Jharkhand: ಪೊಲೀಸ್ ಪೇದೆ ಕಾಲಿಗೆ ಗುಂಡು ಹಾರಿಸಿದ ಅಪರಿಚಿತ ವ್ಯಕ್ತಿ
ದುಮ್ಕಾದ ರಾಮಗಢ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿದ್ದ 44 ವರ್ಷದ ಸುಜಿತ್ ಕುಮಾರ್ ಬೋಯಿಪೈ ಎಂಬ ಪೊಲೀಸ್ ಪೇದೆಗೆ ಅಪರಿಚಿತ ವ್ಯಕ್ತಿ ಸೋಮವಾರದಂದು ಚರ್ಚ್ ಬಳಿ ಗುಂಡು ಹಾರಿಸಿದ್ದಾನೆ
ಜಾರ್ಖಂಡ್: ಜಾರ್ಖಂಡ್‌ನ ದುಮ್ಕಾ ಪಟ್ಟಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಪೊಲೀಸ್ ಪೇದೆಯೊಬ್ಬರಿಗೆ ಗುಂಡು ಹಾರಿಸಿದ್ದಾನೆ ಗಾಯಗೊಂಡಿರುವ ಪೊಲೀಸ್ ಪೇದೆಯನ್ನು ಆಸ್ಪತ್ರೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ದುಮ್ಕಾದ ರಾಮಗಢ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿದ್ದ 44 ವರ್ಷದ ಸುಜಿತ್ ಕುಮಾರ್ ಬೋಯಿಪೈ ಎಂಬ ಪೊಲೀಸ್ ಪೇದೆಗೆ ಅಪರಿಚಿತ ವ್ಯಕ್ತಿ ಸೋಮವಾರದಂದು ಚರ್ಚ್ ಬಳಿ ಗುಂಡು ಹಾರಿಸಿದ್ದಾನೆ ಪೊಲೀಸ್ ಪೇದೆ ಕಾಲಿಗೆ ಗಾಯವಾಗಿದೆ ಎಂದು ದುಮ್ಕಾ ಟೌನ್ ಪೊಲೀಸ್ ಠಾಣಾಧಿಕಾರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.
ಪೊಲೀಸ್ ಪೇದೆ ಬೋಯಿಪೈ ಅವರು ಬಸ್‌ನಿಂದ ಇಳಿದು ಉಪವಿಭಾಗಾಧಿಕಾರಿ ನಿವಾಸಕ್ಕೆ ಹೋಗುತ್ತಿರುವಾಗ ಈ ಘಟನೆ ನಡೆದಿದೆ. ದಾಳಿ ಮಾಡಿದ ವ್ಯಕ್ತಿ ಪೊಲೀಸ್ ಪೇದೆ ಕೈಯಲ್ಲಿದ್ದ ಬ್ಯಾಗ್ನ್ನು ಬಂದೂಕುಧಾರಿಗೆ ಒಪ್ಪಿಸುವಂತೆ ಒತ್ತಾಯಿಸಿದ್ದಾರೆ ಆದರೆ ಪೊಲೀಸ್ ಇದಕ್ಕೆ ಒಪ್ಪಿಲ್ಲ, ಒಪ್ಪದಕ್ಕೆ ಆತ ನನ್ನ ಮೇಲೆ ದಾಳಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿ ಮೋಟಾರು ಸೈಕಲ್‌ನಲ್ಲಿ ಪರಾರಿಯಾಗಿದ್ದಾನೆ. ಆದರೆ ಬ್ಯಾಗ್ನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ.
ಪರವಾನಗಿ ಇಲ್ಲದ ಬಂದೂಕಿನಿಂದ ಕಾನ್‌ಸ್ಟೆಬಲ್‌ಗೆ ಗುಂಡು ಹಾರಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Published On - 4:01 pm, Tue, 20 September 22