Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಣ್ಣೆ ಪಾರ್ಟಿ ಮಾಡ್ತಿದ್ದಾಗಲೇ ಕೊಚ್ಚಿ ಕೊಂದ ಹಂತಕರು: ಯುಗಾದಿಯಂದೇ ಹೆಣವಾದ ಕುಖ್ಯಾತ ರೌಡಿಶೀಟರ್​​

ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಕುಖ್ಯಾತ ರೌಡಿ ಶೀಟರ್ ನೇಪಾಳಿ ಮಂಜನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮಾಡುವಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.

ಎಣ್ಣೆ ಪಾರ್ಟಿ ಮಾಡ್ತಿದ್ದಾಗಲೇ ಕೊಚ್ಚಿ ಕೊಂದ ಹಂತಕರು: ಯುಗಾದಿಯಂದೇ ಹೆಣವಾದ ಕುಖ್ಯಾತ ರೌಡಿಶೀಟರ್​​
ಕುಖ್ಯಾತ ರೌಡಿಶೀಟರ್ ನೇಪಾಳಿ ಮಂಜ
Follow us
ರಾಮು, ಆನೇಕಲ್​
| Updated By: ಗಂಗಾಧರ​ ಬ. ಸಾಬೋಜಿ

Updated on:Mar 31, 2025 | 8:07 AM

ಆನೇಕಲ್, ಮಾರ್ಚ್​ 31: ಫ್ಯಾಮಿಲಿ, ಮಕ್ಕಳಿದ್ದಾರೆ ಒಳ್ಳೆಯವರಾಗಿ ಬದುಕಿ ಅಂತ ಪೊಲೀಸರು ಕರೆದು ಬುದ್ಧಿ ಹೇಳಿದ್ದರು. ಸ್ನೇಹಿತರು, ಆಪ್ತರು ಕರೆದರೂ ಅಂತಾ ಹೋದರೆ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತೀರಾ ಅನ್ನೋ ಎಚ್ಚರಿಕೆ ಕೊಟ್ಟಿದ್ದರು. ಇಷ್ಟಾದರೂ ಬುದ್ಧಿ ಕಲಿಯದ ರೌಡಿಶೀಟರ್​ (Rowdy sheeter) ಇದೀಗ ಹಾದಿಬೀದಿಯಲ್ಲಿ ಹೆಣವಾಗಿ (death) ಹೋಗಿದ್ದಾನೆ. ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಗೊಲ್ಲಹಳ್ಳಿ ಮುಖ್ಯ ರಸ್ತೆಯಲ್ಲಿ ಕುಖ್ಯಾತ ರೌಡಿಶೀಟರ್ ಮಂಜ ಅಲಿಯಾಸ್ ನೇಪಾಳಿ ಮಂಜನ ಬರ್ಬರ ಕೊಲೆ ನಡೆದಿರುವಂತಹ ಘಟನೆ ನಡೆದಿದೆ.

ಎಣ್ಣೆ ಪಾರ್ಟಿ ಮಾಡ್ತಿದ್ದಾಗಲೇ ಕೊಚ್ಚಿ ಕೊಂದ ಹಂತಕರು!

