ಉತ್ತರ ಪ್ರದೇಶ: ಪ್ರೇಯಸಿಯನ್ನು ಕೊಂದು ಹೊಲದಲ್ಲಿ ಹೂತು ಹಾಕಿದ ವ್ಯಕ್ತಿ

ವ್ಯಕ್ತಿಯೊಬ್ಬ ಪ್ರೇಯಸಿಯನ್ನು  ಹತ್ಯೆ(Murder) ಮಾಡಿ ಶವವನ್ನು ಹೊಲದಲ್ಲಿ ಹೂತು ಹಾಕಿರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಮಹಿಳೆಯ ಶವವನ್ನು ವಶಪಡಿಸಿಕೊಂಡಿದ್ದು, ಪ್ರಿಯಕರ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ. ಫೆಬ್ರವರಿ 18 ರಿಂದ ಡ್ಯಾನ್ಸರ್ ನಾಪತ್ತೆಯಾಗಿದ್ದರು ಮತ್ತು ಆಕೆಯ ಪ್ರೇಮಿ ಪೊಲೀಸರೊಂದಿಗೆ ಆಕೆಯನ್ನು ಹುಡುಕುತ್ತಿರುವಂತೆ ನಟಿಸುತ್ತಲೇ ಇದ್ದ.

ಉತ್ತರ ಪ್ರದೇಶ: ಪ್ರೇಯಸಿಯನ್ನು ಕೊಂದು ಹೊಲದಲ್ಲಿ ಹೂತು ಹಾಕಿದ ವ್ಯಕ್ತಿ
ಕ್ರೈಂ

Updated on: Mar 31, 2025 | 12:05 PM

ಬದೌನ್, ಮಾರ್ಚ್​ 31: ವ್ಯಕ್ತಿಯೊಬ್ಬ ಪ್ರೇಯಸಿಯನ್ನು  ಕೊಲೆ(Murder) ಮಾಡಿ ಶವವನ್ನು ಹೊಲದಲ್ಲಿ ಹೂತು ಹಾಕಿರುವ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಮಹಿಳೆಯ ಶವವನ್ನು ವಶಪಡಿಸಿಕೊಂಡಿದ್ದು, ಪ್ರಿಯಕರ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.

ಫೆಬ್ರವರಿ 18 ರಿಂದ ಡ್ಯಾನ್ಸರ್ ನಾಪತ್ತೆಯಾಗಿದ್ದರು ಮತ್ತು ಆಕೆಯ ಪ್ರೇಮಿ ಪೊಲೀಸರೊಂದಿಗೆ ಆಕೆಯನ್ನು ಹುಡುಕುತ್ತಿರುವಂತೆ ನಟಿಸುತ್ತಲೇ ಇದ್ದ. ಫೆಬ್ರವರಿ 28ರಂದು ಮುಸ್ಕಾನ್ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ದೂರನ್ನು ಆಕೆಯ ಪೋಷಕರು ಸಲ್ಲಿಸಿದ್ದರು.

ಫೆಬ್ರವರಿ 18ರಿಂದ ಆಕೆ ಕಾಣೆಯಾಗಿದ್ದಾಳೆ. ಆಕೆಯ ಚಿಕ್ಕಪ್ಪ ಮತ್ತು ಸಹೋದರಿ ಹುಡುಕಲು ನಿರಂತರವಾಗಿ ಪ್ರಯತ್ನಿಸುತ್ತಿದ್ದರು. ಮುಸ್ಕಾನ್​ ಅವರನ್ನು ಪ್ರೇಮಿ ರಿಜ್ವಾನ್ ಅಪಹರಿಸಿ ಕೊಲೆ ಮಾಡಿದ್ದಾನೆ. ಆಕೆಯ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲಾಹಪುರ ಭೋಗಿ ಗ್ರಾಮದ ನಿವಾಸಿ ರಿಜ್ವಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ
ಗೌರಿ ಹತ್ಯೆ ಕೇಸ್​: ಹೆಂಡ್ತಿ ಕೊಂದು ಸೂಟ್​ಕೇಸ್​ಗೆ ತುಂಬಿದ್ದೇಕೆ ಪತಿ?
ಪ್ರೇಯಸಿಯನ್ನು ಕೊಂದ ಹೈದರಾಬಾದ್ ಅರ್ಚಕನಿಗೆ ಜೀವಾವಧಿ ಶಿಕ್ಷೆ
ಮೀರತ್​ ಕೊಲೆ ಪ್ರಕರಣ: ಮುಸ್ಕಾನ್​ ಸೌರಭ್​ನನ್ನು ತುಂಡು ತುಂಡಾಗಿ ಕತ್ತರಿಸಿದ
ಗರ್ಭಿಣಿಯಾಗಿದ್ದಾಗ್ಲೇ ಬೇರೊಬ್ಬನ ಓಡಿಹೋಗಿದ್ದ ಮಹಿಳೆ, ಮಗುವಿನ ಕೊಂದ ಮಲತಂದೆ

