Shocking News: ದೆವ್ವಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್!

TV9 Digital Desk

| Edited By: Sushma Chakre

Updated on: Nov 17, 2021 | 2:10 PM

Crime News Today: ಪ್ರಭಾಕರನ್ ಅವರ ಕನಸಿನಲ್ಲಿ ಬೆಂಕಿಯಲ್ಲಿ ಸುಟ್ಟುಹೋದ ಮಹಿಳೆಯೊಬ್ಬರು ಬಂದು ಕತ್ತು ಹಿಸುಕಲು ಪ್ರಯತ್ನಿಸಿದ್ದಳು. ಈ ಬಗ್ಗೆ ಅವರು ತಮ್ಮ ಸ್ನೇಹಿತರು ಹಾಗೂ ಮನೆಯವರ ಬಳಿ ಹೇಳಿಕೊಂಡಿದ್ದರು.

Shocking News: ದೆವ್ವಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್!
ನೇಣು ಹಾಕಿಕೊಂಡು ಸಾವನ್ನಪ್ಪಿರುವ ಪೊಲೀಸ್ ಕಾನ್ಸ್​ಟೆಬಲ್

ಚೆನ್ನೈ: ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಪೊಲೀಸ್ ಕಾನ್ಸ್​ಟೆಬಲ್ ಒಬ್ಬರು ದೆವ್ವಕ್ಕೆ ಹೆದರಿ ತಮ್ಮ ಪೊಲೀಸ್ ಕ್ವಾರ್ಟರ್ಸ್​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲ್ಲಕುರಿಚಿ ಜಿಲ್ಲೆಯ ಪೆರುಂಬಕ್ಕಂ ಪ್ರದೇಶದವರಾದ ಪ್ರಭಾಕರನ್ ಎಂಬ 33 ವರ್ಷದ ಪೊಲೀಸ್ ತಮ್ಮ ಪೊಲೀಸ್ ಕ್ವಾರ್ಟರ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಡಲೂರು ಸಶಸ್ತ್ರ ಪೊಲೀಸ್‌ನಲ್ಲಿ ಮೊದಲ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಪ್ರಭಾಕರನ್ ವಿಷ್ಣುಪ್ರಿಯಾ ಅವರನ್ನು ಮದುವೆಯಾಗಿದ್ದರು. ಅವರಿಗೆ ಒಬ್ಬ ಮಗ ಮತ್ತು ಮಗಳಿದ್ದರು. ಕಡಲೂರಿನ ಸಶಸ್ತ್ರ ಪೊಲೀಸ್ ಠಾಣೆಯ ಕ್ವಾರ್ಟರ್ಸ್​ನಲ್ಲಿ ಅವರ ಕುಟುಂಬ ವಾಸವಾಗಿತ್ತು. ಪ್ರಭಾಕರನ್ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.

ಇತ್ತೀಚೆಗೆ, ಪ್ರಭಾಕರನ್ ಅವರ ಕನಸಿನಲ್ಲಿ ಬೆಂಕಿಯಲ್ಲಿ ಸುಟ್ಟುಹೋದ ಮಹಿಳೆಯೊಬ್ಬರು ಬಂದು ಕತ್ತು ಹಿಸುಕಲು ಪ್ರಯತ್ನಿಸಿದ್ದಳು. ಈ ಬಗ್ಗೆ ಅವರು ತಮ್ಮ ಸ್ನೇಹಿತರು ಹಾಗೂ ಮನೆಯವರ ಬಳಿ ಹೇಳಿಕೊಂಡಿದ್ದರು. ಯಾಕೆ ತನಗೆ ಹೀಗೆ ಕನಸು ಬೀಳುತ್ತಿದೆ ಎಂಬ ಬಗ್ಗೆ ಪ್ರಭಾಕರನ್ ಜ್ಯೋತಿಷಿಯನ್ನು ಸಂಪರ್ಕಿಸಿದ್ದರು. ಅವರು ಇದು ಪ್ರೇತ ಅಥವಾ ಆತ್ಮದ ಕಾಟವಿರಬಹುದು ಎಂದಿದ್ದರು. ಹೀಗಾಗಿ, 15 ದಿನಗಳ ಕಾಲ ಅನಾರೋಗ್ಯದ ರಜೆ ಪಡೆದಿದ್ದ ಪ್ರಭಾಕರನ್ ತನ್ನ ಪೊಲೀಸ್​ ಕ್ವಾರ್ಟರ್ಸ್​ನ ಪೂಜಾ ಕೊಠಡಿಯಲ್ಲಿ ಬೀಗ ಹಾಕಿಕೊಂಡಿದ್ದರು.

ಅಲ್ಲದೆ, ತಮ್ಮ ಹೆಂಡತಿ ಮತ್ತು ಮಕ್ಕಳನ್ನು ಮೇಲ್ಪಟ್ಟಾಂಬಕ್ಕಂನಲ್ಲಿ ಸಂಬಂಧಿಕರ ಸಮಾರಂಭದಲ್ಲಿ ಭಾಗವಹಿಸಲು ಕಳುಹಿಸಿದ್ದರು. ಅವರ ಪತ್ನಿ ಮನೆಗೆ ಹಿಂತಿರುಗಿದಾಗ ಪ್ರಭಾಕರನ್ ಸೀಲಿಂಗ್‌ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ಕೂಡಲೇ ಅವರನ್ನು ಕೂಡ್ಲೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಅವರು ಸಾವನ್ನಪ್ಪಿದ್ದರು. ಕಡಲೂರು ಪೊಲೀಸರು ಪ್ರಭಾಕರನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಕನಸಿನಲ್ಲಿ ಬಂದು ತನ್ನನ್ನು ಕಾಡುತ್ತಿದ್ದ ದೆವ್ವದ ಭಯದಿಂದ ಪ್ರಭಾಕರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಡಲೂರು  ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಭಾಕರನ್ ಅವರನ್ನು ದೆವ್ವ ಕಾಡುತ್ತಿತ್ತು. ಈ ಬಗ್ಗೆ ನಮ್ಮ ಬಳಿ ಅನೇಕ ಸಲ ಹೇಳಿಕೊಂಡಿದ್ದರು ಎಂದು ಪ್ರಭಾಕರನ್ ಅವರ ಆಪ್ತ ಸಹೋದ್ಯೋಗಿಗಳು ಹೇಳಿದ್ದಾರೆ.

ಇನ್ನೂ ವಿಚಿತ್ರವೆಂದರೆ, ಪ್ರಭಾಕರನ್ ಅವರ ಕನಸಿನಲ್ಲಿ ಬರುತ್ತಿದ್ದಂತೆ ಈ ಪ್ರದೇಶದಲ್ಲಿನ ಸಶಸ್ತ್ರ ಪಡೆಗಳ ಕ್ವಾರ್ಟರ್ಸ್‌ನಲ್ಲಿ ಮಹಿಳೆಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದರು!

ಇದನ್ನೂ ಓದಿ: Crime News: ಪ್ರೀತಿಸಲು ನಿರಾಕರಿಸಿದ ಯುವತಿಗೆ ಬೆಂಕಿ ಹಚ್ಚಿ, ತಾನೂ ಸಾಯಲು ಪ್ರಯತ್ನಿಸಿದ ಪ್ರೇಮಿ!

Crime News: ಬೇರೆ ಗುಂಪಿನ ರಕ್ತ ನೀಡಿದ ವೈದ್ಯರ ಎಡವಟ್ಟಿಂದ ಮಹಿಳೆ ಸಾವು!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada