ಮೈಸೂರು ಜಿಲ್ಲೆಯಲ್ಲಿ ಜೋಡಿ ಕೊಲೆ: ಒಳಕಲ್ಲಿನಿಂದ ಜಜ್ಜಿ ವೃದ್ಧ ದಂಪತಿಯ ಹತ್ಯೆ

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಡಪ್ಪನಳ್ಳಿಯಲ್ಲಿ ವೃದ್ಧ ದಂಪತಿಯನ್ನ ಕ್ರೂರವಾಗಿ ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ತೋಟದ ಮನೆಯಲ್ಲಿ ಒಳಕಲ್ಲುಗಳಿಂದ ಜಜ್ಜಿ ಕೊಲ್ಲಲಾಗಿದೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಆರೋಪಿಗಳನ್ನು ಬಂಧಿಸಲು ಬಲೆ ಬೀಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಜೋಡಿ ಕೊಲೆ: ಒಳಕಲ್ಲಿನಿಂದ ಜಜ್ಜಿ ವೃದ್ಧ ದಂಪತಿಯ ಹತ್ಯೆ
ಮೈಸೂರು ಜಿಲ್ಲೆಯಲ್ಲಿ ಜೋಡಿ ಕೊಲೆ: ಒಳಕಲ್ಲಿನಿಂದ ಜಜ್ಜಿ ವೃದ್ಧ ದಂಪತಿಯ ಹತ್ಯೆ
Edited By:

Updated on: Mar 03, 2025 | 8:38 PM

ಮೈಸೂರು, ಮಾರ್ಚ್​​ 03: ಜಿಲ್ಲೆಯ ಹುಣಸೂರು ತಾಲೂಕಿನ ನಾಡಪ್ಪನಳ್ಳಿಯಲ್ಲಿ ದಂಪತಿಯ ಬರ್ಬರ ಕೊಲೆ (kill) ಮಾಡಿರುವಂತಹ ಘಟನೆ ನಡೆದಿದೆ. ರಂಗಸ್ವಾಮಿ ಗೌಡ(65), ಪತ್ನಿ ಶಾಂತಮ್ಮ(55) ಮೃತರು. ತೋಟದ ಮನೆಯಲ್ಲಿ ಒಳಕಲ್ಲಿನಿಂದ ಜಜ್ಜಿ ದುಷ್ಕರ್ಮಿಗಳಿಂದ ಕೃತ್ಯವೆಸಗಲಾಗಿದೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ. ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೈಕ್ ಪಾರ್ಕ್ ವಿಚಾರದಲ್ಲಿ ಗಲಾಟೆ: ಓರ್ವ ಕೊಲೆ, ಓರ್ವ ಬಂಧನ

ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್​ ಹತ್ಯೆಗೈದಿದ್ದ ಆರೋಪಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು  ಬಂಧಿಸಿದ್ದಾರೆ. ಕಾರ್ತಿಕ್ ಬಂಧಿತ ವ್ಯಕ್ತಿ. ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಕಾರ್ತಿಕ್, ಚಾಕುವಿನಿಂದ ಇರಿದು ನೇಪಾಳ ಮೂಲದ ಗಣೇಶ್(32) ಕೊಂದಿದ್ದ. ಡೆಲಿವರಿ ಕೊಡುವ ನೆಪದಲ್ಲಿ ಬಂದು ಚಾಕುವಿನಿಂದ ಇರಿದು ಹತ್ಯೆಗೈದಿದ್ದ.

