ಗದಗನ ಜಿಮ್ಸ್ ವೈದ್ಯರಿಂದ ಯಡವಟ್ಟು, ಕಿವಿ ಚಿಕಿತ್ಸೆಗೆ ಬಂದಿದ್ದ ಮಹಿಳೆ ಸಾವು; ಪತ್ನಿಯನ್ನ ಕಳೆದುಕೊಂಡು ಪತಿ ನರಳಾಟ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 22, 2022 | 10:03 AM

ಸಹೋದರ ಸಂಬಂಧಿಗಳ ಜೊತೆ ಆಸ್ತಿಗಾಗಿ ಜಗಳ ನಡೆದು, ಇದಕ್ಕಿದ್ದಂತೆ ಜೆಸಿಬಿ ತಂದು 20 ವರ್ಷಗಳ ಹಳೆಯ 150ಕ್ಕೂ ಹೆಚ್ಚು ಅಡಿಕೆ ಮರಗಳನ್ನ ನಾಶ ಮಾಡಲಾಗಿದೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.

ಗದಗನ ಜಿಮ್ಸ್ ವೈದ್ಯರಿಂದ ಯಡವಟ್ಟು, ಕಿವಿ ಚಿಕಿತ್ಸೆಗೆ ಬಂದಿದ್ದ ಮಹಿಳೆ ಸಾವು; ಪತ್ನಿಯನ್ನ ಕಳೆದುಕೊಂಡು ಪತಿ ನರಳಾಟ
ಮೃತ ಮಹಿಳೆ ಸುಮಿತ್ರ ಹಾಗೂ ಆಕೆಯ ಪತಿ.
Follow us on

ಗದಗ: ಜಿಮ್ಸ್ ವೈದ್ಯರ ಯಡವಟ್ಟು ಕಿವಿ ಚಿಕಿತ್ಸೆಗೆ (Ear Treatment) ಬಂದ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಗದಗ ತಾಲೂಕಿನ ಕಣವಿ-ಹೊಸೂರು ಗ್ರಾಮದ ಸುಮಿತ್ರ ಬಡಿಗೇರ (35) ಮೃತ ಮಹಿಳೆ. ಕಿವಿಗೆ ಬಿದ್ದಿದ್ದ ದೊಡ್ಡ ತೂತು‌ ಮುಚ್ಚಿಸಿಕೊಳ್ಳಲು ಚಿಕಿತ್ಸೆ ಪಡೆಯಲು ಮಹಿಳೆ ಬಂದಿದ್ದರು. ಹೊಸ ಕಿವಿಯೋಲೆ ಧರಿಸಲು ಶಸ್ತ್ರ ಚಿಕಿತ್ಸೆ ಮೂಲಕ ಕಿವಿ ತೂತು ಮುಚ್ಚಿಸಿಕೊಳ್ಳಲು ಬಂದಿದ್ದಳು. ವೈದ್ಯರ ಯಡವಟ್ಟಿನಿಂದ ಮಹಿಳೆ ಸಾವನ್ನಪ್ಪಿದ್ದಾಳೆ ಅಂತ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಯಾವ ಇಂಜೆಕ್ಷನ್ ಕೊಟ್ಟರೋ ಗೊತ್ತಿಲ್ಲ. ಆರಾಮಾಗಿದ್ದಾಕೆ ಸಾವನ್ನಪ್ಪಿದ್ದಾಳೆ ಅಂತ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ನಿ ಕಳೆದುಕೊಂಡು ಎದೆ ಬಡಿದುಕೊಂಡು ಪತಿ ಗೋಳಾಡಿದ್ದು, ಅಂಬ್ಯುಲೆನ್ಸ್ ಚಕ್ರದಡಿ ಸಿಲುಕಿ ಸಾಯಲು ಮೃತ ಮಹಿಳೆ ಪತಿ ಯತ್ನಿಸಿದ್ದಾನೆ. ನನಗೆ ನ್ಯಾಯ ಬೇಕು. ವೈದ್ಯರ ಮೇಲೆ ಕ್ರಮ ಕೈಗೊಳ್ಳಿ ಅಂತ ಆಕ್ರೋಶ ಹೊರಹಾಕಿದ್ದಾರೆ.

