ಕುಡಿಯಲು ದುಡ್ಡು ಕೊಡದಿಕ್ಕೆ ಬೈಕ್ ಹತ್ತಿಸಿ ಪತ್ನಿಯನ್ನೇ ಕೊಂದ ಪಾಪಿ!

ಬಾಗಲಕೋಟೆ: ಕುಡಿಯಲು ಹಣ ನೀಡಲಿಲ್ಲ ಎಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪತ್ನಿ ಮೇಲೆ ಬೈಕ್ ಹತ್ತಿಸಿ ಕೊಲೆ ಮಾಡಿರುವ ಘಟನೆ ಇಳಕಲ್ ನಗರದ ಜೋಷಿ ಗಲ್ಲಿಯಲ್ಲಿ ನಡೆದಿದೆ. ಶಾರದ ಚೌಹಾಣ್(32) ಕೊಲೆಯಾದ ದುರ್ದೈವಿ. ಒಂದು ತಿಂಗಳು ಎಣ್ಣೆ ಸಿಗದಿದ್ದಕ್ಕೆ ಪ್ರತಿನಿತ್ಯವೂ ಪರದಾಡಿ ಹೆಂಡತಿ ಜೊತೆ ಆರೋಪಿ ಚಂದಪ್ಪ ಚೌಹಾಣ್ ಜಗಳ ಮಾಡ್ತಿದ್ದ. ನಿನ್ನೆ ಮದ್ಯದಂಗಡಿ ಓಪನ್ ಆಗಿದ್ದರಿಂದ ದುಡ್ಡು ಕೊಡುವಂತೆ ಪತ್ನಿಯನ್ನು ಪೀಡಿಸಿದ್ದಾನೆ. ಪತ್ನಿ ಕೆಲಸ ಮಾಡುವ ಮನೆ ಬಳಿ ಹೋಗಿ ಕುಡಿಯಲು ಹಣ ಕೇಳಿದ್ದಾನೆ. ದುಡ್ಡು […]

ಕುಡಿಯಲು ದುಡ್ಡು ಕೊಡದಿಕ್ಕೆ ಬೈಕ್ ಹತ್ತಿಸಿ ಪತ್ನಿಯನ್ನೇ ಕೊಂದ ಪಾಪಿ!
ಸಾಧು ಶ್ರೀನಾಥ್​

Updated on: May 05, 2020 | 4:53 PM

ಬಾಗಲಕೋಟೆ: ಕುಡಿಯಲು ಹಣ ನೀಡಲಿಲ್ಲ ಎಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪತ್ನಿ ಮೇಲೆ ಬೈಕ್ ಹತ್ತಿಸಿ ಕೊಲೆ ಮಾಡಿರುವ ಘಟನೆ ಇಳಕಲ್ ನಗರದ ಜೋಷಿ ಗಲ್ಲಿಯಲ್ಲಿ ನಡೆದಿದೆ. ಶಾರದ ಚೌಹಾಣ್(32) ಕೊಲೆಯಾದ ದುರ್ದೈವಿ.

ಒಂದು ತಿಂಗಳು ಎಣ್ಣೆ ಸಿಗದಿದ್ದಕ್ಕೆ ಪ್ರತಿನಿತ್ಯವೂ ಪರದಾಡಿ ಹೆಂಡತಿ ಜೊತೆ ಆರೋಪಿ ಚಂದಪ್ಪ ಚೌಹಾಣ್ ಜಗಳ ಮಾಡ್ತಿದ್ದ. ನಿನ್ನೆ ಮದ್ಯದಂಗಡಿ ಓಪನ್ ಆಗಿದ್ದರಿಂದ ದುಡ್ಡು ಕೊಡುವಂತೆ ಪತ್ನಿಯನ್ನು ಪೀಡಿಸಿದ್ದಾನೆ. ಪತ್ನಿ ಕೆಲಸ ಮಾಡುವ ಮನೆ ಬಳಿ ಹೋಗಿ ಕುಡಿಯಲು ಹಣ ಕೇಳಿದ್ದಾನೆ.

ದುಡ್ಡು ಇಲ್ಲ ಅಂತೇಳಿ ನಡೆದುಕೊಂಡು ಶಾರದ ಮನೆಯತ್ತ ಹೊರಟಿದ್ಲು. ಹಣ ಕೊಡದ ಸಿಟ್ಟಿನಲ್ಲಿ ಹಿಂದಿನಿಂದ ತನ್ನ ಬೈಕನ್ನು ಸ್ಪೀಡಾಗಿ ಓಡಿಸಿ ಹೆಂಡತಿಗೆ ಡಿಕ್ಕಿ ಹೊಡೆದಿದ್ದಾನೆ. ಬೈಕ್ ಡಿಕ್ಕಿಯಾಗಿ ನೆಲಕ್ಕೆ ಉರುಳಿ ಬಿದ್ದಿದ್ರೂ ಪತ್ನಿ ಕಡೆ ತಿರುಗಿಯೂ ನೋಡದೆ ಪತಿ ಮನೆ ಕಡೆ ಹೊರಟಿದ್ದ.

ಮಹಿಳೆಯ ಸ್ಥಿತಿಯನ್ನು ಕಂಡು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಮಹಿಳೆ ಮೃತಪಟ್ಟಿದ್ದಾಳೆ. ಆರೋಪಿ ಚಂದಪ್ಪ ಚೌಹಾಣ್​ಗೆ ಇಬ್ಬರು ಪತ್ನಿಯರು. ಪ್ರಕರಣ ಸಂಬಂಧ ಆರೋಪಿಯನ್ನು ಇಳಕಲ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us