AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೊಡ್ಡಬಳ್ಳಾಪುರ: ಅತ್ತಿಗೆ ಜೊತೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗ್ತಿದ್ದಾನೆಂದು ಅಣ್ಣನನ್ನೇ ಕೊಂದು ಪರಾರಿಯಾದ!

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಮಂಕಳಾಲ ಗ್ರಾಮದ ಈ ಗುಡಿಸಲಿನಲ್ಲಿ ಗಂಗರಾಜು ಮತ್ತು ಭಾಗ್ಯಮ್ಮ ಅನ್ನೂ ದಂಪತಿ ಜೀವನ ಕಟ್ಟಿಕೊಂಡಿದ್ರು. ಆದ್ರೆ ಗಂಡನ ಜೊತೆ ಸಂಸಾರ ನಡೆಸುತ್ತಿದ್ದ ಭಾಗ್ಯಮ್ಮಳಿಗೆ ಮೈದ ರವಿ ಮೇಲೆ ಮನಸ್ಸಾಗಿದ್ದು ಕಳೆದ ಎರಡು ವರ್ಷದಿಂದೆ ಮೈದನ ಜೊತೆ ಗಂಡ ಹಾಗೂ ಮನೆಯನ್ನ ಬಿಟ್ಟು ಹೋಗಿದ್ಲು.

ದೊಡ್ಡಬಳ್ಳಾಪುರ: ಅತ್ತಿಗೆ ಜೊತೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗ್ತಿದ್ದಾನೆಂದು ಅಣ್ಣನನ್ನೇ ಕೊಂದು ಪರಾರಿಯಾದ!
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನವೀನ್ ಕುಮಾರ್ ಟಿ
| Edited By: |

Updated on: Oct 24, 2023 | 6:55 PM

Share

ದೇವನಹಳ್ಳಿ, ಅಕ್ಟೋಬರ್ 24: ಅದು ಪುಟ್ಟ ಗುಡಿಸಲಿನಲ್ಲಿ ವಾಸ ಮಾಡುತ್ತಾ ಕೂಲಿ ಮಾಡಿಕೊಂಡೇ ನೆಮ್ಮದಿಯ ಜೀವನ ನಡೆಸುತ್ತಿದ್ದ ಕುಟುಂಬ. ಆದರೆ ಆ ಕುಟುಂಬದ ನೆಮ್ಮದಿಗೆ ತಮ್ಮನೇ ವಿಲನ್ ಆಗಿದ್ದು, ಅತ್ತಿಗೆಯನ್ನೇ ಬೇರೆಡೆಗೆ ಕರೆದುಕೊಂಡು ಹೋಗಿದ್ದ. ಜೊತೆಗೆ ಇತ್ತೀಚೆಗಷ್ಟೆ ಅತ್ತೆ ಅಣ್ಣನ ಬಳಿಗೆ ಬಂದಿದಕ್ಕೆ ಸಹೋದರ ರೊಚಿಗೆದ್ದಿದ್ದು ಸಹೋದರ ಅನ್ನೋದನ್ನೂ ನೋಡದೆ ಒಡ ಹುಟ್ಟಿದವನನ್ನೆ ಕೊಲೆ ಮಾಡಿದ್ದಾನೆ. ಈ ಘಟನೆ ನಡೆದಿದ್ದು ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ದೊಡ್ಡಮಂಕಳಾಲದಲ್ಲಿ.

