ಕಮ್ ಡೈನ್ ವಿತ್ ಮಿ ರಿಯಾಲಿಟಿ ಶೋದ ಸ್ಟಾರ್ ಪ್ರತಿಸ್ಪರ್ಧಿ ನಿಕೊಲಾಸ್ ಪೌಲ್ ಆತ್ಮಹತ್ಯೆ ಮೂಲಕ ಸತ್ತಿದ್ದು ಅಂತ ಖಚಿತಪಟ್ಟಿದೆ: ಪೊಲೀಸ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 11, 2023 | 8:20 AM

ಸಾವಿಗೆ ಎರಡು ತಿಂಗಳು ಮೊದಲು ನಿಕೊಲಾಸ್ ಒಬ್ಬ ಮಾನಸಿಕ ರೋಗಿ ಎಂದು ಘೋಷಿಸಲ್ಪಟ್ಟಾಗ ತಮ್ಮ ಸ್ನೇಹಿತನೊಬ್ಬನಿಗೆ ಅವರು ಯಾವುದಾದರೂ ಕಂದಕಕ್ಕೆ ಬಿದ್ದು ಸತ್ತುಬಿಡೋಣ ಅಂತ ಅನಿಸುತ್ತಿದೆ ಎಂದು ಹೇಳಿದ್ದರಂತೆ. ಅವರು ಚಿಕಿತ್ಸೆ ಪಡೆಯುವುದನ್ನು ಮುಂದುವರಿಸಿದ್ದರು ಮತ್ತು ಹಲವಾರು ಬಾರಿ ಸಹಾಯವಾಣಿಯನ್ನು ಸಂಪರ್ಕಿಸಿದ್ದರು.

ಕಮ್ ಡೈನ್ ವಿತ್ ಮಿ ರಿಯಾಲಿಟಿ ಶೋದ ಸ್ಟಾರ್ ಪ್ರತಿಸ್ಪರ್ಧಿ ನಿಕೊಲಾಸ್ ಪೌಲ್ ಆತ್ಮಹತ್ಯೆ ಮೂಲಕ ಸತ್ತಿದ್ದು ಅಂತ ಖಚಿತಪಟ್ಟಿದೆ: ಪೊಲೀಸ್
ನಿಕೊಲಾಸ್ ಪೌಲ್ ಬ್ಲೈಥಿಂಗ್
Follow us on

ಕಳೆದ ಜೂನ್ 15 ರಂದು ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಕಮ್ ಡೈನ್ ವಿತ್ ಮಿ ರಿಯಾಲಿಟಿ ಶೋನ ಸ್ಟಾರ್ ಸ್ಪರ್ಧಿ ನಿಕೊಲಾಸ್ ಪೌಲ್ ಬ್ಲೈಥಿಂಗ್ ನ (Nicholas Paul Blything) ಸಾವು ಅತ್ಮಹತ್ಯೆಯ ಮೂಲಕ ಸಂಭವಿಸಿದ್ದು ಆಂತ 6 ತಿಂಗಳುಗಳಿಗಿಂತ ಹೆಚ್ಚು ಸಮಯ ನಡೆದ ತನಿಖೆ (investigation) ಮತ್ತು ವಿವಾರಣೆಗಳಿಂದ ಖಚಿತಪಟ್ಟಿದೆ. ನವೆಂಬರ್ 2022 ರಲ್ಲಿ ಕುಕಿಂಗ್ ಶೋದ (cooking show) ಎಪಿಸೋಡೊಂದರ ಅಂತ್ಯದಲ್ಲಿ ನಿಕೊಲಾಸ್ ಸಾವಿನ ಸುದ್ದಿ ಪ್ರಕಟಿಸಿದಾಗ ಅದರ ಸ್ಪರ್ಧಿಗಳು ಶಾಕ್ ಗೊಳಗಾಗಿದ್ದರು. ಸತ್ತಾಗ ನಿಕೊಲಾಸ್ ವಯಸ್ಸು 36 ಆಗಿತ್ತು. ಯುಕೆಯ ಚೆಸ್ಟರ್ ನಲ್ಲಿ ಹುಟ್ಟಿದ್ದ ಅವರು ತಮ್ಮ ಸ್ವಂತ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿಗೆ ಸಂಬಂಧಿಸಿದಂತೆ ಕೊನೆಯ ವಿಚಾರಣೆ ಜನೆವರಿ 9 ರಂದು ನಡೆಯಿತು ಮತ್ತು ನಿಕೊಲಾಸ್ ಸಹೋದರ ರಿಚರ್ಡ್ ಅವರು ತಮ್ಮ ಅಣ್ಣ ಅವರ ಮನೆಯ ಬೆಡ್ ರೂಮಿನಲ್ಲಿ ಶವ ಕಂಡಿದ್ದನ್ನು ಮತ್ತು ನಿಕೊಲಾಸ್ ಆತ್ಮಹತ್ಯೆ ಮೂಲಕ ಸಾವನ್ನಪ್ಪಿದ್ದನ್ನು ವೈದ್ಯಕೀಯ ತಪಾಸಣೆ ನಡೆಸಿದ ಕ್ಲೇರ್ ವೆಲ್ಚ್ ಖಚಿತಪಡಿಸಿದರು.

