ಖಾದರ್ ಬಾಗ್: ಮನೆಯಲ್ಲಿ ಗೀಸರ್ ಸ್ಫೋಟದಿಂದಾಗಿ ದಂಪತಿಗಳಿಬ್ಬರು ಸಾವನ್ನಪ್ಪಿರುವ ಘಟನೆ ಗುರುವಾರ ರಾತ್ರಿ ಹೈದರಾಬಾದ್‌ನ ಲಂಗರ್ ಹೌಜ್ ಪೊಲೀಸ್ ಠಾಣೆ ವ್ಯಾಪ್ತಿಯ ಖಾದರ್ ಬಾಗ್ ಪ್ರದೇಶದಲ್ಲಿ ನಡೆದಿದೆ. ಇದೀಗ ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದ ಸ್ನಾನಗೃಹದಲ್ಲಿನ ಗೀಸರ್ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ. ನಿಸಾರುದ್ದೀನ್ ಮತ್ತು ಅವರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಪೊಲೀಸ್ ಅಧಿಕಾರಿಗಳ ಮಾಹಿತಿಯ ಪ್ರಕಾರ, ಗುರುವಾರ ರಾತ್ರಿ 9.30 ಕ್ಕೆ, ಹೈದರಾಬಾದ್‌ನ ಖಾದರ್ ಬಾಗ್, ಲ್ಯಾಂಗರ್ ಹೌಸ್‌ನಲ್ಲಿ ಘಟನೆ ಸಂಭವಿಸಿದೆ ಎಂದು ಪ್ರದೇಶದ ಸ್ಥಳೀಯರ ಮೂಲಕ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಅಧಿಕಾರಿಗಳ ಎಸ್ ಶೃತಿ, ಇನ್ಸ್‌ಪೆಕ್ಟರ್ ಕೆ ಶ್ರೀನಿವಾಸ್ ಮತ್ತು ಹೆಚ್ಚುವರಿ ಇನ್ಸ್‌ಪೆಕ್ಟರ್ ಮುಜೀಬ್ ಉರ್ ರೆಹಮಾನ್ ಸ್ಥಳಕ್ಕೆ ಧಾವಿಸಿದಾಗ ಎರಡು ಮೃತ ದೇಹಗಳು ಆಸ್ಪತ್ರೆಗೆ ಸಾಗಿಸಿದ್ದಾರೆ.
ಇದನ್ನು ಓದಿ: Crime News: ಮಹಿಳೆ ಕುತ್ತಿಗೆಗೆ ಚಾಕು ಇಟ್ಟು ಅತ್ಯಾಚಾರಕ್ಕೆ ಯತ್ನಿಸಿದ್ದ ವಿಕೃತ ಕಾಮಿಯ ಬಂಧನ
ಮೃತ ಪಟ್ಟಿದ 26 ವರ್ಷದ ಸೈಯದ್ ನಿಸಾರುದ್ದೀನ್ ಮತ್ತು ಅವರ ಪತ್ನಿ 22 ವರ್ಷದ ಉಮ್ಮೆ ಮೊಹಿಮೀನ್ ಸೈಮಾ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದದ್ದರು ಎಂದು ಹೇಳಲಾಗಿದೆ. ಶಾಕ್ ಸರ್ಕ್ಯೂಟ್‌ನಿಂದ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.
Published On - 10:09 am, Fri, 21 October 22