ಇದನ್ನೂ ಓದಿ: ಲೈಂಗಿಕವಾಗಿ ಬಳಸಿಕೊಂಡು ಮಹಿಳಾ ಅಧಿಕಾರಿ ಮೋಸ: ಮಂಗಳೂರಿನಲ್ಲಿ ಯುವಕ ಆತ್ಮಹತ್ಯೆ

ಇದನ್ನೂ ಓದಿ
ಗದಗಿನಲ್ಲೊಂದು ಭೀಕರ ಅಪಘಾತ: ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿ, ಮೂವರು ಸಾವು
ಕಾಂಗ್ರೆಸ್​ ಶಾಸಕ ಆಪ್ತನ ಕೊಲೆಗೆ ಬಿಬಿಎಂಪಿ ಎಲೆಕ್ಷನ್ ಕಾರಣವಾಯ್ತಾ?
ಲೋಕಾಯುಕ್ತ ಬಲೆಗೆ ಬಿದ್ದ ಶಿರಸಿ ನ್ಯಾಯಾಲಯದ ಹೆಚ್ಚುವರಿ ಎಪಿಪಿ
11 ವರ್ಷಗಳಿಂದ ನಾಪತ್ತೆಯಾಗಿದ್ದ ಶಿಕ್ಷಾಬಂಧಿ ಕೈದಿ ಕೊನೆಗೂ ಸೆರೆ

2 ದಿನಗಳ ಹಿಂದೆ ಡೆಲಿವರಿ ಕೊಡುವುದಕ್ಕೆ ಹೋಗಿದ್ದ ಕಾರ್ತಿಕ್, ನಮಸ್ತೆ ಗಾರ್ಮೆಂಟ್ ಬಳಿ ಹೋಗಿದ್ದಾಗ ಬೈಕ್ ಪಾರ್ಕ್ ಮಾಡುವ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಅದೇ ವಿಚಾರಕ್ಕೆ ಮರುದಿನ ಬಂದು ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿದು ಗಣೇಶ್​ನನ್ನ ಕೊಲೆ ಮಾಡಿದ್ದ. ಬ್ಯಾಟರಾಯನಪುರದ ಟಿಂಬರ್​ ಯಾರ್ಡ್​ ಲೇಔಟ್​ನಲ್ಲಿ ಕೊಲೆ ಮಾಡಿದ್ದಾಗಿ ಆರೋಪಿ ಕಾರ್ತಿಕ್​ ವಿಚಾರಣೆ ವೇಳೆ ಸತ್ಯ ಬಾಯಿಬಿಟ್ಟಿದ್ದಾನೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಕ್ಕಳಿಗೆ ತಿಂಡಿ ತರಲು ಹೋಗಿದ್ದವ ಶವವಾಗಿ ಪತ್ತೆ

ಮಕ್ಕಳಿಗೆ ತಿಂಡಿ ತರಲು ಹೋಗಿದ್ದವ ಶವವಾಗಿ ಪತ್ತೆಯಾಗಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೀಲಲಿಗೆ ಗ್ರಾಮದ ಬಳಿ ಶವಪತ್ತೆ ಆಗಿದೆ. ಅನುಮಾನಾಸ್ಪದ ರೀತಿಯಲ್ಲಿ ಯಾಸಿನ್(26) ಶವಪತ್ತೆ ಆಗಿದೆ.

ಇದನ್ನೂ ಓದಿ: ರಿಯಲ್ ಎಸ್ಟೇಟ್ ಉದ್ಯಮಿ ಅಪಹರಣ: ಸತೀಶ್ ಜಾರಕಿಹೊಳಿ‌ ಆಪ್ತೆಯ ಬಂಧನ

ಖಾಸಗಿ ಶಾಲೆಯಲ್ಲಿ ಬಸ್​ ಚಾಲಕನಾಗಿ ಕೆಲಸ ಮಾಡ್ತಿದ್ದ. ನಿನ್ನೆ ಮಕ್ಕಳಿಗೆ ತಿಂಡಿ ತರಲು ಹೊರ ಹೋಗಿದ್ದ ಯಾಸಿನ್, ವಾಪಸ್ಸ್​ ಬಂದಿಲ್ಲ. ಯಲ್ಲಮ್ಮ ದೇವಾಲಯದ ನಿರ್ಜನ ಪ್ರದೇಶದಲ್ಲಿ ಶವಪತ್ತೆಯಾಗಿದೆ. ಸ್ಥಳಕ್ಕೆ ಸೂರ್ಯಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.