ಅಡುಗೆ ವಿಚಾರದಲ್ಲಿ ರೂಮ್​ಮೇಟ್ ಜತೆ ಜಗಳ, ಕೊಲೆಯಲ್ಲಿ ಅಂತ್ಯ

ಮನೆಯಲ್ಲಿ ಅಡುಗೆ ಮಾಡುವ ವಿಚಾರವಾಗಿ ರೂಮ್​ಮೇಟ್​ ಜತೆ ಆರಂಭವಾದ ಜಗಳ ಕೊಲೆಯಲ್ಲಿ ಮುಗಿದಿದೆ. ಉತ್ತರ ಪ್ರದೇಶದ ಘಾಜಿಯಾಬಾದ್​ನ ಬಾಡಿಗೆ ಮನೆಯಲ್ಲಿ ಸ್ನೇಹಿತರಿಬ್ಬರು ಅಡುಗೆ ಮಾಡುವ ವಿಚಾರದಲ್ಲಿ ಕಿತ್ತಾಡಿಕೊಂಡಿದ್ದಾರೆ. ಅದರಲ್ಲಿ ಒಬ್ಬ ದೇಶಿ ಹಾಗೂ ವಿದೇಶಿ ಮದ್ಯವನ್ನು ಮಿಶ್ರಣ ಮಾಡಿ ಕುಡಿಸಿ ಸ್ನೇಹಿತನ್ನೇ ಸಾಯಿಸಿರುವ ವಿಚಾರ ತಿಳಿದುಬಂದಿದೆ. ಮನೆಯಲ್ಲಿ ಅಡುಗೆ ಮಾಡುವ ವಿಚಾರವಾಗಿ ರೂಮ್​ಮೇಟ್​ ಜತೆ ಆರಂಭವಾದ ಜಗಳ ಕೊಲೆಯಲ್ಲಿ ಮುಗಿದಿದೆ. ಉತ್ತರ ಪ್ರದೇಶದ ಘಾಜಿಯಾಬಾದ್​ನ ಬಾಡಿಗೆ ಮನೆಯಲ್ಲಿ ಸ್ನೇಹಿತರಿಬ್ಬರು ಅಡುಗೆ ಮಾಡುವ ವಿಚಾರದಲ್ಲಿ ಕಿತ್ತಾಡಿಕೊಂಡಿದ್ದಾರೆ. ಅದರಲ್ಲಿ ಒಬ್ಬ ದೇಶಿ ಹಾಗೂ ವಿದೇಶಿ ಮದ್ಯವನ್ನು ಮಿಶ್ರಣ ಮಾಡಿ ಕುಡಿಸಿ ಸ್ನೇಹಿತನ್ನೇ ಸಾಯಿಸಿರುವ ವಿಚಾರ ತಿಳಿದುಬಂದಿದೆ.

ಅಡುಗೆ ವಿಚಾರದಲ್ಲಿ ರೂಮ್​ಮೇಟ್ ಜತೆ ಜಗಳ, ಕೊಲೆಯಲ್ಲಿ ಅಂತ್ಯ
ಪ್ರಾತಿನಿಧಿಕ ಚಿತ್ರ

Updated on: Mar 30, 2025 | 1:59 PM

ಉತ್ತರ ಪ್ರದೇಶ, ಮಾರ್ಚ್​ 30: ಅಡುಗೆ(Cooking) ಮಾಡುವ ವಿಚಾರದಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಉತ್ತರ ಪ್ರದೇಶದ ಘಾಜಿಯಾಬಾದ್​ನ ಬಾಡಿಗೆ ಮನೆಯಲ್ಲಿ ಸ್ನೇಹಿತರಿಬ್ಬರು ಅಡುಗೆ ಮಾಡುವ ವಿಚಾರದಲ್ಲಿ ಕಿತ್ತಾಡಿಕೊಂಡಿದ್ದಾರೆ. ಅದರಲ್ಲಿ ಒಬ್ಬ ದೇಶಿ ಹಾಗೂ ವಿದೇಶಿ ಮದ್ಯವನ್ನು ಮಿಶ್ರಣ ಮಾಡಿ ಕುಡಿಸಿ ಸ್ನೇಹಿತನ್ನೇ ಸಾಯಿಸಿರುವ ವಿಚಾರ ಬಹಿರಂಗಗೊಂಡಿದೆ.

ಆರೋಪಿ ಸುಧೀರ್ ಶರ್ಮಾ, ದೇಶೀಯ ಮತ್ತು ವಿದೇಶಿ ಮದ್ಯದ ಮಿಶ್ರಣವನ್ನು ಕುಡಿಸಿದ್ದಾನೆ ಎಂದು ಆರೋಪಿಸಲಾಗಿದೆ. ರೂಮ್‌ಮೇಟ್ ಅನ್ನು ಕೊಂದ ಆರೋಪದ ಮೇಲೆ 45 ವರ್ಷದ ವ್ಯಕ್ತಿಯನ್ನು ಶನಿವಾರ ಬಂಧಿಸಲಾಗಿದೆ. ಮಾರ್ಚ್ 21 ರಂದು ಬಾಡಿಗೆ ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿತು. ಖೋಡಾ ಪೊಲೀಸರು ಬಂದು ಬಾಗಿಲು ಒಡೆದು ನೋಡಿದಾಗ ಒಳಗೆ ಕೊಳೆತ ಶವ ಪತ್ತೆಯಾಗಿದೆ. ಬಲಿಯಾದವರನ್ನು ಫರೂಕಾಬಾದ್ ನಿವಾಸಿ 32 ವರ್ಷದ ನೇತ್ರಮ್ ಶರ್ಮಾ ಎಂದು ಗುರುತಿಸಲಾಗಿದೆ.

