ಫ್ಯಾಷನ್ ಡಿಸೈನರ್ ಪತ್ನಿಗೆ ಕಿರುಕುಳ ಆರೋಪ: ಸಿನಿಮಾ ನಿರ್ಮಾಪಕ ವಿರುದ್ಧ FIR
ಬಹುಭಾಷಾ ಸಿನಿಮಾ ನಿರ್ಮಾಪಕ ದಿನಕರ್ ವಿರುದ್ಧ FIR ದಾಖಲಾಗಿದೆ. ಮಾರತ್ತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ನಿ ಹಾಗೂ ಮಹಿಳೆಯೊಬ್ಬರ ದೂರಿನ ಮೇರೆಗೆ FIR ದಾಖಲಾಗಿದೆ. ಸದ್ಯ, FIR ದಾಖಲಾಗ್ತಿದ್ದಂತೆ ದಿನಕರ್ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಬೆಂಗಳೂರು: ಬಹುಭಾಷಾ ಸಿನಿಮಾ ನಿರ್ಮಾಪಕ ದಿನಕರ್ ವಿರುದ್ಧ FIR ದಾಖಲಾಗಿದೆ. ಮಾರತ್ತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ನಿ ಹಾಗೂ ಮಹಿಳೆಯೊಬ್ಬರ ದೂರಿನ ಮೇರೆಗೆ FIR ದಾಖಲಾಗಿದೆ. ಸದ್ಯ, FIR ದಾಖಲಾಗ್ತಿದ್ದಂತೆ ದಿನಕರ್ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಮಲಯಾಳಂನಲ್ಲಿ ಮೈ ಸ್ಟೋರಿ ಚಿತ್ರ ನಿರ್ಮಿಸಿದ್ದ ದಿನಕರ್ ಸೌತ್ ಇಂಡಿಯಾ ಸಿನಿರಂಗದ ಫೇಮಸ್ ಫ್ಯಾಷನ್ ಡಿಸೈನರ್ ಆಗಿದ್ದ ತಮ್ಮ ಪತ್ನಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಬೇರೊಬ್ಬ ಮಹಿಳೆಯ ಜೊತೆ ರಾಸಲೀಲೆ ಇರುವುದನ್ನು ಪ್ರಶ್ನಿಸಿದ್ದಕ್ಕೆ ತನ್ನ ಮೇಲೆ ಹಲ್ಲೆಮಾಡಲಾಗಿದೆ ಎಂದು ದಿನಕರ್ ಪತ್ನಿ ಆರೋಪಿಸಿದ್ದಾರೆ.

ಜೊತಗೆ, ಹಲವು ಮಹಿಳೆಯರಿಗೆ ತಾನು ನಿರ್ಮಾಪಕ ಅಂತಾ ಮೆಸೇಜ್ ಮಾಡ್ತಿದ್ದ ದಿನಕರ್ ಫೇಸ್ ಬುಕ್, ಇನ್ಸ್ಟಾಗ್ರಾಂನಲ್ಲಿ ಸುಂದರವಾಗಿರೋ ಯುವತಿಯರಿಗೆ ಮೆಸೇಜ್ ಮಾಡಿ ಹೊಸ ಚಿತ್ರ ನಿರ್ಮಾಣ ಮಾಡ್ತಿದ್ದೀನಿ. ನಿಮಗೆ ಅವಕಾಶ ಕೊಡ್ತೀನಿ ಅಂತಾ ಹೇಳುತ್ತಿದ್ದನು ಎಂದು ಆತನ ಪತ್ನಿ ಆರೋಪಿಸಿದ್ದಾರೆ. ಇದಲ್ಲದೆ, ಅಶ್ಲೀಲವಾಗಿ ಮೆಸೇಜ್ ಮಾಡ್ತಿದ್ದ ದಿನಕರ್ ಹಲವು ಮಹಿಳೆಯರ ಜೊತೆ ಅಕ್ರಮ ಸಂಬಂಧ ಬೆಳೆಸ್ತಿದ್ದನಂತೆ. ಈ ನಡುವೆ, ಮಾರತ್ತಹಳ್ಳಿಯಲ್ಲಿರುವ ಮಹಿಳೆಯೊಬ್ಬರ ಜೊತೆ ಅಕ್ರಮ ಸಂಬಂಧ ಸಹ ಹೊಂದಿದ್ದ ಎಂದು ನಿರ್ಮಾಪಕನ ಪತ್ನಿ ಆರೋಪಿಸಿದ್ದಾರೆ.

