ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ: ರಾಜ್ಯದ ವಿವಿಧೆಡೆ ಪೊಲೀಸರಿಂದ ಗಾಂಜಾ ನಾಶ

ಇಂದು (ಜೂನ್​​ 26) ರಂದು ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿವಿಧೆಡೆ ಪೊಲೀಸರು ದಾಳಿ ಮಾಡಿ 128 ಕೆ.ಜಿ ಗಾಂಜ ನಾಶಪಡಿಸಿದ್ದಾರೆ.

ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ: ರಾಜ್ಯದ ವಿವಿಧೆಡೆ ಪೊಲೀಸರಿಂದ ಗಾಂಜಾ ನಾಶ
ಗಾಂಜಾ ಸಾಂಧರ್ಬಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on: Jun 26, 2022 | 6:34 PM

ಚಾಮರಾಜನಗರ: ಇಂದು (ಜೂನ್​​ 26) ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ (International Day Against Drug Abuse) ಅಂಗವಾಗಿ ಜಿಲ್ಲೆಯ ವಿವಿಧೆಡೆ ಪೊಲೀಸರು (Police) ದಾಳಿ ಮಾಡಿ 128 ಕೆ.ಜಿ ಗಾಂಜಾ ನಾಶಪಡಿಸಿದ್ದಾರೆ. ಚಾಮರಾಜನಗರ (Chamarajanagar) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಮೈಸೂರಿನ ಜಯಪುರದ ಬಳಿಯ ಗುಜ್ಜೇಗೌಡನಪುರ ಗ್ರಾಮದ ಕುಲುಮೆಯಲ್ಲಿ ಸುಮಾರು 33 ಲಕ್ಷ ಮೌಲ್ಯದ 128 ಕೆ.ಜಿ. ಗಾಂಜಾ ನಾಶ ಮಾಡಲಾಗಿದೆ.

ಯಾದಗಿರಿ ಜಿಲ್ಲಾ ಪೊಲೀಸರಿಂದ ಒಣ ಗಾಂಜಾ ನಾಶ

ಯಾದಗಿರಿ: ಜಿಲ್ಲೆಯ ವಡಗೇರ ತಾಲೂಕಿನ  ಬಬಲಾದ ಗ್ರಾಮದ ಬಳಿ ಡಿವೈಎಸ್ಪಿ ಜೇಮ್ಸ್ ಮಿನೇಜಸ್ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿದ್ದು, ದಾಳಿಯಲ್ಲಿ  2 ಲಕ್ಷ ಮೌಲ್ಯದ 72 ಕೆಜಿ ಒಣ ಗಾಂಜಾವನ್ನು ಪೊಲೀಸರು ನಾಶ ಪಡಿಸಿದ್ದಾರೆ. ಹಾಗೇ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ವಶ ಪಡಿಸಿಕೊಂಡಿದ್ದ ಗಾಂಜಾವನ್ನು ಪೊಲೀಸರು ನಾಶ ಪಡಿಸಿದ್ದಾರೆ.

ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ 75 ಕೆಜಿ ಮಾದಕದ್ರವ್ಯ ನಾಶ

ಉತ್ತರ ಕನ್ನಡ: ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ 75 ಕೆಜಿ ಮಾದಕದ್ರವ್ಯವನ್ನು ಉತ್ತರಕನ್ನಡ ಜಿಲ್ಲಾ ಪೊಲೀಸರು ನಾಶ ಪಡಿಸಿದ್ದಾರೆ. ಒಟ್ಟು 69 ಪ್ರಕರಣಗಳಲ್ಲಿ ವಶಕ್ಕೆ ಪಡೆಯಲಾಗಿದ್ದ ಮಾದಕ ವಸ್ತುಗಳನ್ನು ನಾಶ ಪಡಿಸಲಾಗಿದೆ. 75.119 ಕೆಜಿ ಗಾಂಜಾ, 195 ಗ್ರಾಂ ಚರಸ್, 61 ಗಾಂಜಾ ಗಿಡ ಸೇರಿ 75.314 ಕೆಜಿ ಮಾದಕದ್ರವ್ಯ ಒಟ್ಟು 16,17,460 ಲಕ್ಷ ಮೌಲ್ಯದ ಮಾದಕ ದ್ರವ್ಯ ಪೊಲೀಸರು ನಾಶಪಡಿಸಿದ್ದಾರೆ. ಎಸ್ಪಿ ಸುಮನ್ ಪೆನ್ನೇಕರ್, ವಿಲೇವಾರಿ ಸಮಜಗಜ ಸದಸ್ಯರು, ಪಂಚರ ಸಮ್ಮುಖದಲ್ಲಿ ನಾಶ ಪಡಿಸಲಾಗಿದೆ.

ಬೀದರ್​ ಜಿಲ್ಲೆಯಲ್ಲಿ 999 ಕೆಜಿ 501 ಗ್ರಾಮ ಗಾಂಜಾ ನಾಶ

ಬೀದರ್​: ಅಂತಾರಾಷ್ಟ್ರೀಯ ಮಾದಕ ದ್ರವ್ಯ ದಿನಾಚರಣೆ ಹಿನ್ನಲೆ ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದ ಗಾಂಜಾ ಅಡ್ಡೆ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡಿದ್ದ 999 ಕೆಜಿ 501 ಗ್ರಾಮ ಗಾಂಜಾವನ್ನು ಜಿಲ್ಲೆಯ ಭಾಲ್ಕಿ ತಾಲೂಕಿನ ಧನ್ನೂರು ಗ್ರಾಮದಲ್ಲಿನ ಇನ್ವೇರೋ ಬಯೋಟೆಕ್ ಜೈವಿಕ ತ್ಯಾಜ್ಯ ವಿಲೇವಾರಿ ಕುಲುಮೆಯಲ್ಲಿ ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮೀಟಿ, ಪಂಚರ ಸಮಕ್ಷಮದಲ್ಲಿ ಪೊಲೀಸರು ನಾಶ ಪಡಿಸಿದ್ದಾರೆ.

ಗದಗ ಜಿಲ್ಲಾ ಪೊಲೀಸರಿಂದ ಗಾಂಜಾ ನಾಶ

ಗದಗ: ಗದಗ, ನರಗುಂದ ತಾಲೂಕು ಸೇರಿ ಜಿಲ್ಲೆಯ ಹಲವಡೆ 9 ಪ್ರಕರಣಗಳಲ್ಲಿ ಜಪ್ತಿ ಮಾಡಿದ್ದ 6.118 ಕೆಜಿ ಗಾಂಜಾವನ್ನು ಗದಗ ತಾಲೂಕಿನ ನರಸಾಪೂರ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಎಸ್ಪಿ ಶಿವಪ್ರಕಾಶ್ ಅವರ ನೇತೃತ್ವದಲ್ಲಿ ನಾಶ ಪಡಿಸಲಾಗಿದೆ.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