ತನಿಖೆಯ ಸಮಯದಲ್ಲಿ, ನೇತ್ರಮ್ ಶರ್ಮಾ ಕಳೆದ ಕೆಲವು ತಿಂಗಳುಗಳಿಂದ ಮಧು ವಿಹಾರ್‌ನಲ್ಲಿ ತನ್ನ ರೂಮ್‌ಮೇಟ್ ಸುಧೀರ್ ಶರ್ಮಾ ಜೊತೆ ವಾಸಿಸುತ್ತಿದ್ದನೆಂಬ ವಿಚಾರ ತಿಳಿದುಬಂದಿದೆ. ಮಾರ್ಚ್ 17 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಸುಧೀರ್ ಹೊರಗಿನಿಂದ ಮನೆಗೆ ಬೀಗ ಹಾಕಿ ಹಿಂತಿರುಗಲಿಲ್ಲ ಎಂದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ಇದು ಅನುಮಾನಗಳನ್ನು ಹುಟ್ಟುಹಾಕಿತು, ಪೊಲೀಸರು ಆತನನ್ನು ಪತ್ತೆಹಚ್ಚಲು ಪ್ರಾರಂಭಿಸಿದರು.

ಇದನ್ನೂ ಓದಿ
ನಾಲ್ವರನ್ನು ಹತ್ಯೆಗೈದು ಶವಗಳ ಜತೆ ರಾತ್ರಿ ಕಳೆದ, ಬೆಳಗ್ಗೆ ಬಾಡೂಟ ಉಂಡು ಹೋದ
ಸೈಬರ್ ವಂಚಕರ ಬಲೆಗೆ ಬಿದ್ದ ವೃದ್ಧ ದಂಪತಿ ದುರಂತ ಸಾವು!
ಗೌರಿ ಹತ್ಯೆ ಕೇಸ್​: ಹೆಂಡ್ತಿ ಕೊಂದು ಸೂಟ್​ಕೇಸ್​ಗೆ ತುಂಬಿದ್ದೇಕೆ ಪತಿ?
ಮನೆಯಲ್ಲಿ ಕೂಡಿಹಾಕಿದ್ದಕ್ಕೆ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ವ್ಯಕ್ತಿ!

ಮತ್ತಷ್ಟು ಓದಿ: ದೆಹಲಿ: ಮಂಚದ ಪೆಟ್ಟಿಗೆಯಲ್ಲಿ ಮಹಿಳೆಯ ಶವ ಪತ್ತೆ, ಫ್ಲಾಟ್ ಮಾಲೀಕನ ಬಂಧನ, ಪತಿ ಪರಾರಿ

ವಿಚಾರಣೆಯ ಸಮಯದಲ್ಲಿ, ಅಡುಗೆಗೆ ಸಂಬಂಧಿಸಿದ ಜಗಳದಲ್ಲಿ ನೇತ್ರಮ್ ಅವರನ್ನು ಕೊಂದಿದ್ದಾಗಿ ಸುಧೀರ್ ಒಪ್ಪಿಕೊಂಡಿದ್ದಾನೆ. ಊಟ ಹೊರಗಿನಿಂದ ಆರ್ಡರ್ ಮಾಡಬೇಕೆಂದು ಒಬ್ಬರು ಹೇಳಿದರೆ ಮತ್ತೊಬ್ಬರು ಮನೆಯಲ್ಲಿಯೇ ಮಾಡಿ ತಿನ್ನೋಣ ಎಂದಿದ್ದರು ಈ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ್ದರು. ಮಾರ್ಚ್​ 15ರಂದು ಕೂಡ ತೀವ್ರ ವಾಗ್ವಾದ ನಡೆದಿತ್ತು. ಈ ಸಂದರ್ಭದಲ್ಲಿ ನೇತ್ರಮ್ ಸುಧೀರ್ ಮೇಲೆ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಎರಡು ರೀತಿಯ ಮದ್ಯವನ್ನು ಬೆರೆಸುವುದು ಮಾರಕವಾಗಬಹುದು ಎಂದು ಆರೋಪಿ ಈ ಹಿಂದೆ ಕೇಳಿದ್ದಾಗಿ ತಿಳಿಸಿದ್ದಾನೆ. ಮಾರ್ಚ್ 16 ರ ರಾತ್ರಿ, ನೇತ್ರಮ್ ಗೆ ದೇಶೀಯ ಮತ್ತು ವಿದೇಶಿ ಮದ್ಯದ ಮಿಶ್ರಣವನ್ನು ಕುಡಿಯುವಂತೆ ಮಾಡಿದ. ಮಾದಕ ವ್ಯಸನಿಯಾಗಿದ್ದ ನೇತ್ರಮ್ ಪ್ರಜ್ಞೆ ತಪ್ಪಿದ ನಂತರ, ಸುಧೀರ್ ಆತನನ್ನು ಕಂಬಳಿಯಿಂದ ಮುಚ್ಚಿ ಪರಾರಿಯಾಗಿದ್ದಾನೆ.

ಮದ್ಯದಲ್ಲಿ ವಿಷಕಾರಿ ಪದಾರ್ಥಗಳು ಬೆರೆಸಲಾಗಿದೆಯೇ ಎಂದು ಕಂಡುಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಖೋಡಾ ಪೊಲೀಸರು ಮಾರ್ಚ್ 29 ರಂದು ಖೋಡಾ ಪ್ರದೇಶದ ಅಹಲ್ಯಾಬಾಯಿ ಗೇಟ್ ಬಳಿ ಸುಧೀರ್ ಶರ್ಮಾ ಅವರನ್ನು ಬಂಧಿಸಿದರು. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 103(1) (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