IPL 2024: ಬ್ಲ್ಯಾಕ್​ನಲ್ಲಿ ಆರ್​ಸಿಬಿ ಪಂದ್ಯ ಟಿಕೆಟ್​ ಮಾರಾಟ ಆರೋಪ

ಕೆಲ ದುಷ್ಕರ್ಮಿಗಳು ಆನ್​ಲೈನ್​ಲ್ಲಿ ಆರ್​​ಸಿಬಿ ಪಂದ್ಯದ ಟಿಕೆಟ್​ ಖರೀದಿಸಿ, ಬಳಿಕ ಬ್ಲ್ಯಾಕ್​​ನಲ್ಲಿ ನಿಗದಿತ ದರಕ್ಕಿಂತಲೂ ಹೆಚ್ಚಿನ ಬಲೆಯಲ್ಲಿ ಟಿಕೆಟ್​ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಜೋಕ್ಸ್​ ಎಂಬುವರು ಟ್ವೀಟ್​ ಮಾಡಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

IPL 2024: ಬ್ಲ್ಯಾಕ್​ನಲ್ಲಿ ಆರ್​ಸಿಬಿ ಪಂದ್ಯ ಟಿಕೆಟ್​ ಮಾರಾಟ ಆರೋಪ
ಜೋಕ್ಸ್​​ ಟ್ವೀಟ್​ (ಎಡಚಿತ್ರ) ಆರ್​​ಸಿಬಿ ಪಂದ್ಯ (ಬಲಚಿತ್ರ)
Edited By: ವಿವೇಕ ಬಿರಾದಾರ

Updated on: Apr 12, 2024 | 11:37 AM

ಬೆಂಗಳೂರು, ಏಪ್ರಿಲ್​ 12: ದೇಶದಲ್ಲಿ 17ನೇ ಆವೃತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ (IPL) ಆರಂಭವಾಗಿದೆ. ಪ್ರತಿ ಪಂದ್ಯಗಳು ರಣ ರೋಚಕತೆಯಿಂದ ಕೂಡಿರುತ್ತವೆ. ಐಪಿಎಲ್​ ಅಂದ್ರೆ ಕ್ರಿಕೆಟ್​ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಎಲ್ಲಡೆ ಐಪಿಎಲ್​ನದ್ದೆ ಚರ್ಚೆಯಾಗುತ್ತಿರುತ್ತದೆ. ಅದರಲ್ಲಂತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ಅಂದ್ರೆ ಅತಿ ಹೆಚ್ಚು ಅಭಿಮಾನಗಳನ್ನು ಹೊಂದಿರುವ ತಂಡ ಎನ್ನಬಹುದು. ಆರ್​ಸಿಬಿ ಪಂದ್ಯಗಳನ್ನು ಗ್ರೌಂಡ್​ನಲ್ಲಿ ಕುಳಿತು ನೋಡಲು ಅದೆಷ್ಟೊ ಅಭಿಮಾನಿಗಳು ಕಾತುರರಾಗಿರುತ್ತಾರೆ. ಹೀಗಾಗಿ ಆರ್​ಸಿಬಿ ಪಂದ್ಯದ ಟಿಕೆಟ್​ಗಳು ಬೇಗನೆ ಮಾರಟವಾಗಿ ಬಿಡುತ್ತವೆ. ಅದೆಷ್ಟೊ ಅಭಿಮಾನಿಗಳು ಟಿಕೆಟ್​ ಸಿಗದೆ ನಿರಾಶೆಗೊಳ್ಳುತ್ತಾರೆ. ಇದನ್ನೇ ಲಾಭ ಮಾಡಿಕೊಂಡಿರುವ ಕೆಲವರು ಬ್ಲ್ಯಾಕ್​​ನಲ್ಲಿ ಹೆಚ್ಚಿನ ದರದಲ್ಲಿ ಟಿಕೆಟ್​ ಮಾರಟ ಮಾಡುತ್ತಿದ್ದಾರೆ.

DNA ಎಂಬ ಹೆಸರಿನ ತಂಡ ಆನ್​​ಲೈನ್​​ನಲ್ಲಿ ಬಹಳಷ್ಟು ಟಿಕೆಟ್​​ಗಳನ್ನು ಖರೀದಿಸುತ್ತದೆ. ನಂತರ ಬ್ಯ್ಲಾಕ್​ನಲ್ಲಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತದೆ. ಜೋಕ್ಸ್​​ ಎಂಬುವರು DNA ತಂಡದ ವಿನೋದ್​ ಎಂಬುವನಿಂದ ಬ್ಲ್ಯಾಕ್​​ನಲ್ಲಿ ಟಿಕೆಟ್​ ಖರೀದಿಸಲು ಮುಂದಾಗುತ್ತಾರೆ. ಆಗ ವಿನೋದ ನಿಗದಿತ ಬೆಲೆಗಿಂತ ಹೆಚ್ಚಿನ ದರದಲ್ಲಿ ಹೇಳುತ್ತಾರೆ. ಆಗ ಜೋಕ್ಸ್​​ ಹೆಚ್ಚುವರಿ ದರದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಕಾಲ್​​ ಗರ್ಲ್​ಗಾಗಿ ಕರೆ ಮಾಡಿ ಎಂದು ಫೇಸ್​​ಬುಕ್​ನಲ್ಲಿ ಪತ್ನಿಯ ಫೋಟೊ, ಮೊಬೈಲ್ ನಂಬರ್ ಪೋಸ್ಟ್ ಮಾಡಿದ ವ್ಯಕ್ತಿ!

ಆಗ ವಿನೋದ್​​ “ಏನ್ಮಾಡೋದು ಬ್ರೋ.. ಆನ್ಲೈನ್​ನಲ್ಲಿ ಬಲ್ಕ್ ಆಗಿ ಟಿಕೆಟ್ ಖರೀದಿಸಿ, ಬ್ಲ್ಯಾಕ್​ನಲ್ಲಿ ಮಾರಾಟ ಮಾಡುತ್ತೇವೆ. ಇದು ಬಹಳ ರಿಸ್ಕ್​ ಕೆಲಸ. ಹೀಗಾಗಿ ಹೆಚ್ಚಿನ ದರ” ಅಂತ ಮೆಸೇಜ್​ ಮಾಡಿದ್ದಾನೆ.

ವಿನೋದ್​ ಕಳಸಿರುವ ಮೆಸೇಜ್​ ಚಾಟಿಂಗ್ ಸ್ಕ್ರೀನ್ ಶಾಟ್ ತೆಗೆದು ಜೋಕ್ಸ್​ ಎಕ್ಸ್​ (ಟ್ವಿಟರ್​)ನಲ್ಲಿ ಪೋಸ್ಟ್​ ಮಾಡಿ, ಬೆಂಗಳೂರು ಪೊಲೀಸರಿಗೆ ಟ್ಯಾಗ್​ ಮಾಡಿದ್ದಾರೆ. ಪ್ರಕರಣ ಸಂಬಂಧ ಸ್ಥಳೀಯ ಠಾಣೆಗೆ ಲಿಖಿತ ದೂರು ನೀಡುವಂತೆ ಪೊಲೀಸ್ ಇಲಾಖೆ ಟ್ವೀಟ್​ ಮುಖಾಂತರವೆ ಸೂಚನೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:36 am, Fri, 12 April 24

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us