ಬೆಂಗಳೂರಲ್ಲಿ ಹದಗೆಟ್ಟಿದ್ಯಾ ಕಾನೂನು ಸುವ್ಯವಸ್ಥೆ; ಒಂದೇ ದಿನದಲ್ಲಿ ನಡೆಯಿತು ಬರೊಬ್ಬರಿ 5 ಹತ್ಯೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 13, 2023 | 8:46 AM

ಮಹಾನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ಯಾ ಎಂಬ ಪ್ರಶ್ನೆ ಮೂಡಿದೆ. ಹೌದು ಮಂಗಳವಾರ (ಜು.11) ಒಂದೇ ದಿನ ಬರೊಬ್ಬರಿ 5 ಕೊಲೆ ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಹತ್ಯೆ ಕೂಡ ಹಳೇ ದ್ವೇಷಕ್ಕೇ ನಡೆದಿದೆ.

ಬೆಂಗಳೂರಲ್ಲಿ ಹದಗೆಟ್ಟಿದ್ಯಾ ಕಾನೂನು ಸುವ್ಯವಸ್ಥೆ; ಒಂದೇ ದಿನದಲ್ಲಿ ನಡೆಯಿತು ಬರೊಬ್ಬರಿ 5 ಹತ್ಯೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಮಹಾನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ಯಾ ಎಂಬ ಪ್ರಶ್ನೆ ಮೂಡಿದೆ. ಹೌದು ಮಂಗಳವಾರ(Tuesday) (ಜು.11) ಒಂದೇ ದಿನ ಬರೊಬ್ಬರಿ 5 ಕೊಲೆ ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಹತ್ಯೆ(Murder) ಕೂಡ ಹಳೇ ದ್ವೇಷಕ್ಕೇ ನಡೆದಿದೆ. ಈ ಮೂಲಕ ರೌಡಿಶೀಟರ್ಸ್,ಅಪರಾಧ ಹಿನ್ನಲೆಯುಳ್ಳವರು ಮತ್ತೆ ಬಾಲ ಬಿಚ್ಚಿದ್ದಾರೆ. ಪೊಲೀಸರು ‘ಡಿಜಿಟಲೀಕರಣ’ವಾಗ್ತಿದ್ರೆ, ಇತ್ತ ಮಚ್ಚು ಲಾಂಗುಗಳು ಝಳಪಳಿಸುತ್ತಿವೆ. ಡಿಜಿಟಲ್ ಕ್ರೈಂಗಳ ಬಗ್ಗೆ ಪೊಲೀಸರು ಹೆಚ್ಚು ಗಮನ ಹರಿಸುತ್ತಿರುವ ಹಿನ್ನಲೆ ಬೇಸಿಕ್ ಪೊಲೀಸಿಂಗ್ ಕಡಿಮೆಯಾಗುತ್ತಿದೆ. ಆರೋಪಿಗಳು ಕಾನೂನಿನ ಭಯವಿಲ್ಲದೆ ಮಚ್ಚು ಲಾಂಗು ಹಿಡಿಯುತ್ತಿದ್ದಾರೆ. ಅದರಂತೆ ಮಂಗಳವಾರ 5 ಕೊಲೆಗಳು ನಡೆಯುವ ಮೂಲಕ ಕಾನೂನು ಸುವ್ಯವಸ್ಥೆಯ ಲೋಪ ಎದ್ದು ಕಾಣುತ್ತಿದೆ.

ಎಲ್ಲೆಲ್ಲಿ ನಡೆಯಿತು ಹತ್ಯೆ

ಹತ್ಯೆ – 1

ತಾರಿಕ್ ಎಂಬಾತನ ಕೊಲೆ ನಡೆದಿತ್ತು, ಈ ಕುರಿತು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹುಡುಗಿ ವಿಚಾರಕ್ಕೆ ಒಂದು ವರ್ಷದಿಂದ ಆರೋಪಿ ನ್ಯಾಮತ್ ಹಾಗು ತಾರಿಕ್ ಹಗೆ ಬೆಳೆಸಿಕೊಂಡಿದ್ದರು​. ಈ ಹಿನ್ನಲೆ ಕಿಡ್ನ್ಯಾಪ್ ಮಾಡಿ ತಾರೀಕ್ ಕೊಲೆ ಮಾಡಲಾಗಿದೆ.

ಹತ್ಯೆ – 2

ಉಪ್ಪಾರ ಪೇಟೆಯಲ್ಲಿ ಮುರಳಿ ಎಂಬಾತನ ಕೊಲೆಯಾಗಿತ್ತು. ರೋಹಿತ್ ಎಂಬಾತನಿಗೆ ವಂಡ್ರೆ ಎಂದು ರೇಗಿಸುತ್ತಿದ್ದ ಈ ಹಿನ್ನಲೆ ಹಲವು ತಿಂಗಳಿನಿಂದ ಅವಮಾನಪಡುತ್ತಿದ್ದ ರೋಹಿತ್, ಕೊನೆಗೆ ರಾಡ್​ನಿಂದ ಹೊಡೆದು ಕೊಲೆ ಮಾಡಿದ್ದ.