ಇತ್ತೀಚೆಗೆ, ಈ ಮಹಿಳೆಗೆ ಪದೇ ಪದೆ ಅಶ್ಲೀಲವಾಗಿ ಮೆಸೇಜ್ ಕಳುಹಿಸಿದ್ದನಂತೆ. ಹಾಗಾಗಿ, ದಿನಕರ್ ಪತ್ನಿಗೆ ಸಂತ್ರಸ್ತೆ ಮಾಹಿತಿ ನೀಡಿದ್ದಾಳೆ ಎಂದು ಹೇಳಲಾಗಿದೆ. ಈ ವೇಳೆ, ದಿನಕರ್ ಮೊಬೈಲ್ ಚೆಕ್ ಮಾಡಿದಾಗ ರಾಸಲೀಲೆ ಬಹಿರಂಗವಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿರ್ಮಾಪಕ ದಿನಕರ್ ತನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಹಾಗಾಗಿ, ದಿನಕರ್ ಪತ್ನಿ ಮತ್ತು ಸಂತ್ರಸ್ತ ಮಹಿಳೆ ಠಾಣೆಗೆ ದೂರು ನೀಡಿದ್ದು ಆರೋಪಿ ದಿನಕರ್ ಪತ್ತೆಗೆ ಶೋಧಕಾರ್ಯ ನಡೆಯುತ್ತಿದೆ.
ಅಂದ ಹಾಗೆ, ದಿನಕರ್ ಮೂಲತಃ ಕೇರಳದವರಾಗಿದ್ರೂ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ದಿನಕರ್ ಪತ್ನಿ ಕೊಡಗಿನವರು. 2006ರಲ್ಲಿ ಇವರ ವಿವಾಹವಾಗಿತ್ತು. ಮದುವೆ ನಂತರ ದಂಪತಿ ನಗರದಲ್ಲಿ ನೆಲೆಸಿದ್ದರು. ಇಬ್ಬರು ಚಿತ್ರರಂಗದಲ್ಲಿ ಹೆಸರು ಪಡೆದವರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ದಿನಕರ್ ಮಲಯಾಳಂನ ಮೈ ಸ್ಟೋರಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್ ಹಾಗೂ ಪಾರ್ವತಿ ಮೆನನ್ ಅಭಿನಯದ ಚಿತ್ರ 2018ರಲ್ಲಿ ತೆರೆ ಕಂಡಿತ್ತು. ಇದಲ್ಲದೆ, ನಿರ್ಮಾಪಕನ ಪತ್ನಿ ಚಿತ್ರಕ್ಕೆ ಌಕ್ಷನ್ ಕಟ್ ಹೇಳಿದ್ರು. ಜೊತೆಗೆ, ಕನ್ನಡ, ತಮಿಳು, ಮಲಯಾಳಂ ಸೇರಿದಂತೆ 70ಕ್ಕೂ ಹೆಚ್ಚು ಸಿನಿಮಾಗಳಿಗೆ ವಸ್ತ್ರ ವಿನ್ಯಾಸಕಿ ಆಗಿ ಸಹ ಕೆಲಸ ಮಾಡಿದ್ದಾರೆ. ಸ್ಯಾಂಡಲ್ವುಡ್ನ ಕಲ್ಲರಳಿ ಹೂವಾಗಿ, ಮುಂಗಾರು ಮಳೆ 2, ದರ್ಶನ್ ಅಭಿನಯದ ರಾಜವೀರ ಮದಕರಿನಾಯಕ ಸಿನಿಮಾಗಳಿಗೆ ವಸ್ತ್ರ ವಿನ್ಯಾಸಕಿ ಸಹ ಆಗಿದ್ದಾರೆ.
ಕಿಡ್ನ್ಯಾಪ್ ಆಗಿದ್ದ ಬಾಲಕ ಅನುಭವ್ ಬಿಚ್ಚಿಟ್ಟ ಅನುಭವ.. ಪೋಷಕರು ಹೇಳಿದ್ದೇನು?
Published On - 4:44 pm, Sat, 19 December 20



