ಶ್ರೀಕಿ ಲ್ಯಾಪ್ಟಾಪ್ ಸಿಐಡಿಗೆ ರವಾನೆ ಮಾಡಿದ ಜೀವನ್ ಭೀಮಾ ನಗರ ಪೊಲೀಸರು
ಮಾ ನಗರ ಪೊಲೀಸರು ಶ್ರೀಕಿ ಲ್ಯಾಪ್ಟಾಪ್ನ ವಶಪಡಿಸಿಕೊಂಡಿದ್ದರು. ಹೋಟೆಲ್ವೊಂದರಲ್ಲಿ ಗಲಾಟೆ ವೇಳೆ ವಶಪಡಿಸಿಕೊಳ್ಳಲಾಗಿತ್ತು.
ಬೆಂಗಳೂರು: ಇಂಟರ್ನ್ಯಾಶನಲ್ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಲ್ಯಾಪ್ಟಾಪ್ನ ಸಿಐಡಿಗೆ ರವಾನೆ ಮಾಡಲಾಗಿದೆ. ಲ್ಯಾಪ್ಟಾಪ್ ಮಿರರ್ ಇಮೇಜ್ ಮಾಡಿ ತನಿಖೆಗೆ ರವಾನಿಸಲಾಗಿದೆ. ಭೀಮಾ ನಗರ ಪೊಲೀಸರು ಶ್ರೀಕಿ ಲ್ಯಾಪ್ಟಾಪ್ನ ವಶಪಡಿಸಿಕೊಂಡಿದ್ದರು. ಹೋಟೆಲ್ವೊಂದರಲ್ಲಿ ಗಲಾಟೆ ವೇಳೆ ವಶಪಡಿಸಿಕೊಳ್ಳಲಾಗಿತ್ತು. ಸಿಐಡಿ ಸೈಬರ್ ತಜ್ಞರು ಲ್ಯಾಪ್ಟಾಪ್ ಪರಿಶೀಲನೆ ಮಾಡಲಿದ್ದಾರೆ. ಪ್ರತಿ ಪೇಜ್ ಇಮೇಜ್ ತೆಗೆದು ಪೊಲೀಸರು ತನಿಖೆ ನಡೆಸಲಿದ್ದಾರೆ. ಪರಿಶೀಲನೆ ಬಳಿಕ ಹ್ಯಾಕ್ಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿ ಹೊರ ಬೀಳುವ ಸಾಧ್ಯತೆಯಿದೆ.
ಶ್ರೀ ಕೃಷ್ಣ ಜೈಲಿನಲ್ಲಿದ್ದಾಗ ಭಗವದ್ಗೀತೆ ಓದುತ್ತಿದ್ದ ಜೀವನ್ ಭೀಮಾ ನಗರ ಕೇಸ್ನಲ್ಲಿ ಶ್ರೀಕಿಯನ್ನ ಬಂಧವಾಗಿದ್ದ. ಕೇವಲ ಎರಡು ದಿನ ಜೈಲುವಾಸ ಅನುಭವಿಸಿದ್ದ. ಶ್ರೀಕಿ ಜೈಲಿನಲ್ಲಿ ಇದ್ದಾಗ ಮೂರು ಇಂಗ್ಲಿಷ್ ಭಾಷೆಯ ಆಧ್ಯಾತ್ಮಿಕ ಪುಸ್ತಕಗಳನ್ನ ಪಡೆದಿದ್ದ. ಅದರಲ್ಲಿ ಶ್ರೀ ಕೃಷ್ಣನ ವೇದೋಪದೇಶದ ಒಂದು ಪುಸ್ತಕ ಪಡೆದು ಓದುತ್ತಿದ್ದ. ಸಿಬ್ಬಂದಿ ಮಾತನಾಡಿಸಿದರೂ ಪುಸ್ತಕ ಓದಿನಲ್ಲೇ ಮಗ್ನನಾಗಿ ಇರುತ್ತಿದ್ದ ಶ್ರೀಕಿ, ಪ್ರತೀ ಗಂಟೆಗೆ ಭಗವದ್ಗೀತೆ ಪಠನ ಮಾಡಿಕೊಂಡು ಧ್ಯಾನ ಮಾಡುತ್ತಿದ್ದ.
