AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಪ್ರೀತಿಯ ನಾಟಕವಾಡಿ ಹಿಂದೂ ಯುವತಿಯ ಮತಾಂತರ, ಗೋಮಾಂಸ ತಿನ್ನಿಸಿ ಚಿತ್ರಹಿಂಸೆ; ಲವ್ ಜಿಹಾದ್ ಬಯಲು

ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಹುಡುಗಿಯನ್ನು ಬಲೆಗೆ ಬೀಳಿಸಲು ರಾಣಾ ಎಂದು ಹೆಸರು ಹೇಳಿಕೊಂಡು ಮೋಸ ಮಾಡಿದ್ದಾನೆ. ನಂತರ ಬಲವಂತವಾಗಿ ಆಕೆಯನ್ನು ಮತಾಂತರಿಸಿ, ನಿಕಾಹ್ ಸಮಯದಲ್ಲಿ ಅವಳಿಗೆ ಗೋಮಾಂಸ ತಿನ್ನಿಸಿದ್ದಾನೆ. ಮದುವೆಯಾದ ನಂತರ ಮಗುವನ್ನು ಗರ್ಭಪಾತ ಮಾಡುವಂತೆ ಅವಳನ್ನು ಒತ್ತಾಯಿಸಿದ್ದಾನೆ.

Crime News: ಪ್ರೀತಿಯ ನಾಟಕವಾಡಿ ಹಿಂದೂ ಯುವತಿಯ ಮತಾಂತರ, ಗೋಮಾಂಸ ತಿನ್ನಿಸಿ ಚಿತ್ರಹಿಂಸೆ; ಲವ್ ಜಿಹಾದ್ ಬಯಲು
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on: Jun 07, 2024 | 7:40 PM

Share

ನವದೆಹಲಿ: ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್‌ನ (Love Jihad) ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮುಸ್ಲಿಂ ಯುವಕನೊಬ್ಬ ಬಿಹಾರದ ಹಿಂದೂ ಯುವತಿಯ ಬಳಿ ತಾನು ರಾಣಾ ಎಂಬ ಹಿಂದೂ ಯುವಕ ಎಂದು ಹೇಳಿಕೊಂಡಿದ್ದಾನೆ. ತನ್ನ ಗುರುತನ್ನು ಸುಳ್ಳು ಹೇಳಿ ಲವ್ ಜಿಹಾದ್‌ಗೆ ಸಿಕ್ಕಿಹಾಕಿಸಿ, ಅವಳೊಂದಿಗೆ ಪ್ರಣಯ ಸಂಬಂಧವನ್ನು ಪ್ರಾರಂಭಿಸಿ ನಂತರ ರಾಯ್​ಬರೇಲಿಯ ದರ್ಗಾಕ್ಕೆ ಕರೆತಂದಿದ್ದಾನೆ.

ಆಕೆಯನ್ನು ಅಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ನಂತರ, ಅವರು ತಮ್ಮ ನಿಕಾಹ್ (ಇಸ್ಲಾಮಿಕ್ ವಿವಾಹ ಸಮಾರಂಭ) ಸಮಯದಲ್ಲಿ ಆಕೆಗೆ ಗೋಮಾಂಸವನ್ನು ತಿನ್ನಿಸಿದ್ದಾರೆ. ಮದುವೆಯಾದ ನಂತರ ಆಕೆ ಗರ್ಭಿಣಿಯಾದಾಗ ಒತ್ತಾಯದಿಂದ ಆಕೆಗೆ ಗರ್ಭಪಾತ ಮಾಡಿಸಿದ್ದಾನೆ. ಬಳಿಕ, ಆಕೆಯ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರ ಹಾಕಿದ್ದಾನೆ. ಸಂತ್ರಸ್ತೆ ಇದೀಗ ನ್ಯಾಯಕ್ಕಾಗಿ ಹಿರಿಯ ಪೊಲೀಸ್ ಅಧೀಕ್ಷಕರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಯುವತಿ ನಾಪತ್ತೆ ಪ್ರಕರಣದ ಹಿಂದೆ ಲವ್ ಜಿಹಾದ್ ಶಂಕೆ

