ಬೆಳಗಾವಿಯಲ್ಲಿ ಬಾಲಕಿಯರ ಮೇಲೆ ಗ್ಯಾಂಗ್ ರೇಪ್
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ನಡೆದ ಭಯಾನಕ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಆರೋಪಿಗಳು ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ, ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಬೆಳಗಾವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಬೆಳಗಾವಿ, ಜನವರಿ 15: ರಾಯಬಾಗ (Raibag) ತಾಲೂಕಿನ ಸವಸುದ್ದಿ ಗ್ರಾಮದ ಬಳಿಯ ಗುಡ್ಡಗಾಡು ಪ್ರದೇಶದಲ್ಲಿ ಬಾಲಕಿಯರ ಮೇಲೆ ಗ್ಯಾಂಗ್ ರೇಪ್ (Sexusal Assult) ಆಗಿದೆ. ಮೂವರು ಸೇರಿಕೊಂಡು ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರ ಎಸಗಿದ ಅಭಿಷೇಕ್, ಆದಿಲ್ ಜಮಾದಾರ್ ಮತ್ತು ಚಾಲಕ ಕೌತುಕ್ ಬಡಿಗೇರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ಮಾತನಾಡಿ, “ಆರೋಪಿ ಅಭಿಷೇಕ್ ಇನ್‌ಸ್ಟಾಗ್ರಾಂ ಮೂಲಕ ಓರ್ವ ಬಾಲಕಿಗೆ ಪರಿಚಯವಾಗಿದ್ದಾನೆ. ಸವದತ್ತಿಗೆ ಹೋಗುತ್ತಿದ್ದೇನೆ ನೀನು ಬಾ ಎಂದು ಬಾಲಕಿಗೆ ಪುಸಲಾಯಿಸಿದ್ದಾನೆ. ಈತನ ಮಾತು ನಂಬಿ, ನೊಂದ ಬಾಲಕಿ ತನ್ನ ಸ್ನೇಹಿತೆಯನ್ನ ಕರೆದುಕೊಂಡು, ಇಬ್ಬರೂ ಒಟ್ಟಾಗಿ ಹಾರೂಗೇರಿ ಬಸ್ ನಿಲ್ದಾಣದಕ್ಕೆ ಹೋಗಿದ್ದಾರೆ” ಎಂದು ಹೇಳಿದರು.
“ಅಲ್ಲಿ, ಆರೋಪಿ ಅಭಿಷೇಕ ಸಂತ್ರಸ್ತ ಬಾಲಕಿಯರನ್ನು ಎರ್ಟಿಗಾ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಎರ್ಟಿಗಾ ಕಾರಿನಲ್ಲಿ ಮೂರೂ ಜನ ಆರೋಪಿಗಳಿದ್ದರು. ಸಂತ್ರಸ್ತ ಬಾಲಕಿಯರನ್ನು ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಬಳಿಯ ಗುಡ್ಡಗಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಜನವರಿ 3ರಂದು ಮಧ್ಯಾಹ್ನದ ವೇಳೆಗೆ ಗುಡ್ಡದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದಾರೆ” ಎಂದು ತಿಳಿಸಿದರು.
“ದೂರು ಕೊಟ್ಟ ಬಾಲಕಿ ಮೇಲೆ ಅಭಿಷೇಕ ಬಳಿಕ ಕಾರು ಚಾಲಕ ಕೌತುಕ್ ಬಡಿಗೇರಿ ಅತ್ಯಾಚಾರವೆಸಗುತ್ತಾರೆ. ಇದೇ ವೇಳೆ ಕಾರಿನಲ್ಲಿ ಕುಳಿತಿದ್ದ ಬಾಲಕಿ ಮೇಲೆ ಆದಿಲ್ ಜಮಾದಾರ್ ಅತ್ಯಾಚಾರವೆಸಗುತ್ತಾನೆ. ಆರೋಪಿಗಳು ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡು, ಬಳಿಕ ಬ್ಲ್ಯಾಕ್ ಮೇಲ್ ಮಾಡಿದ್ದಾರೆ” ಎಂದರು.
ಇದನ್ನೂ ಓದಿ: ಅತ್ಯಾಚಾರವೆಸಗಿ ಬಲವಂತದಿಂದ ಮದುವೆಯಾಗಿ ಬಾಣಲೆ, ಸಿಗರೇಟ್ನಿಂದ ಸುಟ್ಟು ಚಿತ್ರಹಿಂಸೆ ನೀಡಿದ ಗಂಡ
“ಆರೋಪಿತರು ಸಂತ್ರಸ್ತ ಬಾಲಕಿಯರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಮುಂದಿನ ವಾರ ಗೋವಾಕ್ಕೆ ಬರಬೇಕು ಅಂತ ಬ್ಲ್ಯಾಕ್ ಮೇಲ್ ಮಾಡಿದರು. ಬರದಿದ್ರೇ ವಿಡಿಯೋ ವೈರಲ್ ಮಾಡುತ್ತೇವೆ ಎಂದು ಹೆದರಿಸಿದು. ದೂರು ಕೊಟ್ಟರೇ ಕೊಲೆ ಮಾಡುತ್ತೇವೆ ಅಂತ ಬೆದರಿಕೆ ಹಾಕಿದ್ದರು” ಎಂದು ಹೇಳಿದರು.
“ಸಂತ್ರಸ್ತ ಬಾಲಕಿಯರು ಮನೆಯಲ್ಲಿ ಈ ವಿಚಾರ ತಿಳಿಸಿದ್ದಾರೆ. ಬಳಿಕ, ಸಂತ್ರಸ್ತ ಬಾಲಕಿ ತಮ್ಮ ಸೋದರ ಸಂಬಂಧಿ ಜೊತೆಗೆ ಬಂದು ಜನವರಿ 13ರಂದು ಹಾರೂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಕೊಟ್ಟ 24 ಗಂಟೆಯೊಳಗೆ ಇಬ್ಬರು ಆರೋಪಿಯನ್ನ ಬಂಧಿಸಲಾಗಿದೆ. ನಂತರ, ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ” ಎಂದರು.
“ಆರೋಪಿಗಳ ಹಿನ್ನಲೆಯನ್ನು ಪರಿಶೀಲನೆ ಮಾಡುತ್ತೇವೆ. ಇನ್‌ಸ್ಟಾಗ್ರಾಂನಲ್ಲಿ ಹುಡಗಿ ಹಾಕಿದ್ದ ರೀಲ್ಸ್ ಪಾಲೋ ಮಾಡುತ್ತಿದ್ದ. ಅವರ ಮೊಬೈಲ್ಗಳನ್ನು ಜಪ್ತಿ ಮಾಡಿದ್ದು ಅದರಲ್ಲಿ ವಿಡಿಯೋಗಳು ಸಿಕ್ಕಿವೆ. ಗ್ಯಾಂಗ್ ರೇಪ್ ಪ್ರಕರಣ ಅಂತ ಕೇಸ್ ದಾಖಲಿಸಿದ್ದೇವೆ” ಎಂದು ಮಾಹಿತಿ ನೀಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:08 pm, Wed, 15 January 25