ಶ್ರೀಕಿ, ರಾಬಿನ್ಗೆ ವಿದೇಶಿ ಹ್ಯಾಕರ್ಗಳ ಜೊತೆ ನಂಟಿನ ಶಂಕೆ ಶ್ರೀಕಿ ಮತ್ತು ರಾಬಿನ್ಗೆ ಇಸ್ರೇಲ್ನ ಇಬ್ಬರು ಸಹೋದರರ ಜೊತೆ ನಂಟಿರುವ ಅನುಮಾನ ವ್ಯಕ್ತವಾಗಿದೆ. ಎಲಿ ಮತ್ತು ಅಸಾಫ್ ಎಂಬುವವರು 2016ರಲ್ಲಿ ದೊಡ್ಡ ಮೊತ್ತದ ಬಿಟ್ ಕಾಯಿನ್ನ ಕಳವು ಮಾಡಿದ್ದರು. ಇಬ್ಬರು ಸುಮಾರು 1 ಲಕ್ಷ 20 ಸಾವಿರ ಬಿಟ್ ಕಾಯಿನ್ ಕದ್ದಿದ್ದರು. ಕದ್ದ ಬಿಟ್ ಕಾಯಿನ್ ಮೌಲ್ಯ 56 ಸಾವಿರ ಕೋಟಿ ರೂಪಾಯಿ. ಈ ಹ್ಯಾಕರ್ಸ್ ಬ್ರದರ್ಸ್ ಕ್ರಿಪ್ಟೋ ಕರೆನ್ಸಿ ಫೋರಮ್, ರೆಡ್ಡಿಟ್, ಟೆಲಿಗ್ರಾಂ ಲಿಂಕ್ಗಳನ್ನು ಪೋಸ್ಟ್ ಮಾಡುತ್ತಿದ್ದರು. ಇಂತವರ ಜೊತೆ ಶ್ರೀಕಿ, ರಾಬಿನ್ ನಂಟಿದೆ ಎಂಬ ಶಂಕೆ ಮೂಡಿದೆ.
ಪೊಲೀಸರಿಗೆ ಶ್ರೀಕಿ ಹೇಳಿದ್ದೇನು? ಕರ್ನಾಟಕದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಬಿಟ್ಕಾಯಿನ್ ಹಗರಣದ ಆರೋಪಿ ಆಗಿರುವ 26 ವರ್ಷದ ಆರೋಪಿ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಪೊಲೀಸರಿಗೆ ನೀಡಿರುವ ಮಾಹಿತಿಯಂತೆ, ನೆದರ್ಲೆಂಡ್ಸ್ನ ಬಿಟ್ಫಿನೆಕ್ಸ್ ವಿನಿಮಯ ಕೇಂದ್ರವನ್ನು ಎರಡು ಸಲ ಹ್ಯಾಕ್ ಮಾಡಿದ್ದಾನೆ. ಬಿಟ್ಫಿನೆಕ್ಸ್ ನಾನು ಹ್ಯಾಕ್ ಮಾಡಿದ ದೊಡ್ಡ ಬಿಟ್ಕಾಯಿನ್ ವಿನಿಮಯ ಕೇಂದ್ರ. ಆ ಎಕ್ಸ್ಚೇಂಜ್ ಎರಡು ಸಲ ಹ್ಯಾಕ್ ಮಾಡಿದೆ. ಮತ್ತು ಹಾಗೆ ಮಾಡಿದ ಮೊದಲ ವ್ಯಕ್ತಿ ನಾನು. ಎರಡನೇ ಘಟನೆ ಸರಳವಾದ ಫೀಷಿಂಗ್ ದಾಳಿ. ಅದರ ಮೂಲಕ ಸೇನೆಗಾಗಿ ಕೆಲಸ ಮಾಡುವ ಇಬ್ಬರು ಇಸ್ರೇಲಿ ಹ್ಯಾಕರ್ಗಳಿಗೆ. ಉದ್ಯೋಗಿಯೊಬ್ಬರ ಕಂಪ್ಯೂಟರ್ಗೆ ಸಂಪರ್ಕ ಸಿಗುವಂತಾಯಿತು. ಅದರಿಂದ ಎಡಬ್ಲ್ಯುಎಸ್ ಕ್ಲೌಡ್ ಅಕೌಂಟ್ಗೆ ಸಂಪರ್ಕ ಸಿಕ್ಕಿತು ಎಂದು ಶ್ರೀಕಿ ತನ್ನ ಹೇಳಿಕೆಯಲ್ಲಿ ಪೊಲೀಸರಿಗೆ ತಿಳಿಸಿದ್ದಾನೆ.
ಇದನ್ನೂ ಓದಿ
ಬೊಂಬೆ ಹೇಳುತೈತೆ ಹಾಡಿನ ಮುಖಾಂತರ ಪುನೀತ್ಗೆ ನಮನ ಸಲ್ಲಿಸಿದ 50ಕ್ಕೂ ಹೆಚ್ಚು ಪುಟಾಣಿಗಳು; ವಿಡಿಯೋ ನೋಡಿ