ಈ ವಿಷಯ ಬಹೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಸುನ್ನಿ ನಗರಕ್ಕೆ ಸಂಬಂಧಿಸಿದೆ. ಆರೋಪಿಯು ಗುರ್ಗಾಂವ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಸಂತ್ರಸ್ತೆಯ ಬಳಿಗೆ ಬಂದು ತನ್ನನ್ನು ರಾಣಾ ಎಂದು ಪರಿಚಯಿಸಿಕೊಂಡಿದ್ದಾನೆ. ನಂತರ ಆಕೆಯನ್ನು ಪ್ರೀತಿಸುವಂತೆ ಆಮಿಷವೊಡ್ಡಿದ್ದ. ವರದಿಗಳ ಪ್ರಕಾರ, ಅವಳು ದೆಹಲಿಯಲ್ಲಿ ಬಾಡಿಗೆ ಸ್ಥಳದಲ್ಲಿ ಉಳಿದುಕೊಂಡಿದ್ದಳು. ಅವನು ಸಹ ಅಲ್ಲೇ ಹತ್ತಿರದಲ್ಲೇ ವಾಸಿಸುತ್ತಿದ್ದನು. ರಾಣಾ ಎಂದು ಹೇಳಿಕೊಂಡು ಆಕೆಯೊಂದಿಗೆ ಸ್ನೇಹ ಬೆಳೆಸಿ ಕ್ರಮೇಣ ಆಕೆಯನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದ. ನಂತರ ಅವನು ಸುಮಾರು ಒಂದೂವರೆ ವರ್ಷಗಳ ಹಿಂದೆ ಬಹೇರಿಯಲ್ಲಿರುವ ತನ್ನ ನಿವಾಸಕ್ಕೆ ಅವಳನ್ನು ಕರೆದೊಯ್ದಿದ್ದ. ನಂತರ ಆತ ದರ್ಗಾದಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಒತ್ತಡ ಹೇರಿದ್ದ. ಅಲ್ಲಿ ಅವಳನ್ನು ಮದುವೆಯಾಗಿದ್ದ.

ಇದನ್ನೂ ಓದಿ: ಕೇರಳ ಮಾದರಿಯಲ್ಲಿ ರಾಜ್ಯದಲ್ಲಿ ಲವ್ ಜಿಹಾದ್ ಶುರುವಾಗಿದೆ: ಬಿವೈ ವಿಜಯೇಂದ್ರ

ಮದುವೆಯ ನಂತರ ತನಗೆ ಥಳಿಸಿ ಚಿತ್ರಹಿಂಸೆ ನೀಡಲಾಯಿತು ಎಂದು ಮಹಿಳೆ ಹೇಳಿದ್ದಾಳೆ. ಅವಳು ಗರ್ಭಿಣಿಯಾದಾಗ ಮಗುವನ್ನು ಗರ್ಭಪಾತ ಮಾಡುವಂತೆ ಒತ್ತಾಯಿಸಲಾಯಿತು. ಒಂದು ದಿನ ಆಕೆಯ ಗಂಡನ ತಮ್ಮ ಅವಳ ಕೋಣೆಗೆ ಪ್ರವೇಶಿಸಿ ಅತ್ಯಾಚಾರ ಮಾಡಿದನು. ಮನೆಗೆ ಬಂದ ಬಳಿಕ ಪತಿಗೆ ಈ ವಿಷಯ ಹೇಳಿದಾಗ ಬಾಯಿ ಮುಚ್ಚಿಕೊಳ್ಳುವಂತೆ ಬೆದರಿಸಿದ್ದು, ಯಾರಿಗಾದರೂ ಹೇಳಿದರೆ ಪೆಟ್ರೋಲ್ ಸುರಿದು ಸಜೀವ ದಹನ ಮಾಡುವುದಾಗಿ ಹೆದರಿಸಿದ್ದಾರೆ. ನಂತರ ಅವಳು ಬಹೇರಿ ಪೊಲೀಸ್ ಠಾಣೆಗೆ ಬಂದು ಎಲ್ಲ ವಿಷಯವನ್ನೂ ತಿಳಿಸಿದ್ದಾರೆ. ಗಂಡನ ವಿರುದ್ಧ ದೂರು ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