ತಹಶೀಲ್ದಾರ್ ಬೀಳ್ಕೊಡುಗೆ ಹಿನ್ನೆಲೆ ಕೇಕ್ ಕತ್ತರಿಸಿ ಡ್ರೋನ್ ಹಾರಿಸಿ ಪಟಾಕಿ ಸಿಡಿಸಿ ಹುಚ್ಚೆದ್ದು ಕುಣಿದ ಸರ್ಕಾರಿ ನೌಕರರು
ಪಾಂಡವಪುರದ ತಹಶೀಲ್ಧಾರ್ ಕಚೇರಿಯಲ್ಲಿ ಹೇಳುವವರು ಇಲ್ಲ, ಕೇಳುವವರು ಇಲ್ಲ ಎಂಬಂತಾಗಿದೆ. ತಹಶೀಲ್ದಾರ್ ಬೀಳ್ಕೊಡುಗೆ ಹಿನ್ನೆಲೆ ಅಧಿಕಾರಿಗಳು ಕಚೇರಿಯಲ್ಲಿ ಕೇಕ್ ಕತ್ತರಿಸಿ ಡ್ರೋನ್ ಹಾರಿಸಿ ಪಟಾಕಿ ಸಿಡಿಸಿ ಹುಚ್ಚೆದ್ದು ಕುಣಿದಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
ಮಂಡ್ಯ: ಜಿಲ್ಲೆಯ ಪಾಂಡವಪುರದ ತಹಶೀಲ್ಧಾರ್ ಕಚೇರಿಯಲ್ಲಿ ಹೇಳುವವರು ಇಲ್ಲ, ಕೇಳುವವರು ಇಲ್ಲ ಎಂಬಂತಾಗಿದೆ. ಇದರ ಪರಿಣಾಮವಾಗಿ ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳ ಅಂಧ ದರ್ಬಾರ್ ನಡೆಯುತ್ತಿದೆ. ತಹಶೀಲ್ಧಾರ್ ಪ್ರಮೋದ್ ಪಾಟೀಲ್ (Pramod Pateel) ಅವರ ಬೀಳ್ಕೊಡುಗೆ ಹಿನ್ನೆಲೆ ಅಧಿಕಾರಿಗಳು ಕಚೇರಿಯಲ್ಲಿ ಕೇಕ್ ಕತ್ತರಿಸಿ ಡ್ರೋನ್ ಹಾರಿಸಿ ಪಟಾಕಿ ಸಿಡಿಸಿ ಹುಚ್ಚೆದ್ದು ಕುಣಿದಿದ್ದಾರೆ.
ಪಾಂಡವಪುರ ಮಿನಿ ವಿಧಾನ ಸೌಧದಲ್ಲಿ ಇರುವ ತಹಶೀಲ್ಧಾರ್ ಕಚೇರಿಯಲ್ಲಿ ಸರ್ಕಾರಿ ಅಧಿಕಾರಿಗಳ ಅಂಧ ದರ್ಬಾರ್ನ ಎಕ್ಸ್ ಕ್ಲೂಸಿವ್ ವಿಡಿಯೋ ಟಿವಿ9 ಗೆ ಲಭ್ಯವಾಗಿದೆ. ಪ್ರಮೋದ್ ಪಾಟೀಲ್ ಅವರು ವರ್ಗಾವಣೆಗೊಂಡ ಹಿನ್ನೆಲೆ ಸರ್ಕಾರಿ ಕಚೇರಿಯನ್ನ ಮದುವೆ ಮನೆ ಛತ್ರವನ್ನಾಗಿ ಮಾಡಿ ಅವರನ್ನು ಬೀಳ್ಕೊಟ್ಟಿದ್ದಾರೆ.
ಇದನ್ನೂ ಓದಿ: Crime News: ಮಂಡ್ಯದಲ್ಲಿ ನಿಲ್ಲದ ರಕ್ತಪಾತ, ಜಿಲ್ಲೆಯಲ್ಲಿ ನಡೆಯಿತು ಮತ್ತೊಂದು ಭೀಕರ ಕೊಲೆ!
ಅದ್ಧೂರಿ ಸಂಭ್ರಮಾಚರಣೆ ವೇಳೆ ಪ್ರಮೋದ್ ಪಾಟೀಲ್ ಅವರಿಗೆ ಹಾರ ತುರಾಯಿ ಹಾಕಿ ಹೂ ಮಳೆಗೈಯಲಾಗಿದೆ. ಈ ಕಾರ್ಯಕ್ರಮವನ್ನು ತಹಶೀಲ್ಧಾರ್ ನಯನ, ಎಸಿ ವೆಂಕೇಟ್ ಮೂರ್ತಿ, ಸರ್ಕಲ್ ಇನ್ಸ್ಪೆಕ್ಟರ್ ಸುಮಾ ಅವರು ಚಾಲನೆ ನೀಡಿದ್ದಾರೆ. ಪ್ರಭೋದ್ ಪಾಟೀಲ್ ಅವರ ಸಂಭ್ರಮಾಚರಣೆಗೆ ಗ್ರೇಡ್ 2 ತಹಶೀಲ್ಧಾರ್ ನಯನ ಅವರು ತಮ್ಮ ಕಚೇರಿಯನ್ನೇ ಬಿಟ್ಟು ಕೊಟ್ಟಿದ್ದಾರೆ.