ರಿಜ್ವಾನ್ ನೀಡಿದ ಮಾಹಿತಿ ಮೇರೆಗೆ ಮುಸ್ಕಾನ್ ದೇಹವನ್ನು ಹೊಲದಿಂದ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ರಿಜ್ವಾನ್ ಮತ್ತು ಆತನ ಇಬ್ಬರು ಸಹಚರರಾದ ರಾಮಾವತಾರ್ ಮತ್ತು ರಾಧೇಶ್ಯಾಮ್ ಅವರನ್ನು ಬಂಧಿಸಿದ್ದಾರೆ.

ಮತ್ತಷ್ಟು ಓದಿ: ಹೆಚ್ಚಿಗೆ ಮಾತಾಡಿದ್ರೆ ನಿನ್ನನ್ನೂ ತುಂಡು ತುಂಡಾಗಿ ಕತ್ತರಿಸಿ ಡ್ರಮ್​ನಲ್ಲಿ ಹಾಕ್ತೀನಿ, ಗಂಡನಿಗೆ ಪತ್ನಿಯ ಬೆದರಿಕೆ

ನಾಲ್ಕು ವರ್ಷಗಳ ಹಿಂದೆ ರಿಜ್ವಾನ್ ಮುಸ್ಕಾನ್​ಳನ್ನು ಭೇಟಿಯಾಗಿದ್ದ, ಪರಸ್ಪರ ಹತ್ತಿರವಾಗಿದ್ದರು. ಮುಸ್ಕಾನ್ ಅವರ ಪೋಷಕರು ಹಲವು ವರ್ಷಗಳ ಹಿಂದೆ ನಿಧನರಾಗಿದ್ದರು. ಮುಸ್ಕಾನ್​ಗೆ ಆಗ ಒಬ್ಬ ಮಗ ಇದ್ದ. ನಾನು ಮುಸ್ಕಾನ್‌ಗೆ ಪ್ರತಿ ತಿಂಗಳು ಹತ್ತು ಸಾವಿರ ರೂಪಾಯಿಗಳನ್ನು ನೀಡಲು ಪ್ರಾರಂಭಿಸಿದೆ ಆದರೆ ಅವಳು ಇದರಿಂದ ಸಂತೋಷವಾಗಿರಲಿಲ್ಲ ಮತ್ತು ಪ್ರತಿ ತಿಂಗಳು ನಲವತ್ತು ಸಾವಿರ ರೂಪಾಯಿಗಳನ್ನು ಕೇಳಲು ಪ್ರಾರಂಭಿಸಿದಳು.

ತನಗೆ ಕಿರುಕುಳ ನೀಡಲು ಶುರು ಮಾಡಿದ್ದಳು. ನಾನು ಇದನ್ನು ನನ್ನ ಸ್ನೇಹಿತ ರಾಮುತರ್‌ಗೆ ಹೇಳಿದೆ. ಅದರ ನಂತರ, ನಾನು, ರಾಮುತರ್‌ ಮತ್ತು ರಾಧೇಶ್ಯಾಮ್‌ ಜೊತೆಗೂಡಿ ಮುಸ್ಕನ್‌ನನ್ನು ಕೊಂದು ಶವವನ್ನು ಗುಂಡಿಯಲ್ಲಿ ಹೂತುಹಾಕಿದೆವು ಎಂದು ರಿಜ್ವಾನ್ ಸತ್ಯ ಬಾಯ್ಬಿಟ್ಟಿದ್ದಾನೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