ಸಣ್ಣ ಗುಡಿಸಲು ಒಂದೆ ಕಡೆ ಅಡುಗೆ ಮನೆ ಬೆಡ್ ರೂಂ. ಎಲ್ಲಾ ಆದ್ರು ಸ್ವಾಭಿಮಾನದಿಂದ ಇದೇ ಗುಡಿಸಿಲಿನಲ್ಲಿ ಗಂಗರಾಜು ಅನ್ನೂ ವ್ಯಕ್ತಿ ಸಂಸಾರ ನಡೆಸುತ್ತಿದ್ದ. ಜೊತೆಗೆ ಕೆಲಸ ಮುಗಿಸಿ ಸಂಜೆ ಮನೆಗೆ ಬರ್ತಿದ್ದ ಗಂಗರಾಜು ನೆನ್ನೆ ರಾತ್ರಿ ಮಲಗಿದ್ದ ಕಡೆಯೇ ನೆತ್ತರು ಹರಿದು ಭೀಕರವಾಗಿ ಕೊಲೆಯಾಗಿ ಹೋಗಿದ್ದಾನೆ. ಮನೆ ಮಗನ ಕೊಲೆ ಕಂಡು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಮಂಕಳಾಲ ಗ್ರಾಮದ ಈ ಗುಡಿಸಲಿನಲ್ಲಿ ಗಂಗರಾಜು ಮತ್ತು ಭಾಗ್ಯಮ್ಮ ಅನ್ನೂ ದಂಪತಿ ಜೀವನ ಕಟ್ಟಿಕೊಂಡಿದ್ರು. ಆದ್ರೆ ಗಂಡನ ಜೊತೆ ಸಂಸಾರ ನಡೆಸುತ್ತಿದ್ದ ಭಾಗ್ಯಮ್ಮಳಿಗೆ ಮೈದ ರವಿ ಮೇಲೆ ಮನಸ್ಸಾಗಿದ್ದು ಕಳೆದ ಎರಡು ವರ್ಷದಿಂದೆ ಮೈದನ ಜೊತೆ ಗಂಡ ಹಾಗೂ ಮನೆಯನ್ನ ಬಿಟ್ಟು ಹೋಗಿದ್ಲು. ಹೀಗಾಗಿ ಪತ್ನಿ ಹೋದ್ರು ಸ್ವಾಭಿಮಾನದಿಂದ ಕೂಲಿ ಕೆಲಸ ಮಾಡಿಕೊಂಡು ಗಂಗರಾಜು ವಾಸ ಮಾಡ್ತಿದ್ದು, ಕಳೆದ ಕೆಲ ದಿನಗಳಿಂದೆ ಪತ್ನಿ ಭಾಗ್ಯಮ್ಮ ಗಂಡ ಗಂಗರಾಜು ಮನೆಗೆ ವಾಪಸ್ ಬಂದಿದ್ದಾಳೆ. ಇನ್ನು ಮನೆಗೆ ಬಂದಿದ್ದ ಪತ್ನಿ ಹಾಗೂ ಸಹೋದರ ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಅಂತ ಒಡ ಹುಟ್ಟಿದ ಅಣ್ಣನನ್ನೇ ಕಲ್ಲು ಮತ್ತು ಮಚ್ಚಿನಿಂದ ಹೊಡೆದು ಕೊಲೆ ಮಾಡಿ ನಂತರ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ಪ್ರತಿನಿತ್ಯ ಕೆಲಸಕ್ಕೆ ಹೋಗಿ ಗುಡಿಸಲಿಗೆ ವಾಪಸ್ ಆಗ್ತಿದ್ದ ತಾಯಿ ಜಯಮ್ಮ ಎಂದಿನಂತೆ ನೆನ್ನೆ ಸಂಜೆಯು ಮನೆಗೆ ಬಂದು ನೋಡಿದ್ದಾಳೆ. ಈ ವೇಳೆ ಮಗ ಮಲಗಿದ್ದಾನೆ ಅಂತ ಎಬ್ಬಿಸಲು ನೋಡಿದಾಗ ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದ್ದು ಕೂಡಲೆ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾಳೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ತಮ್ಮ ಹಾಗೂ ಮೃತನ ಪತ್ನಿಯೇ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದೆ ಅಂತ ಕೊಲೆ ಮಾಡಿ ಎಸ್ಕೇಪ್ ಆಗಿರುವ ಶಂಕೆಯನ್ನ ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಹೊರವಲಯದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಒಟ್ಟಾರೆ ಅಣ್ಣನ ಪತ್ನಿಯನ್ನೇ ಅಕ್ರಮ ಸಂಬಂಧದ ಜೊತೆ ಕರೆದೋಗಿದ್ದು ಅಲ್ಲದೆ ಸಂಬಂಧಕ್ಕೆ ಅಣ್ಣ ಅಡ್ಡಿಯಾಗಿದ್ದಾನೆ ಅಂತ ಸ್ವಂತ ಒಡಹುಟ್ಟಿದ ಅಣ್ಣನನ್ನೆ ಕೊಲೆ ಮಾಡಿದ್ದು ಮಾತ್ರ ನಿಜಕ್ಕೂ ದುರಂತ. ಇನ್ನೂ ತಲೆಮರೆಸಿಕೊಂಡಿರುವ ಆರೋಫಿಗಳ ಬಂಧನಕ್ಕೆ ದೊಡ್ಡಬೆಳವಂಗಲ ಪೊಲೀಸರು ಬಲೆ ಬೀಸಿದ್ದು ಆರೋಫಿಗಳ ಬಂಧನದ ನಂತರ ಕೊಲೆ ಹಿಂದಿನ ಮತ್ತಷ್ಟು ರಹಸ್ಯ ಬೆಳಕಿಗೆ ಬರಬೇಕಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​