ಬೆಂಗಳೂರು: 2.5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ; ವಿದೇಶಿ ಪ್ರಜೆ ಬಂಧನ

Bengaluru: 2018 ರಿಂದ ಆ್ಯಕ್ಟೀವ್ ಆಗಿ ತನ್ನ ಚಟುವಟಿಕೆ ನಡೆಸುತ್ತಿದ್ದ. ಆರೋಪಿ ಡೊಸೊ ವಿರುದ್ಧ ಅಕ್ರಮ ವಿದೇಶಿ ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಂಗಳೂರು: 2.5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ; ವಿದೇಶಿ ಪ್ರಜೆ ಬಂಧನ
2.5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ; ವಿದೇಶಿ ಪ್ರಜೆ ಬಂಧನ

ಬೆಂಗಳೂರು: ನಗರದಲ್ಲಿ 2.5 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಸೀಜ್ ಮಾಡಲಾಗಿದೆ. ಡ್ರಗ್ಸ್ ಸಾಗಿಸುತ್ತಿದ್ದ ವಿದೇಶಿ ಪ್ರಜೆ ಡೊಸೊ ಕಲೋಫಾ ಎಂಬಾತನನ್ನು ಬಂಧಿಸಲಾಗಿದೆ. ಗೋವಿಂದಪುರ ಠಾಣೆಯ ಪೊಲೀಸರಿಂದ ಆರೋಪಿ ಬಂಧನವಾಗಿದೆ. ವಿದೇಶಿ ಫುಟ್‌ಬಾಲ್‌ ಆಟಗಾರನಾಗಿದ್ದ ಡೊಸೊ ಕಲೋಫಾ, ಸ್ಪೋರ್ಟ್ಸ್‌ ವೀಸಾದಲ್ಲಿ 2015ರಲ್ಲಿ ಭಾರತಕ್ಕೆ ಬಂದಿದ್ದ. ಆರೋಪಿಯ ಬಳಿ ಅಧಿಕೃತ ಪಾಸ್‌ಪೋರ್ಟ್, ವೀಸಾ ಇರಲಿಲ್ಲ.

ಪ್ರತಿಷ್ಠಿತ ಹೋಟೆಲ್​ಗಳಿಗೆ ಡ್ರಗ್ಸ್ ಮಾರಾಟ ಮಾಡುತಿದ್ದ ಆರೋಪಿ ನಗರದ ಹೈಎಂಡ್ ಪಾರ್ಟಿಗಳಲ್ಲಿ ಡ್ರಗ್ ಸರಬರಾಜು ಮಾಡುತ್ತಿರುವುದು ಪತ್ತೆಯಾಗಿತ್ತು. 2018 ರಿಂದ ಆ್ಯಕ್ಟೀವ್ ಆಗಿ ತನ್ನ ಚಟುವಟಿಕೆ ನಡೆಸುತ್ತಿದ್ದ. ಆರೋಪಿ ಡೊಸೊ ವಿರುದ್ಧ ಅಕ್ರಮ ವಿದೇಶಿ ಆ್ಯಕ್ಟ್ ಅಡಿ ಪ್ರಕರಣ ದಾಖಲು ಮಾಡಲಾಗಿದೆ.

ಜೊತೆಗೆ ಅಕ್ರಮವಾಗಿ ವಿದೇಶದಿಂದ ಬೆಂಗಳೂರಿಗೆ ಬರುತಿದ್ದ ಮಾದಕ ವಸ್ತುಗಳು ಜಪ್ತಿ ಮಾಡಲಾಗಿದೆ. ಗೋವಾದಿಂದ ಶ್ಯಾಪೇನ್ ಮುಖಾಂತರ ಮಾದಕ ವಸ್ತು ತರುತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಶಾಂಪೇನ್ ಬಾಟಲ್​ನಲ್ಲಿ ಮಾದಕ ವಸ್ತು ಇಟ್ಟು ಅಕ್ರಮವಾಗಿ ತಂದು ಮಾರಾಟ ಮಾಡುತಿದ್ದ. ಮೂಲತಃ ಐವೊರಿಯನ್ ಕೊಸ್ಟ್ ದೇಶದ ಪ್ರಜೆ, ಗೋವಾದ ಮೂಲಕ ಬೆಂಗಳೂರಿಗೆ ಮಾದಕ ವಸ್ತು ಎಂಡಿಎಂಎ, ಕ್ರಿಸ್ಟಲ್ ಪೌಡರ್ ತರುತಿದ್ದ. ಬಂಧಿತನಿಂದ 2.5 ಕೋಟಿ ರೂಪಾಯಿ ಮೌಲ್ಯದ‌ 2500 ಗ್ರಾಂ ಎಂಡಿಎಂಎ, ಕ್ರಿಸ್ಟಲ್ ಪೌಡರ್ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಗುಜರಾತ್​ನ ಮುಂದ್ರಾ ಬಂದರಿನಲ್ಲಿ 2,100 ಕೋಟಿ ರೂ. ಮೌಲ್ಯದ 3,000 ಕೆಜಿ ಡ್ರಗ್ಸ್ ವಶ

ಇದನ್ನೂ ಓದಿ: ನಾನು ಡ್ರಗ್ ಟೆಸ್ಟ್​ಗೆ ಸಿದ್ಧನಿದ್ದೇನೆ, ರಾಹುಲ್ ಗಾಂಧಿ ತಯಾರಿದ್ದಾರಾ?; ವೈಟ್ ಚಾಲೆಂಜ್​ಗೆ ಸಚಿವ ಕೆಟಿ ರಾಮರಾವ್ ಮರು ಸವಾಲು

Read Full Article

Click on your DTH Provider to Add TV9 Kannada