ಹತ್ಯೆ – 3

ಅಮೃತಹಳ್ಳಿ ಫಣೀಂದ್ರ ಹಾಗೂ ವಿನಯ್ ಡಬಲ್ ಮರ್ಡರ್ ಪ್ರಕರಣ. ಜಿ ನೆಟ್ ಕಂಪನಿ ಬಿಟ್ಟು ಬೇರೆ ಕಂಪನಿಯನ್ನ ಕಟ್ಟಿ ಅರುಣ್ ಒಡೆತನದ ಜಿ ನೆಟ್ ಕಂಪನಿಯ ಲಾಸ್​ಗೆ ಕಾರಣವಾಗಿದ್ದ ಫಣೀಂದ್ರ. ಈ ಬಗ್ಗೆ ದ್ವೇಷವಿಟ್ಟುಕೊಂಡಿದ್ದ ಅರುಣ್ , ಫೆಲಿಕ್ಸ್ ಜೊತೆ ಪ್ಲಾನ್ ಮಾಡಿ ಇಬ್ಬರನ್ನ ಹತ್ಯೆ ಮಾಡಲಾಗಿತ್ತು.

ಇದನ್ನೂ ಓದಿ:ಏರೋನಿಕ್ಸ್ ಎಂಡಿ, ಸಿಇಒ ಹತ್ಯೆ ಪ್ರಕರಣ: ಆ ಜೋಡಿ ಕೊಲೆಯ ಹಿಂದಿತ್ತು ಏಳು ತಿಂಗಳ ಹಿಂದಿನ ದ್ವೇಷ!

ಹತ್ಯೆ – 4

ಕೇರಳ ಮೂಲದ ವಿನು ಕುಮಾರ್ ಹತ್ಯೆ, ಹಂತಕನ ಪರಿಚಯವೇ ಇಲ್ಲದೆ ಹತ್ಯೆಯಾಗಿದ್ದ. ಹೌದು ಫಣೀಂದ್ರ ಹಾಗೂ ಅರುಣ್ ವಿಚಾರವೂ ವಿನುಗೆ ಗೊತ್ತಿಲ್ಲ. ಆದರೆ, ಫಣೀಂದ್ರ ಜೊತೆಲಿದ್ದ ಕಾರಣಕ್ಕೆ ಹತ್ಯೆಯಾಗಿದ್ದ.

ಹತ್ಯೆ – 5

ರೌಡಿಶೀಟರ್ ಕಪೀಲ್ ಕೊಲೆ. ನಖರಾ ಬಾಬು ಹಂತಕನಾಗಿದ್ದ ಕಪೀಲ್ ಜೊತೆ ಈ ಹಿಂದೆ ಆರ್​.ಟಿ ನಗರ ಹುಡುಗರ ಜೊತೆ ಜಮೀನು ವಿಚಾರವಾಗಿ ಕಿರಿಕ್ ನಡೆದಿತ್ತು. ಆ ಹಳೆ ದ್ವೇಷದಿಂದ ಕಪೀಲ್ ನನ್ನ ಹೊಡೆದು ಹಾಕಲು ಪ್ಲಾನ್ ಮಾಡಲಾಗಿತ್ತು. ವಿಲ್ಸನ್ ಗಾರ್ಡನ್ ನಾಗನ ಕಡೆಯವನು ಎಂದು ಗೊತ್ತಾದಾಗ ಹಿಂದೆ ಸರಿದಿದ್ದ ಆರ್ ಟಿ ನಗರ ಟೀಂ. ನಂತರ ಮತ್ತೊಬ್ಬ ಕೋರ್ಟ್​ಗೆ ಸರೆಂಡರ್ ಆಗಿರುವ ರೌಡಿಯಿಂದ ಹತ್ಯೆ ನಡೆಸಿರುವ ಸಾಧ್ಯತೆಯಿದ್ದು, ಡಿಜೆ ಹಳ್ಳಿ ಬಳಿ ಕಪೀಲ್ ನನ್ನ ದ್ವಿಚಕ್ರವಾಹನದಲ್ಲಿ ಬಂದಿದ್ದವರು ಭೀಕರ ಹತ್ಯೆ ಮಾಡಿದ್ದರು. ಈ ಎಲ್ಲಾ ಕೊಲೆಗಳು ಇದೇ ಮಂಗಳವಾರ ನಡೆದಿವೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