ರೌಡಿಶೀಟರ್ ಮಂಜ ಅಲಿಯಾಸ್ ನೇಪಾಳಿ ಮಂಜ, ಎರಡು ಕೊಲೆ, ಕೊಲೆ ಯತ್ನ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿದ್ದ. ಹೆಬ್ಬಗೋಡಿ ಸೇರಿದಂತೆ ಹಲವೆಡೆ ಹವಾ ಮೇಂಟೇಂನ್ ಮಾಡ್ಕೊಂಡು ಓಡಾಡ್ತಿದ್ದ. ಈತನ ವಿರುದ್ಧ ಪೊಲೀಸರು ಗೂಂಡಾ ಕೇಸ್ ಓಪನ್ ಮಾಡಲಾಗಿತ್ತು. ಮಣ್ತಿನ್ನೊ ಕೆಲಸ ಮಾಡುತ್ತಿದ್ದ ನೇಪಾಳಿ ಮಂಜ ಇತ್ತೀಚೆಗಷ್ಟೇ ಕುಟುಂಬ ಸಮೇತ ಕುಣಿಗಲ್​​ಗೆ ಶಿಫ್ಟ್ ಆಗಿದ್ದ. ನಿನ್ನೆ ಯುಗಾದಿ ಹಬ್ಬ ಇದ್ದಿದ್ರಿಂದ ಸ್ನೇಹಿತರು ಕರೆದರೂ ಅಂತಾ ಕುಣಿಗಲ್​ನಿಂದ ಬೆಂಗಳೂರಿಗೆ ರೌಡಿಶೀಟರ್ ಮಂಜ ಬಂದಿದ್ದಾನೆ. ಇಬ್ಬರು ಸ್ನೇಹಿತರ ಜೊತೆ ಆನೇಕಲ್ ತಾಲೂಕಿನ ಗೊಲ್ಲಹಳ್ಳಿ ಬಳಿ ನಿರ್ಜನ ಪ್ರದೇಶದಲ್ಲಿ ರಾತ್ರಿ ಎಣ್ಣೆ ಪಾರ್ಟಿ ಮಾಡ್ತಿದ್ರಂತೆ. ಈ ವೇಳೆ 2 ಬೈಕ್​ನಲ್ಲಿ ಎಂಟ್ರಿಕೊಟ್ಟಿದ್ದ ಐವರ ಗ್ಯಾಂಗ್ ಲಾಂಗು, ಮಚ್ಚು, ಚಾಕುವಿನಿಂದ ದಾಳಿ ಮಾಡಿ ಮಂಜನನ್ನೂ ಕೊಚ್ಚಿ ಕೊಂದಿದ್ದಾರೆ.

ಇದನ್ನೂ ಓದಿ: 2ನೇ ಮದ್ವೆಯಾದ ಪತಿ: ಮೊದಲ ಹೆಂಡ್ತಿ ಜೀವನಾಂಶ ಕೇಳಿದ್ದಕ್ಕೆ ಗಂಡ ರಾಕ್ಷಸ ಅವತಾರ

ಇದನ್ನೂ ಓದಿ
Image
ಹೆಂಡ್ತಿ ಜೀವನಾಂಶ ಕೇಳಿದ್ದಕ್ಕೆ ಯುಗಾದಿಯಂದೇ ಗಂಡ ರಾಕ್ಷಸ ಅವತಾರ!
Image
ನಾಲ್ವರನ್ನು ಹತ್ಯೆಗೈದು ಶವಗಳ ಜತೆ ರಾತ್ರಿ ಕಳೆದ, ಬೆಳಗ್ಗೆ ಬಾಡೂಟ ಉಂಡು ಹೋದ
Image
ಚಿತ್ರದುರ್ಗ: ಟಿಟಿ ವಾಹನ ಪಲ್ಟಿಯಾಗಿ ಮೂವರು ದುರ್ಮರಣ
Image
ಸೈಬರ್ ವಂಚಕರ ಬಲೆಗೆ ಬಿದ್ದ ವೃದ್ಧ ದಂಪತಿ ದುರಂತ ಸಾವು!

ಕೊಲೆ, ಕೊಲೆಯತ್ನ, ರಾಬರಿ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ನೇಪಾಳಿ ಮಂಜ ಭಾಗಿ ಆಗಿದ್ದ. ಕಳೆದ 2 ತಿಂಗಳ ಹಿಂದಷ್ಟೇ ಪೊಲೀಸರು ಕರೆದು ವಾರ್ನಿಂಗ್ ಕೂಡ ಕೊಟ್ಟಿದ್ದರು. ಆದರೂ ಪಾಠ ಕಲಿಯದ ಮಂಜ ತನ್ನ ಹಳೇ ಚಾಳಿ ಮುಂದುವರಿಸಿದ್ದ. ಇನ್ನು ಸ್ನೇಹಿತರ ಜೊತೆಗೆ ಎಣ್ಣೆ ಪಾರ್ಟಿ ಮಾಡೋದಕ್ಕೆ ಮಂಜ ಬಂದಿದ್ದಾನೆ ಅನ್ನೋದನ್ನ ಹಂತಕರು ಗ್ಯಾಂಗ್ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಮಾರಕಾಸ್ತ್ರದಿಂದ ದಾಳಿ ಮಾಡಿ ನೇಪಾಳಿ ಮಂಜನನನ್ನ ಭೀಕರವಾಗಿ ಹತ್ಯೆಗೈದಿದ್ದಾರೆ. ಹಳೇ ವೈಷಮ್ಯಕ್ಕೆ ಕೊಲೆ ಮಾಡಿರುವ ಶಂಕೆ ಮೂಡಿದೆ. ಹೆಬ್ಬುಗೋಡಿ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಎಸ್​ಪಿ ಸಿ.ಕೆ.ಬಾಬಾ ಹೇಳಿದ್ದಿಷ್ಟು 

ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್​ಪಿ ಸಿ.ಕೆ.ಬಾಬಾ ಪ್ರತಿಕ್ರಿಯಿಸಿದ್ದು, ರಾತ್ರಿ 10.45ರ ಸುಮಾರಿಗೆ ನೇಪಾಳಿ ಮಂಜನ ಕೊಲೆ ನಡೆದಿದೆ. ವೀರಸಂದ್ರ ನಿವಾಸಿಯಾಗಿದ್ದ ಮೃತ ನೇಪಾಳಿ ಮಂಜು, ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಮಾಡುತ್ತಿದ್ದಾಗ ದಾಳಿ ನಡೆದಿದೆ. ಎರಡು ಬೈಕ್​ಗಳಲ್ಲಿ ಬಂದಿದ್ದ ದುಷ್ಕರ್ಮಿಗಳಿಂದ ಕೃತ್ಯ ನಡೆದಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಸಾಧ್ಯತೆ ಇದೆ ಎಂದಿದ್ದಾರೆ.

ಇದನ್ನೂ ಓದಿ: ಮಡಿಕೇರಿ: ನಾಲ್ವರನ್ನು ಹತ್ಯೆಗೈದು ಶವಗಳ ಜತೆ ರಾತ್ರಿ ಕಳೆದ, ಬೆಳಗ್ಗೆ ಬಾಡೂಟ ಉಂಡು ಹೋದ

ಇತ್ತೀಚೆಗೆ ಮಂಜ ಕುಟುಂಬ ಸಮೇತ ಕುಣಿಗಲ್​​​ಗೆ ಶಿಫ್ಟ್ ಆಗಿದ್ದ. ಯುಗಾದಿ ಹಬ್ಬ ಹಿನ್ನೆಲೆ ಮಂಜನನ್ನ ಕರೆಸಿಕೊಂಡಿದ್ದ ಸ್ನೇಹಿತರು, ಎಣ್ಣೆಪಾರ್ಟಿ ಮಾಡುತ್ತಿದ್ದಾಗಲೇ ಅಟ್ಯಾಕ್ ಆಗಿದೆ. ಪರಿಚಿತರಿಂದಲೇ ನೇಪಾಳಿ ಮಂಜ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಮಂಜನನ್ನು ಗೂಂಡಾಕಾಯ್ದೆ ಜೊತೆಗೆ ಗಡಿಪಾರು ಕೂಡ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಮನೆಹಾಳ್ ಕೆಲಸ ಮಾಡಿ ಊರಲ್ಲಿ ಸೆಟಲ್ ಆಗಿದ್ದ ನೇಪಾಳಿ ಮಂಜ ಯುಗಾದಿ ದಿನವೇ ತನ್ನ ಅಡ್ಡಾದಲ್ಲಿ ಬೀದಿ ಹೆಣವಾಗಿದ್ದಾನೆ. ಮಂಜನನ್ನ ಕರೆಸಿಕೊಂಡು ಆಪ್ತ ಸ್ನೇಹಿತರೇ ಆಪ್ ಇಟ್ಟರಾ? ಇಲ್ಲ, ಕೊಲೆಗೆ ಬೇರೆ ಏನಾದರೂ ಕಾರಣ ಇದೆಯಾ ಅನ್ನೋದು ಪೊಲೀಸ್ ತನಿಖೆ ನಂತರ ಬಯಲಾಗಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:59 am, Mon, 31 March 25

ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಪಹಲ್ಗಾಮ್​ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಹಿಂದಿ ಬದಲು ಇಂಗ್ಲಿಷ್​​ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ
ಅಪ್ಪನ ಮುಖ ದಿಟ್ಟಿಸುತ್ತಿದ್ದ ಅಭಿಜಯನಲ್ಲಿನ ತಾಕಲಾಟಗಳು ಒಂದೆರಡಲ್ಲ
ಅಪ್ಪನ ಮುಖ ದಿಟ್ಟಿಸುತ್ತಿದ್ದ ಅಭಿಜಯನಲ್ಲಿನ ತಾಕಲಾಟಗಳು ಒಂದೆರಡಲ್ಲ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