ಪೊಲೀಸರಿಗೆ ತಿಳಿಸಿದ್ದು ನಿಕೊಲಾಸ್  ಸಹೋದರ

‘ನಿಕೊಲಾಸ್ ತನ್ನ ಕರೆಗೆ ಓಗೊಡುತ್ತಿಲ್ಲ ಎಂದು ಅವರ ಸಹೋದರಿ ಹೇಳಿದ ನಂತರ ರಿಚರ್ಡ್ ತನ್ನಣ್ಣನೊಂದಿಗೆ ಮಾತಾಡಲು ಪ್ರಯತ್ನಿಸಿದ್ದರು,’ ಎಂದು ಪೊಲೀಸ್ ಆಧಿಕಾರಿ ಸಾರ್ಜೆಂಟ್ ಪೌಲ್ ಡೇವಿಸ್ ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಅಸಲಿಗೆ ನಿಕೊಲಾಸ್ ಸತ್ತ ವಿಷಯನ್ನು ರಿಚರ್ಡ್ ಅವರೇ ಪೊಲೀಸರಿಗೆ ಮೊದಲು ತಿಳಿಸಿದ್ದು, ಎಂದು ಡೇವಿಸ್ ಹೇಳಿದ್ದಾರೆ.
ನಿಕೊಲಾಸ್ ಅವರ ಶವದ ಪಕ್ಕ ಎರಡು ಸೂಸೈಡ್ ನೋಟ್ ಗಳು ಸಿಕ್ಕಿದ್ದವು. ಅವರ ಪಿಟಿಎಸ್ ಡಿ (ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್) ಮತ್ತು ಮಾನಸಿಕ ಅಸ್ವಸ್ಥತೆಯಿಂದ ಬಳಲತ್ತಿದ್ದರು ಅನ್ನೋದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:  ಫ್ಯಾಶನ್​ ಮತ್ತು ಲೈಫ್​ಸ್ಟೈಲ್ ಮ್ಯಾಗಜೀನ್​​ ಒಂದಕ್ಕೆ ‘ಲುಕಾ ಛುಪ್ಪಿ’ ಬೆಡಗಿ ಕೀರ್ತಿ ಸನೋನ್ ಕೊಟ್ಟಿರುವ ಪೋಸುಗಳು ನಿದ್ರೆಗೆಡಿಸುತ್ತವೆ!

