ್ ಕುಮಾರಿ ಆಗ್ರಾದಲ್ಲಿ ತನ್ನ ಪೋಷಕರನ್ನು ಭೇಟಿಯಾಗಲು ಬಂದಿದ್ದರು. ಅವರನ್ನು ಭೇಟಿಯಾದ ಬಳಿಕ ಅವರು ಎಲ್ಲಿಗೆ ಹೋಗುತ್ತಿದ್ದಾರೆಂದಯ ಯಾರಿಗೂ ತಿಳಿಸದೆ ಮನೆಯಿಂದ ಹೊರಟುಹೋಗಿದ್ದಳು. ಕೆಲವು ಗಂಟೆಗಳ ನಂತರ, ಕಮಲಾ ನಗರ ಪ್ರದೇಶದಲ್ಲಿರುವ ತೋರನ್ ಅತಿಥಿ ಗೃಹದ ಕೊಠಡಿಯೊಳಗೆ ಆಕೆ ಶವವಾಗಿ ಪತ್ತೆಯಾಗಿದ್ದಾಳೆ.
ಮಹಿಳೆಯೊಬ್ಬರು ತಮ್ಮ ರೈಲು ತಡವಾಗಿದ್ದರಿಂದ ಕೆಲವು ಗಂಟೆಗಳ ಕಾಲ ವಿಶ್ರಾಂತಿ ಬೇಕು ಎಂದು ಹೇಳಿ ಕೆಲವು ಗಂಟೆಗಳ ಕಾಲ ಕೊಠಡಿಯನ್ನು ಕಾಯ್ದಿರಿಸಿದ್ದರು ಎಂದು ಅತಿಥಿ ಗೃಹದ ಸಿಬ್ಬಂದಿಯಿಂದ ಪೊಲೀಸರು ಮಾಹಿತಿ ಪಡೆದಿದ್ದಾರೆ ಎಂದು ಸಿಂಗ್ ಹೇಳಿದರು.
ಚೆಕ್‌ಔಟ್ ಸಮಯ ಕಳೆದು ಹಲವು ಗಂಟೆಗಳಾದರೂ ಆಕೆ ಕೊಠಡಿಯಿಂದ ಹೊರಗೆ ಬರದ ಹಿನ್ನೆಲೆಯಲ್ಲಿ ಅತಿಥಿ ಗೃಹದ ವ್ಯವಸ್ಥಾಪಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಗ ಕುಸುಮ್ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪೊಲೀಸರಿಗೆ ಪತ್ತೆಯಾಗಿದ್ದಾರೆ. ಆಕೆಯ ಸಾವಿನ ಬಗ್ಗೆ ಆಕೆಯ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಆಕೆ ಅತಿಥಿ ಗೃಹದಲ್ಲಿ ಯಾರನ್ನಾದರೂ ಭೇಟಿಯಾಗಿದ್ದಾರಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕುಸುಮ್ ಅವರ ಪತಿ ಗಬ್ಬರ್ ದೆಹಲಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದು, ಆಕೆಯೊಂದಿಗೆ ಹೋಗಲು ಸಾಧ್ಯವಾಗದ ಕಾರಣ ಆಕೆ ಒಬ್ಬಳೇ ಆಗ್ರಾಕ್ಕೆ ಬಂದಿದ್ದರು ಎಂದು ಆಕೆಯ ಪೋಷಕರು ಹೇಳಿದ್ದಾರೆ.
ಮತ್ತಷ್ಟು ಓದಿ: ಬೆಂಗಳೂರು: ಮಲ್ಲೇಶ್ವರಂ ರೈಲ್ವೆ ಟ್ರ್ಯಾಕ್ ಬಳಿ ವ್ಯಕ್ತಿಯ ಶವ ಪತ್ತೆ
ಪ್ರಾಥಮಿಕ ತನಿಖೆಯ ಪ್ರಕಾರ, ಪೊಲೀಸರು ಪ್ರಕರಣವನ್ನು ಆತ್ಮಹತ್ಯೆ ಎಂದು ಪರಿಗಣಿಸುತ್ತಿದ್ದಾರೆ ಆದರೆ ಅತಿಥಿ ಗೃಹದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