Crime News: ಮಂಡ್ಯದಲ್ಲಿ ನಿಲ್ಲದ ರಕ್ತಪಾತ, ಜಿಲ್ಲೆಯಲ್ಲಿ ನಡೆಯಿತು ಮತ್ತೊಂದು ಭೀಕರ ಕೊಲೆ!
ಸಾಲು ಸಾಲು ಕೊಲೆಗಳಿಗೆ ಸಾಕ್ಷಿಯಾದ ಮಂಡ್ಯ ಜಿಲ್ಲೆಯಲ್ಲಿ ಇದೀಗ ಮತ್ತೊಂದು ಕೊಲೆ ನಡೆದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಕೊಲೆ ಮಾಡಿದ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ ತಡರಾತ್ರಿ ನಡೆದಿದೆ.
ಮಂಡ್ಯ: ಜಿಲ್ಲೆಯಲ್ಲಿ ರಕ್ತಪಾತ ನಿಲ್ಲುವಂತೆ ಕಾಣುತ್ತಿಲ್ಲ. ಸಾಲು ಸಾಲು ಕೊಲೆಗಳಿಗೆ ಸಾಕ್ಷಿಯಾದ ಮಂಡ್ಯ ಜಿಲ್ಲೆಯಲ್ಲಿ ಇದೀಗ ಮತ್ತೊಂದು ಕೊಲೆ(Murder) ನಡೆದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಕೊಲೆ ಮಾಡಿದ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ ತಡರಾತ್ರಿ ನಡೆದಿದೆ.
ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಂತೆ ಮೈದಾನದ ಅರಳಿ ಮರದ ಬಳಿ ನಿನ್ನೆ ತಡರಾತ್ರಿ ಬೆಳ್ಳೂರು ಪಟ್ಟಣದ ಅಂಬೇಡ್ಕರ್ ಕಾಲೋನಿ ನಿವಾಸಿ ಸುನೀಲ್ (36) ಎಂಬಾತನನ್ನು ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದರು. ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುನೀಲ್ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಘಟನೆಗೆ ಕಾರಣ ಏನು ಎಂದು ತಿಳಿದುಬಂದಿಲ್ಲ.
ಇದನ್ನೂ ಓದಿ: Murder: ಟೀಚರ್ ಜೊತೆ ಅಕ್ರಮ ಸಂಬಂಧ; ಭಯದಿಂದ ಶಿಕ್ಷಕಿಯನ್ನೇ ಕೊಂದ ಪಿಯುಸಿ ವಿದ್ಯಾರ್ಥಿ
ಸಿಲಿಂಡರ್ ಸ್ಫೋಟಕ್ಕೆ ಐದು ಅಂಗಡಿಗಳು ಭಸ್ಮ
ಬಾಗಲಕೋಟೆ: ಸಿಲಿಂಡರ್ ಸ್ಫೋಟಗೊಂಡು ಹೋಟೆಲ್, ಗ್ಯಾರೇಜ್ ಸೇರಿದಂತೆ ಐದು ಅಂಗಡಿಗಳು ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಗೊಳಲಾಗಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ವಿಜಯಪುರ ರಸ್ತೆಯಲ್ಲಿನ ಖಾನಾವಳಿ ಅಂಗಡಿಯಲ್ಲಿ ಸಿಲಿಡರ್ ಸ್ಫೋಟಗೊಂಡ ಪರಿಣಾಮ ಅಕ್ಕಪಕ್ಕದಲ್ಲಿದ್ದ ಗ್ಯಾರೇಜ್, ಅಟಮೊಬೈಲ್ ಅಂಗಡಿ ಸೇರಿದಂತೆ ಐದು ಅಂಗಡಿಗಳು ನಾಶಗೊಂಡಿವೆ.
ಅಗ್ನಿ ಅವಘಡ ನಡೆದ ಹಿನ್ನೆಲೆ ಸ್ಥಳಕ್ಕೆ ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅನಂದ ನ್ಯಾಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುರ್ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಐದು ಅಂಗಡಿಗಳು ಸಂಪೂರ್ಣ ಸುಟ್ಟು ಹೋಗಿದ್ದು, ಅಂಗಡಿಯಲ್ಲಿರುವ ಸಾಮಗ್ರಿಗಳು ಒಂದಷ್ಟು ಉಪಯೋಗಕ್ಕೆ ಬರುವುದಿಲ್ಲ, ಎಲ್ಲವೂ ಸುಟ್ಟು ಕರಕಲಾಗಿವೆ. ಇದರಿಂದ ಅಂಗಡಿ ಮಾಲಿಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ ಎಂದು ಹೇಳಿದ ಶಾಸಕರು, ಜಿಲ್ಲಾಧಿಕಾರಿ ಜೊತೆ ಮಾತನಾಡಿ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಇದನ್ನೂ ಓದಿ: ರಾಮಸಂದ್ರ ಬಳಿ ಯುವತಿ ಮೃತದೇಹ ಪತ್ತೆ ಪ್ರಕರಣ: ಇನ್ನೂ ಪತ್ತೆಯಾಗದ ಮೃತ ಯುವತಿಯ ಗುರುತು
ಹೊತ್ತಿ ಉರಿದ ಗ್ಯಾರೇಜ್, ಬಟ್ಟೆ ಶಾಪ್
ಬೆಂಗಳೂರು: ಆಕಸ್ಮಿಕವಾಗಿ ಬೆಂಕಿ ತಗುಲಿ ಗ್ಯಾರೇಜ್, ಬಟ್ಟೆ ಅಂಗಡಿ ಹೊತ್ತಿ ಉರಿದ ಘಟನೆ ನಗರದ ವೈಟ್ಫೀಲ್ಡ್ನಲ್ಲಿ ನಡೆದಿದೆ. ಇಂದು ಬೆಳಗ್ಗೆ 7 ಗಂಟೆಗೆ ಬೈಕ್ ಗ್ಯಾರೇಜ್ ಹಾಗೂ ಹಾಸಿಗೆ ಅಂಗಡಿಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನೂ ಓದಿ: ಎಚ್ಚರ ಪೋಷಕರೇ ಎಚ್ಚರ… ಹೇಳಿಕೊಳ್ಳಲು ಇದೊಂದು ಬುಕ್ಸ್ಟಾಲ್, ಒಳಗಡೆ ನಡೆಯುತ್ತಿತ್ತು ಸೆಲ್ಯೂಷನ್ ದಂಧೆ!
Published On - 10:44 am, Mon, 4 July 22