AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

YouTube ಚಾನಲ್‌ಗೆ ವ್ಯೂಸ್​ ಬರಲಿಲ್ಲವೆಂದು ಲೈಫ್​ ಎಂಡ್​ ಮಾಡಿಕೊಂಡ ಐಐಟಿ ಎಂಜಿನಿಯರಿಂಗ್ ವಿದ್ಯಾರ್ಥಿ!

ಪೊಲೀಸರ ತನಿಖೆಯಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಸ್ವತಃ ಯೂಟ್ಯೂಬ್ ನಲ್ಲಿ ಗೇಮ್ ಚಾನೆಲ್ ನಡೆಸುತ್ತಿದ್ದ ದೀನಾ, ಯೂಟ್ಯೂಬ್ ನಲ್ಲಿ ವೀಕ್ಷಣೆ ಹೆಚ್ಚಾಗದ ಕಾರಣ ಒತ್ತಡಕ್ಕೆ ಒಳಗಾಗಿದ್ದ.

YouTube ಚಾನಲ್‌ಗೆ ವ್ಯೂಸ್​ ಬರಲಿಲ್ಲವೆಂದು ಲೈಫ್​ ಎಂಡ್​ ಮಾಡಿಕೊಂಡ ಐಐಟಿ ಎಂಜಿನಿಯರಿಂಗ್ ವಿದ್ಯಾರ್ಥಿ!
YouTube ಚಾನಲ್‌ಗೆ ವ್ಯೂಸ್​ ಬರಲಿಲ್ಲವೆಂದು ಲೈಫ್​ ಎಂಡ್​ ಮಾಡಿಕೊಂಡ ಐಐಟಿ ಎಂಜಿನಿಯರಿಂಗ್ ವಿದ್ಯಾರ್ಥಿ!
TV9 Web
| Edited By: |

Updated on: Jul 21, 2022 | 6:03 PM

Share

ಅಂಗೈಗೆ ಮೊಬೈಲ್​ ಫೋನ್ ಬಂದಿದ್ದೇ ಹಿಂದಿನ ಕಾಲದಲ್ಲಿ ಅಂಜನಾ ಹಾಕಿ ನೋಡಿದಂತೆ ಇಡೀ ಪ್ರಪಂಚವನ್ನು ಕುಳಿತಕಡೆಯಿಂದಲೇ ಜನ ನೋಡತೊಗಿದ್ದಾರೆ. ಸೋಷಿಯಲ್ ಆ್ಯಪ್ ಗಳಿಂದ ತುಂಬಿ ತುಳುಕುತ್ತಿರುವ ಇಂದಿನ ಅಂತರ್ಜಾಲ ಯುಗದಲ್ಲಿ ಸ್ವೇಚ್ಛೆಯಿಂದ ವಿಹರಿಸುತ್ತಿದ್ದಾರೆ.. ಯುವ ಮನಸುಗಳು ಹುಚ್ಚು ಕುದುರೆಯಂತಾಗಿವೆ. ಅದಕ್ಕೆ ಲಂಗುಲಗಾಮು ಇಲ್ಲದಂತಾಗಿದೆ. ಮೊದಲು ಅದೊಂದು ವ್ಯಸನವಾಗಿ, ನಂತರ ಅದಕ್ಕೆ ದಾಸನಾಗಿ ಕೊನೆಗೆ.. ಜೀವ ತೆಗೆಯುವ ಸಾಧನಗಳಾಗಿ ಅವು ಮಾರ್ಪಟ್ಟಿವೆ. ಅದೊಂದು ಮೋಜಿನಂತೆ ಆರಂಭವಾಗಿ, ಏಕಾಏಕಿ ಚಂಡಮಾರುತವಾಗಿ ಪರಿವರ್ತನೆಗೊಂಡು ಸಾಕಷ್ಟು (ಜೀವ)ಹಾನಿಯನ್ನುಂಟು ಮಾಡುತ್ತಿದೆ.

ಈ ಅವಧಿಯಲ್ಲಿ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಅವರು ತಮಗಾಗಿ ವಿಶೇಷ ಗುರುತನ್ನು ಪಡೆಯಲು ಹತಾಶರಾಗಿದ್ದಾರೆ. ತಮ್ಮ ಪೋಸ್ಟ್‌ಗಳಿಗೆ ಹೆಚ್ಚಿನ ಲೈಕ್‌ಗಳನ್ನು ಪಡೆಯುವ ಹಪಾಹಪಿಯಲ್ಲಿ ಎದುರಾಗುವ ಅಪಾಯಗಳನ್ನು ಅವರು ಲೆಕ್ಕಿಸುತ್ತಿಲ್ಲ. ಕಡಿಮೆ ಲೈಕ್ಸ್ ಬಂದರೆ ಅವರು ಸಹಿಸುವುದಿಲ್ಲ. ಪ್ರಪಂಚವನ್ನೇ ಕಳೆದುಕೊಂಡವರಂತೆ ತಲೆಯ ಮೇಲೆ ಭಾರ ಬಿದ್ದವರಂತೆ ಅಡುತ್ತಾರೆ. ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಅಂತಿಮವಾಗಿ ಪ್ರಾಣ ತೆಗೆಯುವ ಹಂತಕ್ಕೆ ಬಂದುಬಿಟ್ಟಿದೆ.

ಹೈದರಾಬಾದಿನಲ್ಲಿ ಇಂತಹದ್ದೇ ಆಘಾತಕಾತರಿ ಘಟನೆ ನಡೆದಿದೆ. YouTube ಚಾನಲ್‌ಗೆ ವ್ಯೂಸ್​ ಬರುತ್ತಿಲ್ಲ ಎಂದು ವಿದ್ಯಾರ್ಥಿಯೊಬ್ಬ ಕಟ್ಟಡದ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೈದರಾಬಾದ್ ಸೈದಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಕ್ರಾಂತಿ ನಗರ ಕಾಲೋನಿಯಲ್ಲಿ ಐಐಟಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕ್ರಾಂತಿನಗರದ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಹಾರಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಸಿ ದೀನಾ (C Dheena) ಎಂದು ಪೊಲೀಸರು ಗುರುತಿಸಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಘಟನಾ ಸ್ಥಳ ಹಾಗೂ ಮೃತದೇಹವನ್ನು ಪರಿಶೀಲಿಸಲಾಗಿ, ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಶವಾಗಾರಕ್ಕೆ ರವಾನಿಸಲಾಗಿದೆ. ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರ ತನಿಖೆಯಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಸ್ವತಃ ಯೂಟ್ಯೂಬ್ ನಲ್ಲಿ ಗೇಮ್ ಚಾನೆಲ್ ನಡೆಸುತ್ತಿದ್ದ ದೀನಾ, ಯೂಟ್ಯೂಬ್ ನಲ್ಲಿ ವೀಕ್ಷಣೆ ಹೆಚ್ಚಾಗದ ಕಾರಣ ಒತ್ತಡಕ್ಕೆ ಒಳಗಾಗಿದ್ದ. ಇದರಿಂದ ತೀವ್ರ ನೋವು ಅನುಭವಿಸಿದ್ದ ಮತ್ತು ಕೊನೆಗೆ ಪ್ರಾಣ ತ್ಯಜಿಸುವ ಹಂತಕ್ಕೆ ಬಲಿಯಾಗಿದ್ದಾನೆ. ದೀನಾ ಐಐಟಿ ಗ್ವಾಲಿಯರ್‌ನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ.

To read in Telugu click here

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್