ಸಹೋದರರಿಬ್ಬರ ಆಸ್ತಿ ಜಗಳ; ಅಡಿಕೆ ಮರ ನಾಶ;

ದಾವಣಗೆರೆ: ಸಹೋದರ ಸಂಬಂಧಿಗಳ ಜೊತೆ ಆಸ್ತಿಗಾಗಿ ಜಗಳ ನಡೆದು, ಇದಕ್ಕಿದ್ದಂತೆ ಜೆಸಿಬಿ ತಂದು 20 ವರ್ಷಗಳ ಹಳೆಯ 150ಕ್ಕೂ ಹೆಚ್ಚು ಅಡಿಕೆ ಮರಗಳನ್ನ ನಾಶ ಮಾಡಲಾಗಿದೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಸುದರ್ಶನ (30) ಎಂಬಾತನಿಂದ ಕೃತ್ಯ ಮಾಡಲಾಗಿದೆ. ಕಳೆದ 25 ವರ್ಷಗಳ ಹಿಂದೆ ಸಹೋದರ ಸಬಂಧಿಗಳ ಆಸ್ತಿ ಪಾಲು ಭಾಗ ಮಾಡಲಾಗಿದ್ದು, ಇನ್ನೊಮ್ಮೆ ಪಾಲು ಆಗಬೇಕೆಂದು ಸುದರ್ಶನ ಪಟ್ಟು ಹಿಡಿದ್ದಾನೆ. ಹೀಗೆ ಮಾತುಕತೆ ನಡೆಯುತ್ತಿದ್ದಂತೆ ಅಡಿಕೆ ಮರಗಳ‌ನ್ನ ಸುದರ್ಶನ ನಾಶ ಮಾಡಿದ್ದಾನೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ಸಂಬಂಧಿಕರಿಗೆ ಕೊಲೆ ಬೇದರಿಕೆ ಕೂಡ ಹಾಕಿದ್ದಾನೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಸಂಬಂಧಿಕರು, ಆರೋಪಿ ಬಂಧನಕ್ಕೆ ಆಗ್ರಹಿಸಿದ್ದಾರೆ.

ಹುಬ್ಬಳ್ಳಿ- ಧಾರವಾಡ ಕಮೀಷನರೇಟ್ ವತಿಯಿಂದ ಮುಚ್ಚಳಿಕೆ:

ಧಾರವಾಡ: ಹುಬ್ಬಳ್ಳಿಯಲ್ಲಿಂದು ರಂಗಪಂಚಮಿ ಹಿನ್ನಲೆ, ಇಂದಿನಿಂದ 1 ವರ್ಷದವರೆಗೆ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಲ್ಲವೆಂದು 450ಕ್ಕೂ ಹೆಚ್ಚು ರೌಡಿಗಳು ಬಾಂಡ್ ಬರೆದುಕೊಟ್ಟಿದ್ದಾರೆ. ಜಿಲ್ಲೆಯ ವಿವಿಧ ಠಾಣೆಗಳಲ್ಲಿ 50 ಸಾವಿರ, 1 ಲಕ್ಷ ರೂ. ಬಾಂಡ್​ನಲ್ಲಿ ಬರೆದುಕೊಟ್ಟಿದ್ದಾರೆ. ಯಾವುದೇ ಅಹಿತಕರ ಘಟನೆ ಆಗಬಾರದು ಎನ್ನೋ ಮುನ್ನಚ್ಚರಿಕೆ ಕ್ರಮವಾಗಿ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್ ಸೂಚನೆ ಮೇರೆಗೆ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.

ಇದನ್ನೂ ಓದಿ:

ಬೆಂಗಳೂರಿನಲ್ಲಿಂದು ಬೆಳ್ಳಂಬೆಳಗ್ಗೆ 9 ಕಡೆ ಎಸಿಬಿ ದಾಳಿ