ವಿಚಾರಣೆಗೆ ಹಾಜರಾಗದ ತಹಶೀಲ್ದಾರ್ಗೆ ವಾರಂಟ್ ಜಾರಿ
ಬೆಂಗಳೂರು: ಖಾಸಗಿ ಬಿಲ್ಡ್ಗಳಿಂದ ಸರ್ಕಾರಿ ಜಮೀನು ಕಬಳಿಕೆ ಆರೋಪ ಸಂಬಂಧ ವಿಚಾರಣೆಗೆ ಹಾಜರಾಗದ ಕೆ.ಆರ್.ಪುರಂ ತಹಶೀಲ್ದಾರ್ ಅಜಿತ್ ರೈ ವಿರುದ್ಧ ವಾರಂಟ್ ಜಾರಿಯಾಗಿದೆ. ಬೆಂಗಳೂರು ನಗರದ ಪೂರ್ವ ತಾಲೂಕಿನ ಬೆಳತೂರು ಗ್ರಾಮದ ಸರ್ವೆ ನಂ. 57ರ 2 ಎಕರೆ ಜಮೀನನ್ನು ಕಬಳಿಕೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಪರಮೇಶ್ ಎಂಬುವರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ದಾಖಲೆ ಸಲ್ಲಿಸುವಂತೆ ತಹಶೀಲ್ದಾರ್ಗೆ ಕೋರ್ಟ್ ಸೂಚಿಸಿತ್ತು. ಆದರೆ ದಾಖಲೆ ಸಲ್ಲಿಸ ತಹಶೀಲ್ದಾರ್ ವಿರುದ್ಧ ಕೋರ್ಟ್ ವಾರಂಟೆ ಜಾರಿ ಮಾಡಿದೆ. ಅಲ್ಲದೆ ಮುಂದಿನ ವಿಚಾರಣೆ ವೇಳೆ ತಹಶೀಲ್ದಾರ್ ಅವರನ್ನು ಕರೆತರುವಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿದೆ.
ಇದನ್ನೂ ಓದಿ: Murder: ಟೀಚರ್ ಜೊತೆ ಅಕ್ರಮ ಸಂಬಂಧ; ಭಯದಿಂದ ಶಿಕ್ಷಕಿಯನ್ನೇ ಕೊಂದ ಪಿಯುಸಿ ವಿದ್ಯಾರ್ಥಿ
ಡಿಸಿ ಸಹಿ ನಕಲು ಮಾಡಿ ಭೂಕಬಳಿಕೆಗೆ ಯತ್ನ, ನೋಟಿಸ್ ಜಾರಿ
ಕೋಲಾರ: ಜಿಲ್ಲಾಧಿಕಾರಿಯವರ ಸಹಿ ನಕಲು ಮಾಡಿ ಸರ್ಕಾರಿ ಭೂಮಿಯನ್ನು ಕಬಳಿಸಲು ಯತ್ನಿಸಿದ ಪ್ರಕರಣ ಸಂಬಂಧ ಕೋಲಾರ ತಹಶೀಲ್ದಾರ್ ನಾಗರಾಜ್ಗೆ ನೋಟಿಸ್ ಜಾರಿ ಮಾಡಲಾಗಿದೆ. ಡಿಸಿ ಸಹಿ ನಕಲು ಮಾಡಿದ ಪ್ರಕರಣ ಸಂಬಂಧ ಈಗಾಗಲೇ ಮೂವರನ್ನು ಬಂಧಿಸಿದ ಕೋಲಾರದ ಗಲ್ಪೇಟೆ ಪೊಲೀಸರು, ಇಂದು ವಿಚಾರಣೆಗೆ ಹಾಜರಾಗುವಂತೆ ತಹಶೀಲ್ದಾರ್ ನಾಗರಾಜ್ಗೆ ನೋಟಿಸ್ ಜಾರಿ ಮಾಡಿದ್ದಾರೆ.
ಕೋಲಾರ ತಾಲೂಕಿನ ಆಲಹಳ್ಳಿಯಲ್ಲಿನ ಸರ್ವೆ ನಂ. 127 ರಲ್ಲಿ 3.37 ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮ ಮಂಜೂರಿಗೆ ಯತ್ನ ನಡೆಸಿದ ಹಿನ್ನೆಲೆ ಕೋಲಾರದ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗಾಗಲೇ ಮೂರು ಜನ ಕಂದಾಯ ಇಲಾಖೆ ಸಿಬ್ಬಂದಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ; ಇನ್ಸ್ಪೆಕ್ಟರ್ ವರ್ತನೆ ಖಂಡಿಸಿ ಜ್ಯುವೆಲರಿ ಸಿಬ್ಬಂದಿ ಪ್ರತಿಭಟನೆ
Published On - 11:37 am, Mon, 4 July 22