ಹಾಸನ: ಮದುವೆಗೆ ಒಪ್ಪದ ಹಿನ್ನೆಲೆ ಸಿನಿಮೀಯ ರೀತಿಯಲ್ಲಿ ಶಾಲಾ ಶಿಕ್ಷಕಿಯ ಅಪಹರಣ

ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕಿಯನ್ನು ದುರುಳರು ಅಪಹರಿಸಿರುವ ಘಟನೆ ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ನಡೆದಿದೆ. ಗುರುವಾರ ಬೆಳಗ್ಗೆ ಶಿಕ್ಷಕಿ ಶಾಲೆಗೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ಶಿಕ್ಷಕಿಯ ಸಂಬಂಧಿ ರಾಮು ಎಂಬುವರು ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಹಾಸನ: ಮದುವೆಗೆ ಒಪ್ಪದ ಹಿನ್ನೆಲೆ ಸಿನಿಮೀಯ ರೀತಿಯಲ್ಲಿ ಶಾಲಾ ಶಿಕ್ಷಕಿಯ ಅಪಹರಣ
ಶಿಕ್ಷಕಿ ಅರ್ಪಿತಾ
Edited By: ವಿವೇಕ ಬಿರಾದಾರ

Updated on: Nov 30, 2023 | 11:36 AM

ಹಾಸನ ನ.30: ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯನ್ನು (Teacher) ದುರುಳರು ಸಿನಿಮೀಯ ರೀತಿಯಲ್ಲಿ ಅಪಹರಿಸಿರುವ (Kidnap) ಘಟನೆ ಹಾಸನ (Hassan) ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ನಡೆದಿದೆ. 15 ದಿನಗಳ ಹಿಂದೆ ಮದುವೆ ಪ್ರಸ್ತಾಪದೊಂದಿಗೆ ಶಿಕ್ಷಕಿ ಅರ್ಪಿತಾ ಮನೆಗೆ, ಸಂಬಂಧಿ ರಾಮು ಮತ್ತು ಪೋಷಕರು ಬಂದಿದ್ದರು. ಮದುವೆ ಪ್ರಸ್ತಾಪಕ್ಕೆ ಶಿಕ್ಷಕಿ ಅರ್ಪಿತಾ ಹಾಗೂ ಪೋಷಕರು ಒಪ್ಪಿರಲಿಲ್ಲ. ಮದುವೆ ಒಪ್ಪದ ಹಿನ್ನೆಲೆಯಲ್ಲಿ ಇಂದು (ನ.30) ಬೆಳಗ್ಗೆ ಅರ್ಪಿತಾ ಅವರನ್ನು ರಾಮು ಅಪಹರಿಸಿರುವ ಆರೋಪ ಕೇಳಿಬಂದಿದೆ. ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

ನಿಮ್ಮ ಮಗಳನ್ನು ಮದವೆ ಮಾಡಿಕೊಡಿ ಎಂದು ರಾಮು ಮತ್ತು ಆತನ ಪೋಷಕರು ಕೇಳಲು ಬಂದಿದ್ದರು. ಆದರೆ ನಾವು ಕೊಡಲ್ಲ ಅಂತ ಹೇಳಿ ಕಳಿಸಿದ್ವಿ. ಕೊಡಲ್ಲ ಅಂದಿದ್ದಕ್ಕೆ ನನ್ನ ಮಗಳನ್ನ ಅಪರಣ ಮಾಡಿದ್ದಾರೆ ಎಂದು ಅರ್ಪಿತಾ ತಾಯಿ ಆರೋಪ ಮಾಡಿದ್ದಾರೆ.

ಘಟನಾ ಸ್ಥಳಕ್ಕೆ ಹಾಸನ ಎಸ್​ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ಪತ್ತೆಗಾಗಿ ಮೂರು ತಂಡ ರಚನೆ ಮಾಡಲಾಗಿದೆ. ಸಂಬಂಧಿ ರಾಮು ಅಪಹರಣ ಮಾಡಿದ್ದಾನೆ ಎಂದು ಅರ್ಪಿತಾ ಕುಟುಂಬಸ್ಥರು ಆರೋಪ ಮಾಡಿದ್ದಾರೆ ಎಂದು ಎಸ್ಪಿ ಮೊಹಮ್ಮದ್ ಸುಜೀತಾ ಹೇಳಿದರು.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು  ಇಲ್ಲಿ ಕ್ಲಿಕ್ ಮಾಡಿ

Published On - 10:32 am, Thu, 30 November 23

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us