ಅಪರಿಚಿತರ ಜೊತೆ ವಿಡಿಯೋ ಕಾಲ್ ‌ಶಂಕೆ; ಪತ್ನಿ ಕೊಂದು ಪತಿ ಪರಾರಿ ಆರೋಪ

ಚನ್ನಪಟ್ಟಣ ತಾಲೂಕಿನ‌ ಮಂಗಾಡಹಳ್ಳಿ(Madhugirihalli) ಗ್ರಾಮದಲ್ಲಿ ಅಪರಿಚಿತರ ಜೊತೆ ವಿಡಿಯೋ ಕಾಲ್(Video call) ‌ಮಾಡಿರುವ ಅನುಮಾನ ಹಿನ್ನಲೆ ಪತ್ನಿಯನ್ನು ಕೊಂದು ಪತಿ ಪರಾರಿಯಾದ ಘಟನೆ ನಡೆದಿದೆ. ಈ ಕುರಿತು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಆರೋಪಿ ರಮೇಶ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಅಪರಿಚಿತರ ಜೊತೆ ವಿಡಿಯೋ ಕಾಲ್ ‌ಶಂಕೆ; ಪತ್ನಿ ಕೊಂದು ಪತಿ ಪರಾರಿ ಆರೋಪ
ಮೃತ ಪತ್ನಿ ಅಶ್ವಿನಿ
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ Edited By: ಕಿರಣ್ ಹನುಮಂತ್​ ಮಾದಾರ್

Updated on: May 22, 2024 | 5:34 PM

ರಾಮನಗರ, ಮೇ.22: ಅಪರಿಚಿತರ ಜೊತೆ ವಿಡಿಯೋ ಕಾಲ್(Video call) ‌ಮಾಡಿರುವ ಅನುಮಾನ ಹಿನ್ನಲೆ ಪತ್ನಿಯನ್ನು ಕೊಂದು ಪತಿ ಪರಾರಿಯಾದ ಘಟನೆ ಚನ್ನಪಟ್ಟಣ ತಾಲೂಕಿನ‌ ಮಂಗಾಡಹಳ್ಳಿ(Madhugirihalli) ಗ್ರಾಮದಲ್ಲಿ ನಡೆದಿದೆ.  ಅಶ್ವಿನಿ (27) ಕೊಲೆಯಾದ ಮಹಿಳೆ. ಪತಿ‌ ರಮೇಶ್ (‌32) ವಿರುದ್ಧ ಇದೀಗ ಕೊಲೆ ಮಾಡಿದ ಆರೋಪ ಕೇಳಿಬಂದಿದ್ದು, ಈ ಕುರಿತು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಆರೋಪಿ ರಮೇಶ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಮರದ ಎಲೆಗಳ ಮುಚ್ಚಿದ ಸ್ಥಿತಿಯಲ್ಲಿ ಸಿಕ್ಕ ಶವ

ಹತ್ತು ವರ್ಷಗಳ‌ ಹಿಂದೆ ಅಶ್ವಿನಿ ಮತ್ತು ರಮೇಶ್ ಮದುವೆ ಆಗಿತ್ತು. ಆದರೆ, ಕೆಲ ದಿನಗಳಿಂದ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಪತ್ನಿ ಮೇಲೆ ಅನುಮಾನ ಪಡ್ತಿದ್ದ ಪತಿ ರಮೇಶ್, ಯ್ಯಾರ್ಯಾರಿಗೋ ವಿಡಿಯೋಕಾಲ್ ಮಾಡ್ತಾಳೆ ಎಂದು ಜಗಳ ಶುರುವಾಗಿದೆ. ಈ ಹಿನ್ನಲೆ ಅಶ್ವಿನಿ, ಪತಿ ರಮೇಶ್​ನನ್ನು ಬಿಟ್ಟು ತವರು ಮೆನೆಗೆ ತೆರಳಿದ್ದರು. ಮತ್ತೆ ಜಗಳ‌ ಮಾಡಲ್ಲ ಎಂದು ರಮೇಶ್, ಇದೇ‌ ಭಾನುವಾರ ಪತ್ನಿ ಕರೆದುಕೊಂಡು ಬಂದಿದ್ದ. ನಿನ್ನೆ(ಮೇ.21) ರಾತ್ರಿಯಿಂದ ಅಶ್ವಿನಿ ಮನೆಯಲ್ಲಿ ಕಾಣಿಸಿಲ್ಲ, ಬಳಿಕ ಕಾಲ್ ಮಾಡಿದ್ರೂ ಅಶ್ವಿನಿ ಕಾಲ್ ರಿಸೀವ್ ಮಾಡಿಲ್ಲ. ಪತಿ ರಮೇಶ್ ಕೂಡ ಮನೆಯಲ್ಲಿ ಇರಲಿಲ್ಲ. ಅನುಮಾನಗೊಂಡ ಪೋಷಕರು ಅಶ್ವಿನಿ ಹುಡುಕಾಟ‌ ನಡೆಸಿದ್ದಾರೆ. ಈ ವೇಳೆ ತೋಟದ ದಾರಿಯಲ್ಲಿ ಮರದ ಎಲೆಗಳನ್ನು ಮುಚ್ಚಿ ಹಾಕಿದ ಸ್ಥಿತಿಯಲ್ಲಿ ಅಶ್ವಿನಿ ಮೃತದೇಹ ಪತ್ತೆಯಾಗಿದೆ.

