ಕಮ್ಮಸಂದ್ರದ ಫ್ಲ್ಯಾಟ್ನಲ್ಲಿ ಸಿಲಿಂಡರ್ ಸ್ಫೋಟ; ಫ್ಲ್ಯಾಟ್ ಮಾಲೀಕ, ತಾಯಿಗೆ ಗಂಭೀರ ಗಾಯ

ಕಮ್ಮಸಂದ್ರದ ಫ್ಲ್ಯಾಟ್ನಲ್ಲಿ ಸಿಲಿಂಡರ್ ಸ್ಫೋಟ; ಫ್ಲ್ಯಾಟ್ ಮಾಲೀಕ, ತಾಯಿಗೆ ಗಂಭೀರ ಗಾಯ
ಕಮ್ಮಸಂದ್ರದ ಫ್ಲ್ಯಾಟ್ನಲ್ಲಿ ಸಿಲಿಂಡರ್ ಸ್ಫೋಟ

ಸ್ಟೋರ್ ರೂಮ್ನಲ್ಲಿ ಇರಿಸಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ರೆಗ್ಯುಲೇಟರ್ ಆಫ್ ಮಾಡದೇ ಇದ್ದುದ್ದಕ್ಕೆ ಬ್ಲಾಸ್ಟ್ ಆಗಿದೆ ಎನ್ನಲಾಗಿದೆ. ಸಿಲಿಂಡರ್ ಸ್ಫೋಟದ ರಭಸಕ್ಕೆ ಫ್ಲ್ಯಾಟ್ನ ಕಿಟಕಿಗಳು ಛಿದ್ರಛಿದ್ರವಾಗಿವೆ.

TV9kannada Web Team

| Edited By: Ayesha Banu

Apr 27, 2022 | 10:47 AM

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಕಮ್ಮಸಂದ್ರದ ಫ್ಲ್ಯಾಟ್ನಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ(Cylinder Blast). ಫ್ಲ್ಯಾಟ್ ಮಾಲೀಕ ಆನಂದಮೂರ್ತಿ, ತಾಯಿಗೆ ಗಂಭೀರ ಗಾಯಗಳಾಗಿವೆ. ಸಿಲಿಂಡರ್ ಸಿಡಿದ‌ ರಭಸಕ್ಕೆ ಫ್ಲ್ಯಾಟ್ನ ಕಿಟಕಿ ಒಡೆದುಹೋಗಿದೆ. ಪಾರ್ಕಿಂಗ್ ಲಾಟ್ನಲ್ಲಿ ನಿಲ್ಲಿಸಿದ್ದ ಮೂರು ಕಾರುಗಳಿಗೆ ಜಖಂ ಆಗಿದೆ. ಸ್ಟೋರ್ ರೂಮ್ನಲ್ಲಿ ಇರಿಸಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ರೆಗ್ಯುಲೇಟರ್ ಆಫ್ ಮಾಡದೇ ಇದ್ದುದ್ದಕ್ಕೆ ಬ್ಲಾಸ್ಟ್ ಆಗಿದೆ ಎನ್ನಲಾಗಿದೆ. ಸಿಲಿಂಡರ್ ಸ್ಫೋಟದ ರಭಸಕ್ಕೆ ಫ್ಲ್ಯಾಟ್ನ ಕಿಟಕಿಗಳು ಛಿದ್ರಛಿದ್ರವಾಗಿವೆ. ಸ್ಫೋಟದ ಶಬ್ದವನ್ನು ಭೂಕಂಪವೆಂದು ಭಾವಿಸಿದ್ದ ಜನರು ಮನೆಯಿಂದ ಆಚೆ ಬಂದು ನೋಡಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದ ಖದೀಮ ಅರೆಸ್ಟ್
ಮನೆಗೆ ನುಗ್ಗಿ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದ ಖದೀಮನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಮಿಳುನಾಡು ಮೂಲದ ಏಜಾಜ್ ಬಂಧಿತ ಆರೋಪಿ. ತಿಲಕ ನಗರ ಠಾಣಾ ವ್ಯಾಪ್ತಿಯಲ್ಲಿ ಏಪ್ರಿಲ್ 12 ರಂದು ಮನೆ ಡೋರ್ ಲಾಕ್ ಮಾಡದೇ ಬೀನಾ ಎಂಬ ಮಹಿಳೆ ವಾಕಿಂಗ್ ಹೋಗಿದ್ದರು. ಹಾಗೂ ಬೀನಾ ಪತಿ ರವೀಂದ್ರನಾಥ ಬಾತ್ರೂಮ್‌ಗೆ ಹೋದಾಗ ಏಜಾಜ್ ಮನೆಗೆ ನುಗ್ಗಿ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದ. ಸದ್ಯ ಪೊಲೀಸರು ಕಳ್ಳನನ್ನು ಅರೆಸ್ಟ್ ಮಾಡಿದ್ದಾರೆ.

ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಅರೋಪಿ ಮನೆಗೆ ನುಗ್ಗಿ 90 ಸಾವಿರ ಮೌಲ್ಯದ ಚಿನ್ನ ಕದಿದ್ದ. ಆರೋಪಿ ಕದ್ದು ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಮನೆ ಮಾಲೀಕ ರವೀಂದ್ರನಾಥ ತಿಲಕ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ಅರೋಪಿಯನ್ನು ಬಂಧಿಸಿದ್ದಾರೆ.

ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ, ಕೊಲೆ ಆರೋಪ
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದ್ದು ಕೊಲೆ ಆರೋಪ ಕೇಳಿ ಬಂದಿದೆ. ಪತಿ ದಿಲೀಪ್ ಮನೆಯಲ್ಲಿ ಪತ್ನಿ ಚೈತ್ರಾ ಮೃತದೇಹ ಪತ್ತೆಯಾಗಿದೆ. 9 ವರ್ಷದ ಹಿಂದೆ ದಿಲೀಪ್ ಜೊತೆ ಚೈತ್ರಾ ಮದುವೆಯಾಗಿತ್ತು. 2 ದಿನದ ಹಿಂದೆ ದಿಲೀಪ್, ಚೈತ್ರಾ ದಂಪತಿ ನಡುವೆ ಜಗಳವಾಗಿತ್ತು. ಚೈತ್ರಾಗೆ ಮಾನಸಿಕ ಕಿರುಕುಳ ನೀಡಿ ಹತ್ಯೆಗೈದಿದ್ದಾರೆಂದು ಆರೋಪಿಸಿ ಚೈತ್ರಾ ಪೋಷಕರು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಚೈತ್ರಾಗೆ 7 ವರ್ಷದ ಹೆಣ್ಣು ಮಗುವಿದೆ.

ಮಹಿಳೆಯ ಮೇಲೆ ಕಾಡಾನೆ ದಾಳಿ
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅದ್ವಾಳ ಗ್ರಾಮದಲ್ಲಿ ಮಹಿಳೆ ಪುಟ್ಟಲಕ್ಷ್ಮಮ್ಮ ಮೇಲೆ ಕಾಡಾನೆ ದಾಳಿ ನಡೆಸಿದೆ. ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಪುಟ್ಟಲಕ್ಷ್ಮಮ್ಮ(55)ಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಏಪ್ರಿಲ್ 26ರಂದು ಅದ್ವಾಳ ಕೆರೆ ಬಳಿ ಹಸು ಮೇಯಿಸುವಾಗ ಕಾಡಾನೆ ದಾಳಿ ನಡೆಸಿತ್ತು. ಆನೆ ದಾಳಿ ನಡೆಸ್ತಿರುವ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿತ್ತು. ಕಾಡಿನಿಂದ ನಾಡಿಗೆ ಬಂದಿದ್ದ 2 ಆನೆ ಅಡ್ಡಾದಿಡ್ಡಿ ಓಡಾಡಿದ್ದವು. ಆನೆಗಳನ್ನು ಮರಳಿ ಕಾಡಿಗಟ್ಟಲು ಕಾರ್ಯಾಚರಣೆ ಮುಂದುವರಿದಿದೆ.

ಕಾರು ಬೈಕ್ ಡಿಕ್ಕಿ ಸವಾರ ಸಾವು
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಮಾಗಡಿಪಾಳ್ಯ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾರು ಡಿಕ್ಕಿಯಾಗಿ ಬೈಕ್ನಲ್ಲಿ ತೆರಳುತ್ತಿದ್ದ ವಸಂತ(22) ಮೃತಪಟ್ಟಿದ್ದಾರೆ. ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವು ಕಚ್ಚಿ ಯುವಕ ಸಾವು
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಟ್ನ ಗ್ರಾಮದ ಬಳಿ ತೋಟದಲ್ಲಿ ನೀರು ಹಾಯಿಸುವಾಗ ಹಾವು ಕಚ್ಚಿ ರೈತ ಗಿರೀಶ್(36) ಮೃತಪಟ್ಟಿದ್ದಾರೆ. ಹಾವು ಕಚ್ಚಿದ ಕೂಡಲೇ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ನಿವೃತ್ತ ಯೋಧನ ಮನೆಯಲ್ಲಿ ನಗದು, ಚಿನ್ನ, ಬೆಳ್ಳಿ ಕಳ್ಳತನ
ಕೋಲಾರ ಜಿಲ್ಲೆಯ ಕೆಜಿಎಫ್ನ ಶಿವರಾಜನಗರದಲ್ಲಿ ನಿವೃತ್ತ ಯೋಧನ ಮನೆಯಲ್ಲಿ ನಗದು, ಚಿನ್ನ, ಬೆಳ್ಳಿ ಕಳ್ಳತನವಾಗಿದೆ. ನಿವೃತ್ತ ಯೋಧ ಕೃಷ್ಣ ಗಾಂಧಿ ಮನೆಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. 2.20 ಲಕ್ಷ ನಗದು, ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಕದ್ದಿದ್ದಾರೆ. ನಿವೃತ್ತ ಯೋಧ ಒಂದು ವಾರದಿಂದ ಚೆನ್ನೈನ ಆಸ್ಪತ್ರೆಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಸ್ಥಳಕ್ಕೆ ಕೆಜಿಎಫ್ ಡಿವೈಎಸ್ಪಿ ಮುರಳೀಧರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಌಂಡರ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬ್ರೇಕಿಂಗ್​ ನ್ಯೂಸ್​ ನೀಡಿದ ‘ಹೊಂಬಾಳೆ ಫಿಲ್ಮ್ಸ್​’: ಯುವ ರಾಜ್​ಕುಮಾರ್​ ಜತೆ ಹೊಸ ಸಿನಿಮಾ ಘೋಷಣೆ

Follow us on

Related Stories

Most Read Stories

Click on your DTH Provider to Add TV9 Kannada