ಕೊಚ್ಚಿ: ಕೇರಳದ ಹೆಚ್. ಮುಹಮ್ಮದ್ ಎಂಬ ವ್ಯಕ್ತಿಗೆ ಕೇರಳದ ನ್ಯಾಯಾಲಯವು ತನ್ನ ಅಪ್ರಾಪ್ತ ಮಗಳ ಮೇಲೆ 6 ವರ್ಷಗಳಿಂದ ಅತ್ಯಾಚಾರ ನಡೆಸಿದ್ದಕ್ಕಾಗಿ 101 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಹಾಗೇ, ಜೀವಾವಧಿ ಶಿಕ್ಷೆ ಘೋಷಿಸಿದೆ. ಆ ಬಾಲಕಿಯ ಮೇಲೆ 6 ವರ್ಷಗಳ ಕಾಲ ಮುಹಮ್ಮದ್ ಅತ್ಯಾಚಾರ ಮಾಡಿದ್ದ. ಇದರಿಂದಾಗಿ 16ನೇ ವಯಸ್ಸಿನಲ್ಲಿ ಆಕೆ ಗರ್ಭಿಣಿಯಾಗಿದ್ದಳು. ಇದರಿಂದಾಗಿ ಆತನ ಕೃತ್ಯ ಬೆಳಕಿಗೆ ಬಂದಿತ್ತು.
ಅಪರಾಧಿ ಮುಹಮ್ಮದ್ ತನ್ನ ಮಗಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಸಮರ್ಥನೆ ಮಾಡಿಕೊಂಡು, ಎಲ್ಲಾ ತಂದೆಯರೂ ತಮ್ಮ ಹೆಣ್ಣುಮಕ್ಕಳಿಗೆ ಹೀಗೆಯೇ ಮಾಡುತ್ತಾರೆ ಎಂದು ಹೇಳಿದ್ದ. ಇಂತಹ ಅಪರಾಧಗಳು ಮಕ್ಕಳ ಮೇಲೆ ಮಾತ್ರವಲ್ಲದೆ ಇಡೀ ಸಮಾಜದ ಮೇಲೆ ಗಣನೀಯ ಪರಿಣಾಮ ಬೀರುವುದರಿಂದ ಇದು ಗರಿಷ್ಠ ಶಿಕ್ಷೆಗೆ ಅರ್ಹವಾಗಿದೆ ಎಂದು ನ್ಯಾಯಾಲಯವು ಹೇಳಿದೆ.
ಇದನ್ನೂ ಓದಿ: Shocking News: ಬಸ್ನಲ್ಲಿ ಮಗಳ ಮೈ ಮುಟ್ಟಿದ ಕುಡುಕನ ಮೂಗು ಮುರಿದ ತಾಯಿ
ಕೇರಳದ ಮಲ್ಲಪುರಂನಲ್ಲಿರುವ ವಿಶೇಷ ತ್ವರಿತ ನ್ಯಾಯಾಲಯವು ತನ್ನ ಅಪ್ರಾಪ್ತ ಮಗಳನ್ನು ಅತ್ಯಾಚಾರ ಮಾಡಿದ ವ್ಯಕ್ತಿಗೆ 101 ವರ್ಷಗಳ ಜೈಲು ಶಿಕ್ಷೆ ಮತ್ತು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಕಳೆದ ವಾರ, ನ್ಯಾಯಾಲಯವು 43 ವರ್ಷದ ಆ ವ್ಯಕ್ತಿಗೆ ಶಿಕ್ಷೆ ವಿಧಿಸುವಾಗ ಈ ಘೋರ ಅತ್ಯಾಚಾರ ಆ ಹುಡುಗಿಯ ಜೀವನದ ಮೇಲೆ ಜೀವನಪರ್ಯಂತ ಪರಿಣಾಮವನ್ನು ಬೀರುತ್ತದೆ. ಕೇವಲ 16 ವರ್ಷದಲ್ಲಿ ಗರ್ಭಿಣಿಯಾಗಿರುವ ಆ ಬಾಲಕಿಯ ಜೀವನವೇ ಹಾಳಾಗಿ ಹೋಗಿದೆ. ಹಾಗೇ, ಮಾನಸಿಕವಾಗಿಯೂ ಆಕೆಯ ಮೇಲೆ ಇದು ದೊಡ್ಡ ಆಘಾತ ಉಂಟುಮಾಡಿದೆ ಎಂದು ಹೇಳಿತ್ತು.
ತನ್ನ ಮಗಳನ್ನು ಕಾಪಾಡಬೇಕಾದ ತಂದೆಯೇ ಅವಳ ಮೇಲೆ ಘೋರ ಅಪರಾಧ ಮಾಡಿದ್ದಾನೆ. 10ರಿಂದ 16ನೇ ವಯಸ್ಸಿನವರೆಗೆ ಆಕೆಯ ಮೇಲೆ ಅಪ್ಪ ಅತ್ಯಾಚಾರ ನಡೆಸಿದ್ದಾನೆ. ಆ ವ್ಯಕ್ತಿ ತನ್ನ ಮಗಳು 10 ವರ್ಷ ವಯಸ್ಸಿನವಳಾಗಿದ್ದಾಗ ಲೈಂಗಿಕ ದೌರ್ಜನ್ಯವನ್ನು ಪ್ರಾರಂಭಿಸಿದನು. 12 ವರ್ಷವನ್ನು ತಲುಪಿದ ನಂತರ, ಆಕೆಯ ತಾಯಿ ಮಲಗಿದ್ದಾಗ ಅಥವಾ ಮನೆಯಲ್ಲಿ ಇಲ್ಲದಿದ್ದಾಗ ಆಕೆಯ ಮೇಲೆ ಅತ್ಯಾಚಾರ ಮಾಡುವ ಮೂಲಕ ತೀವ್ರ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದನು. ಅವಳು 16 ವರ್ಷದವಳಿದ್ದಾಗಲೂ ಅತ್ಯಾಚಾರ ಮುಂದುವರೆಸಿದ್ದರಿಂದ ಆ ಹುಡುಗಿ ಗರ್ಭಿಣಿಯಾದಳು. ನಂತರ ಅವಳನ್ನು ಅವಳ ತಂದೆ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯವರು ಆಕೆಯನ್ನು ಪರೀಕ್ಷಿಸಿ ಆಕೆ 3 ತಿಂಗಳ ಗರ್ಭಿಣಿ ಎಂದು ಹೇಳಿದರು.
ಇದನ್ನೂ ಓದಿ: Crime News: ಪ್ರೀತಿಯ ನಾಟಕವಾಡಿ ಹಿಂದೂ ಯುವತಿಯ ಮತಾಂತರ, ಗೋಮಾಂಸ ತಿನ್ನಿಸಿ ಚಿತ್ರಹಿಂಸೆ; ಲವ್ ಜಿಹಾದ್ ಬಯಲು
ಇದನ್ನು ಯಾರಿಗೂ ಹೇಳಬೇಡಿ ಎಂದು ಆ ವ್ಯಕ್ತಿ ತನ್ನ ಮಗಳಿಗೆ ಹೇಳಿದ್ದರೂ, ಪೊಲೀಸರು ಆಸ್ಪತ್ರೆಯಲ್ಲಿ ಆಕೆಯ ಹೇಳಿಕೆಯನ್ನು ತೆಗೆದುಕೊಂಡರು. ಆ ಅಪ್ರಾಪ್ತ ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ಮುಂದೆ ತನ್ನ ಹೇಳಿಕೆಯನ್ನು ನೀಡಿದರು. ನ್ಯಾಯಾಧೀಶರ ಮುಂದೆ ಸಾಕ್ಷ್ಯವನ್ನು ಸಲ್ಲಿಸಲಾಯಿತು. ಅಪ್ರಾಪ್ತ ಸಂತ್ರಸ್ತೆಯ ಭ್ರೂಣದೊಂದಿಗೆ ಡಿಎನ್‌ಎ ಮಾದರಿಯನ್ನು ಸಹ ನ್ಯಾಯಾಧೀಶರ ಮುಂದೆ ಸಲ್ಲಿಸಲಾಯಿತು. ಇದು ಮುಹಮ್ಮದ್ ಅವರೇ ಈ ಮಗುವಿನ ತಂದೆ ಎಂದು ಸಾಬೀತುಪಡಿಸಿತು. ಇದರಿಂದ ಆತನ ಇಡೀ ಕುಟುಂಬ ಮಾತ್ರವಲ್ಲದೇ ಕೇರಳವೇ ಆಘಾತಕ್ಕೀಡಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