ಇದನ್ನೂ ಓದಿ:ಮಾವನಿಂದಲೇ ಅಳಿಯನ ಕೊಲೆ; ಪ್ರಕರಣ ಬೇಧಿಸಿದ ದಾವಣಗೆರೆ ಪೊಲೀಸರು

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನ ಪ್ರಕರಣ; ಮಾರ್ಗ ಮಧ್ಯೆ ಗಾಯಾಳು ಸಾವು

ಯಾದಗಿರಿ: ಅಬ್ಬೆ ತುಮಕೂರಿನ ಹೊರವಲಯದಲ್ಲಿ ನಿನ್ನೆ(ಮೇ.21) ಮಧ್ಯಾಹ್ನ ಹಾಡುಹಗಲೇ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿದ ಪ್ರಕರಣವೊಂದು ನಡೆದಿತ್ತು. ಬಳಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಗಾಯಾಳು ಸಿದ್ದಪ್ಪ ಜಿಂಗೇನೋರ್​(40) ಕೊನೆಯುಸಿರೆಳೆದಿದ್ದಾರೆ. ನಗರದ ಜಿಲ್ಲಾಸ್ಪತ್ರೆಯಿಂದ ಕಲಬುರಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದು, ಇದೀಗ ಯಾದಗಿರಿಯ ಕನಕ‌ ನಗರದ ನಿವಾಸಿ ಆರೋಪಿ ಶಿವಪ್ಪನನ್ನು ಯಾದಗಿರಿ ಗ್ರಾಮೀಣ ಠಾಣಾ ಪೊಲೀಸರು‌ ವಶಕ್ಕೆ ಪಡೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೈಯ್ಯದ್​ ನಿಜಾಮುದ್ದೀನ್​, ರಾಮನಗರ

ಕಳೆದ ನಾಲ್ಕು ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ಬಗೆಯ ಡಿಪಾರ್ಟ್ಮೆಂಟ್ ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪ್ರಥಮದಲ್ಲಿ ಟಿವಿ9 ಮುಖ್ಯ ಕಚೇರಿಯಲ್ಲಿಯೇ ಕೆಲಸ ಮಾಡಿ,‌ಮೆಟ್ರೋ,ಪೊಲಿಟಿಕಲ್, ಕ್ರೈಂ ಹಾಗೂ ಲೈಫ್ ಸ್ಟೈಲ್ ನ ವಿಭಾಗದಲ್ಲೂ ಕೆಲಸ ಮಾಡುವ ಅವಕಾಶ ದೊರಕಿತ್ತು. ಕೊರೊನಾ ಸಂದರ್ಭದಲ್ಲಿ ಮಾಡಿದ ಕೇಸ್ ಸ್ಟಡಿಸ್, ನಂತರ ಬ್ಲ್ಯಾಕ್ ಫಂಗಸ್ ಗಾಗಿ ಒಂದು ತಿಂಗಳು ವಿಜಯಪುರ ಜಿಲ್ಲೆ, ಬಳಿಕ ಎರಡು ವರ್ಷ ಆನೆಕಲ್‌ ನಲ್ಲಿ ಕೆಲಸ ಮಾಡಿ ಕಳೆದ ಆರು ತಿಂಗಳಿನಿಂದ ರಾಮನಗರ ಜಿಲ್ಲೆಯಲ್ಲಿ ಕೆಲಸ ನಿಭಾಯಿಸುತ್ತಿದ್ದೇನೆ. ಖುಷಿ ಕೊಟ್ಟ ಸಾವಿರಾರು ಸುದ್ದಿಗಳ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಟ್ ಚಾಟ್ ಬಹಳ ತೃಪ್ತಿ ತಂದ ಹೈಲೇಟ್.. ಆನೇಕಲ್‌ ನ ಡ್ರಗ್ಸ್ ಸ್ಟೋರಿ, ಪರಪ್ಪನ ಅಗ್ರಹಾರದ ಆಫಿಸರ್ಸ್ ಸ್ಕ್ಯಾಂಡಲ್, ಎಲೆಕ್ಟ್ರಾನಿಕ್ ಸಿಟಿ ಯ ಟೋಯಿಂಗ್ ಬಂದ್, ಸರ್ಜಾಪುರದ ಪ್ರವಾಹ ಸಂದರ್ಭ,ಹೀಗೆ ಹತ್ತು ಹಲವು ಸುದ್ದಿಗಳು ಖಷಿ ಕೊಟ್ಟಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ರಾಜ್ಯಗಳಿಗೆ ತೆರಳಿ ಹಿಂದಿ‌ಹಾಗೂ ಕನ್ನಡಕ್ಕೆ ಕೆಲಸ ಮಾಡೋ ಅವಕಾಶ ನನ್ನ ಇನ್ಪುಟ್ ಟೀಂ ಕೊಟ್ಟಿದೆ. ಇನ್ನು ಹವ್ಯಾಸ ಗ್ಗೆ ಹೇಳೋದಾದ್ರೆ, ಸಂಗೀತ,ಕೇಳೊದು,ಹಾಡೋದು ಇಷ್ಟ. ಕ್ರೀಡೆ ವಿಚಾರಕ್ಕೆ ಬಂದ್ರೆ ಕ್ರಿಕೆಟ್ ಅಂಡ್ ಕಬ್ಬಡ್ಡಿ ಸ್ವಿಮಿಂಗ್. ಸ

Loading...
Unable to load recommendations.
Follow Us