ಸಾವಿಗೆ ಎರಡು ತಿಂಗಳು ಮೊದಲು ನಿಕೊಲಾಸ್ ಒಬ್ಬ ಮಾನಸಿಕ ರೋಗಿ ಎಂದು ಘೋಷಿಸಲ್ಪಟ್ಟಾಗ ತಮ್ಮ ಸ್ನೇಹಿತನೊಬ್ಬನಿಗೆ ಅವರು ಯಾವುದಾದರೂ ಕಂದಕಕ್ಕೆ ಬಿದ್ದು ಸತ್ತುಬಿಡೋಣ ಅಂತ ಅನಿಸುತ್ತಿದೆ ಎಂದು ಹೇಳಿದ್ದರಂತೆ. ಅವರು ಚಿಕಿತ್ಸೆ ಪಡೆಯುವುದನ್ನು ಮುಂದುವರಿಸಿದ್ದರು ಮತ್ತು ಹಲವಾರು ಬಾರಿ ಸಹಾಯವಾಣಿಯನ್ನು ಸಂಪರ್ಕಿಸಿದ್ದರು. ಕೌಟುಂಬಿಕ ಮತ್ತು ವೈದ್ಯಕೀಯ ಮೂಲಗಳ ಪ್ರಕಾರ ನಿಕೊಲಾಸ್ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತಿತ್ತು ಮತ್ತು ಅವರಲ್ಲಿ ಯಾವತ್ತೂ ಆತ್ಮಹತ್ಯೆ ಮಾಡಿಕೊಳ್ಳುವ ಲಕ್ಷಣಗಳು ಕಂಡುಬಂದಿರಲಿಲ್ಲ.

‘ಭವಿಷ್ಯದ ಬಗ್ಗೆ ಚಿಂತಿತನಾಗಿದ್ದ’

ನಿಕೊಲಾಸ್ ಸಹೋದರ ರಿಚರ್ಡ್ ಬಿಡುಗಡೆ ಮಾಡಿದ ಹೇಳಿಕೆಯೊಂದನ್ನು ಕ್ಲೇರ್ ಓದಿದರು: ‘ಇತ್ತೀಚಿನ ದಿನಗಳಲ್ಲಿ ಆಂದರೆ ಏಪ್ರಿಲ್ ನಲ್ಲಿ ವೈದ್ಯರು ಅವನನ್ನು ಮಾನಸಿಕ ರೋಗಿ ಅಂತ ವರ್ಗೀಕರಿಸಿದ ಬಳಿಕ ಅವನು ತೀವ್ರ ಸ್ವರೂಪದ ಅತಂಕಕ್ಕೊಳಗಾಗಿದ್ದ ಮತ್ತು ತನ್ನ ಭವಿಷ್ಯದ ಬಗ್ಗೆ ಬಹಳ ಚಿಂತಿತನಾಗಿದ್ದ.’

‘ಆತಂಕ ಮತ್ತು ಖಿನ್ನತೆ ನಿರೋಧಕ ಮಾತ್ರೆಗಳನ್ನು (ಌಂಟಿ-ಡಿಪ್ರೆಸಂಟ್ಸ್) ತೆಗೆದುಕೊಳ್ಳಲಾರಂಭಿಸಿದ ನಂತರ ನಿಕೊಲಾಸ್ ಮುಖಭಾವದಲ್ಲಿ ಚೇತರಿಕೆ ಕಾಣಿಸುತಿತ್ತು. ನಿಕೊಲಾಸ್ ನನ್ನು ನೋಡಿಕೊಳ್ಳುತ್ತಿದ್ದ ವೈದ್ಯರು ಒಮ್ಮೆ ನನಗೆ, ನಿಮ್ಮ ಅಣ್ಣ ಅತ್ಮಹತ್ಯೆ ಮಾಡಿಕೊಳ್ಳಬಹುದು ಅಂತ ನಿಮಗೆ ಅನಿಸುತ್ತಾ? ಅಂತ ಕೇಳಿದ್ದರು. ಅದಕ್ಕೆ ನಾನು ಸಾಧ್ಯವೇ ಇಲ್ಲ ಎಂದು ಹೇಳಿದ್ದೆ. ಯಾಕೆಂದರೆ ನನಗೆ ಯಾವತ್ತೂ ಹಾಗನಿಸಿರಲೇ ಇಲ್ಲ,’ ಅಂತ ಅವರ ಹೇಳಿಕೆಯಲ್ಲಿದೆ.

ಇದನ್ನೂ ಓದಿ:  Winter Diet For Lungs: ಚಳಿಗಾಲದಲ್ಲಿ ನಿಮ್ಮ ಶ್ವಾಸಕೋಶದ ಆರೋಗ್ಯವನ್ನು ಕಾಪಾಡುವ ಬೆಸ್ಟ್​ 7 ಆಹಾರಗಳು ಇಲ್ಲಿವೆ

ಸಾಯುವ ಮೊದಲು ಖುಷಿಯಲ್ಲಿದ್ದ 

‘ಸಾಯುವ ಮುಂಚಿನ ದಿನಗಳಲ್ಲಿ ಅವನು ಬಹಳ ಉಲ್ಲಾಸಕರ ಮೂಡ್ ನಲ್ಲಿದ್ದ. ಮಮ್ಮಿ ಡ್ಯಾಡಿಯ ಮನೆನಗೆ ಹೋಗಿ ನಾಯಿಗಳನ್ನು ತೆಗೆದುಕೊಂಡು ಬಂದಿದ್ದ ಮತ್ತು ತೋಟದಲ್ಲಿ ನೆಡಲು ಸಸಿಗಳನ್ನು ಸಹ ತಂದಿದ್ದ. ಮನೆಯನ್ನು ಸಚ್ಛಗೊಳಿಸಿದ್ದ ಮತ್ತು ತನ್ನ ಫುಡ್ ಶಾಪನ್ನು ನೇರಗೊಳಿಸಿದ್ದ, ವೀಕೆಂಡನ್ನು ಅದ್ಭುತವಾಗಿ ಕಳೆದಿದ್ದ. ಮರುವಾರ ಅವನು ನನ್ನನ್ನು ನೋಡಲು ಬರುವವನಿದ್ದ,’ ಎಂದು ರಿಚರ್ಡ್ ಹೇಳಿದ್ದಾರೆ.

‘ಏಪ್ರಿಲ್ ನಿಕೊಲಾಸ್ ಪಾಲಿಗೆ ಕರಾಳವಾಗಿದ್ದರೂ ಅವರ ಆರೋಗ್ಯದಲ್ಲಿ ಸುಧಾರಣೆ ಅಗತೊಡಗಿತ್ತು ಮತ್ತು ಭವಿಷ್ಯದ ಬಗ್ಗೆ ಆಶಾವಾದಿಯಾಗಿದ್ದರು,’ ಎಂದು ಕ್ಲೇರ್ ಹೇಳಿದ್ದಾರೆ.

ಅವರ ಸಹೋದರನ ಹೇಳಿಕೆಯ ಪ್ರಕಾರ ನಿಕೊಲಾಸ್ ಭವಿಷ್ಯದ ಬಗ್ಗೆ ಯೋಜನೆಗಳನ್ನು ಹಾಕಿಕೊಂಡಿದ್ದರು, ಎಂದು ಕ್ಲೇರ್ ಹೇಳಿದ್ದಾರೆ.

ಸೂಸೈಡ್ ನೋಟ್ ನಲ್ಲಿ ಸ್ಪಷ್ಟ

‘ಆದರೆ ತನ್ನ ಸೂಸೈಡ್ ನೋಟ್ ನಲ್ಲಿ ಅವರು ಕುಟುಂಬದ ಎಲ್ಲ ಸದಸ್ಯರ ಕ್ಷಮಾಪಣೆ ಕೇಳುತ್ತಾ ಎಲ್ಲವೂ ನನ್ನ ಕೈಮೀರಿ ಹೋಗುತ್ತಿದೆ ಇನ್ನು ನನ್ನಿಂದ ಸಹಿಸಿಕೊಳ್ಳಲಾಗದು,’ ಎಂದು ಅವರು ಹೇಳಿದ್ದಾರೆ.

‘ಅವರ ನೋಟ್ ಗಳನ್ನು ಗಮನಿಸಿದರೆ ಅವರು ತುಂಬಾ ಹತಾಷರಾಗಿದ್ದರು ಮತ್ತು ಖಿನ್ನತೆಗೊಳಗಾಗಿದ್ದರು ಅನ್ನೋದು ವೇದ್ಯವಾಗುತ್ತದೆ,’ ಎಂದು ಕ್ಲೇರ್ ಹೇಳಿದ್ದಾರೆ.

ಮತ್ತಷ್ಟು ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