ಬೆಂಗಳೂರು: ಅಂತಿಮ ದರ್ಶನಕ್ಕೆ ಬಂದು ಸ್ನೇಹಿತನಿಂದಲೇ ಕೊಲೆಯಾದ ವ್ಯಕ್ತಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 22, 2024 | 6:31 PM

ಬೆಂಗಳೂರಿನ ಕಾಟನ್ ​ಪೇಟೆ (Cottonpete)ಯ ಅಂಜನಪ್ಪ ಗಾರ್ಡನ್​ನಲ್ಲಿ ಸಾವಿನ ಮನೆಗೆ ಬಂದು ಸ್ನೇಹಿತನಿಂದಲೇ ಕೊಲೆಯಾದ ಘಟನೆ ನಡೆದಿದೆ. ಆರೋಪಿ ಸ್ಥಳದಿಂದ ಪರಾರಿ ಆಗಿದ್ದು, ಈ ಕುರಿತು ಕಾಟನ್ ಪೇಟೆ ಪೊಲೀಸ್ ಠಾಣೆ ಪೊಲೀಸರು ಕೊಲೆ‌ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸಿದ್ದಾರೆ.

ಬೆಂಗಳೂರು: ಅಂತಿಮ ದರ್ಶನಕ್ಕೆ ಬಂದು ಸ್ನೇಹಿತನಿಂದಲೇ ಕೊಲೆಯಾದ ವ್ಯಕ್ತಿ
ಅಂತಿಮ ದರ್ಶನಕ್ಕೆ ಬಂದು ಸ್ನೇಹಿತನಿಂದಲೇ ಕೊಲೆಯಾದ ವ್ಯಕ್ತಿ
Follow us on

ಬೆಂಗಳೂರು, ಆ.22: ಸಾವಿನ ಮನೆಗೆ ಬಂದು ಸ್ನೇಹಿತನಿಂದಲೇ ಕೊಲೆಯಾದ ಘಟನೆ ಬೆಂಗಳೂರಿನ ಕಾಟನ್ ​ಪೇಟೆ (Cottonpete)ಯ ಅಂಜನಪ್ಪ ಗಾರ್ಡನ್​ನಲ್ಲಿ ನಡೆದಿದೆ. ಸ್ನೇಹಿತ ಶರತ್​ಗೆ ಚಾಕು ಇರಿದು ಆಟೋ ಚಾಲಕ ಶರತ್ ಎಂಬಾತ ಹತ್ಯೆಗೈದಿದ್ದಾನೆ. ಅಂಜನಪ್ಪ ಗಾರ್ಡನ್​​ನಲ್ಲಿ ಒಂದು ಸಾವಾಗಿರುತ್ತದೆ. ಹೀಗಾಗಿ ಅವರ ಅಂತಿಮ‌ ದರ್ಶನ ಪಡೆಯಲು ಈ ಇಬ್ಬರು ಆಗಮಿಸಿದ್ದರು. ಬಳಿಕ ವಾಪಸ್​ ಮನೆಗೆ ತೆರಳುವ ವೇಳೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಇದರಿಂದ ರೊಚ್ಚಿಗೆದ್ದ ಚಾಲಕ ಶರತ್, ತನ್ನ ಸ್ನೇಹಿತ ಮತ್ತೋರ್ವ​ ಶರತ್​ಗೆ ಚಾಕುವಿನಿಂದ ಇರಿದಿದ್ದ. ಗಾಯಾಳುವನ್ನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಆಗಿದ್ದೇನು?

ಅಂತಿಮ ವಿಧಿವಿಧಾನ ಸಂದರ್ಭದಲ್ಲಿ ಮಹಿಳೆಯೋರ್ವಳನ್ನು ಮೃತ ಶರತ್ ಬೈದಿದ್ದ. ಈ ವೇಳೆ ಆರೋಪಿ ಶರತ್ ಯಾಕೆ ಬೈಯುತ್ತಿಯಾ ಎಂದು ಕೇಳಿದ್ದ. ಅಷ್ಟೇ ಇಬ್ಬರ ನಡುವೆ ಗಲಾಟೆ ಶುರುವಾಗಿದ್ದು, ಅದು ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದು ಆರೋಪಿ ಶರತ್​ ಪರಾರಿ ಆಗಿದ್ದಾನೆ.  ಈ ಕುರಿತು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ‌ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಇದನ್ನೂ ಓದಿ:ಶಿಕ್ಷಕಿ ಕೊಲೆ ಕೇಸ್: ಸಾಯಿಸಿ ಬಲಗೈ ಹೆಬ್ಬೆಟ್ಟು ತೆಗೆದುಕೊಂಡು ಬಾ, ಹಂತಕರ ಕಾಲ್ ರೆಕಾರ್ಡ್ ವೈರಲ್

H.D.ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿ ಸಾವು

ಮೈಸೂರು: ಹೆಚ್.ಡಿ.ಕೋಟೆಯ ತಾಯಿ & ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿ ಸಾವನ್ನಪ್ಪಿದ ಘಟನೆ ನಡೆದಿದೆ. ಜಕ್ಕಳ್ಳಿ ದೇವಲಾಪುರದ ನಿವಾಸಿ 23 ವರ್ಷದ ಗೀತಾ ಮೃತಪಟ್ಟವರು. ಹೆರಿಗೆ ನೋವಿನಿಂದ ಮುಂಜಾನೆ 4 ಗಂಟೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ಕೆಲ ಹೊತ್ತಿನಲ್ಲೇ ಸಾವನ್ನಪ್ಪಿದ್ದಾರೆ. ಹೊಟ್ಟೆಯಲ್ಲೇ ಮಗು ಮೃತಪಟ್ಟಿರುವುದರಿಂದ ತಾಯಿಯೂ ಕೊನೆಯುಸಿರೆಳೆದಿದ್ದಾರೆ. ಘಟನೆ ಬಳಿಕ ಗೀತಾ ಪೋಷಕರಿಗೆ ಹೆಚ್.ಡಿ.ಕೋಟೆ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ಮುಂಜಾನೆ 4 ಗಂಟೆಗೆ ಮೃತಪಟ್ಟರೂ ಮರಣೋತ್ತರ ಪರೀಕ್ಷೆ ವಿಳಂಬವಾಗಿದ್ದಕ್ಕೆ ಆಸ್ಪತ್ರೆ ವೈದ್ಯರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸೋಮಣ್ಣ ಜೊತೆ ಮಾತಿನ ಚಕಮಕಿಯೂ ನಡೆಯಿತು. ಕೊನೆಗೂ ಒತ್ತಡಕ್ಕೆ ಮಣಿದು ಹೆಚ್.ಡಿ.ಕೋಟೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