ನಿಶಾನಿ ಬೆಟ್ಟದಲ್ಲಿ ಕಾಡಾನೆ ದಾಳಿಗೆ ವೃದ್ಧ ಸಾವು: ಶವ ಕಂಡು ಸ್ಥಳೀಯರಿಗೆ ಮಾಹಿತಿ ನೀಡಿದ ಚಾರಣಿಗರು

| Updated By: ಗಂಗಾಧರ​ ಬ. ಸಾಬೋಜಿ

Updated on: Mar 03, 2024 | 4:03 PM

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದ ನಿಶಾನಿ ಬೆಟ್ಟದಲ್ಲಿ ವೃದ್ಧನ ಶವವೊಂದು ಪತ್ತೆಯಾಗಿದೆ. ಕಾಡಾನೆ ದಾಳಿಗೆ ವೃದ್ಧ ಬಲಿ ಆಗಿರುವ ಶಂಕೆ ವ್ಯಕ್ತವಾಗಿದೆ. ನಿಶಾನಿ ಬೆಟ್ಟಕ್ಕೆ ಚಾರಣ ತೆರಳಿದವರಿಗೆ ವೃದ್ಧನ ಶವ ಕಂಡು ಬಂದಿದ್ದು,  ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳ ಮತ್ತು ಆಸುಪಾಸಿನಲ್ಲಿ ಆನೆ ನಡೆದಾಡಿದ ಹೆಜ್ಜೆ ಗುರುತುಗಳು ಕಂಡುಬಂದಿದ್ದರಿಂದ ಆನೆ ದಾಳಿಯಿಂದ ಸಾವು ಎಂದು ಸಂಶಯಿಸಲಾಗಿದೆ.

ನಿಶಾನಿ ಬೆಟ್ಟದಲ್ಲಿ ಕಾಡಾನೆ ದಾಳಿಗೆ ವೃದ್ಧ ಸಾವು: ಶವ ಕಂಡು ಸ್ಥಳೀಯರಿಗೆ ಮಾಹಿತಿ ನೀಡಿದ ಚಾರಣಿಗರು
ಮೃತ ವ್ಯಕ್ತಿ
Follow us on

ಕೊಡಗು, ಮಾರ್ಚ್​​​ 3: ಜಿಲ್ಲೆಯ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದ ನಿಶಾನಿ ಬೆಟ್ಟದಲ್ಲಿ ವೃದ್ಧನ ಶವವೊಂದು ಪತ್ತೆಯಾಗಿದೆ. ಕಾಡಾನೆ (elephant) ದಾಳಿಗೆ ವೃದ್ಧ ಬಲಿ ಆಗಿರುವ ಶಂಕೆ ವ್ಯಕ್ತವಾಗಿದೆ. ನಿಶಾನಿ ಬೆಟ್ಟಕ್ಕೆ ಚಾರಣ ತೆರಳಿದವರಿಗೆ ವೃದ್ಧನ ಶವ ಕಂಡು ಬಂದಿದ್ದು,  ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಅಪ್ಪಚ್ಚ (60) ಮೃತ ವ್ಯಕ್ತಿ. ನಿನ್ನೆ ಸಂಜೆಯಿಂದ‌ ಅಪ್ಪಚ್ಚ ಕಾಣೆಯಾಗಿದ್ದು, ಇಂದು ಬೆಟ್ಟದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನಾ ಸ್ಥಳ ಮತ್ತು ಆಸುಪಾಸಿನಲ್ಲಿ ಆನೆ ನಡೆದಾಡಿದ ಹೆಜ್ಜೆ ಗುರುತುಗಳು ಕಂಡುಬಂದಿದ್ದರಿಂದ ಆನೆ ದಾಳಿಯಿಂದ ಸಾವು ಎಂದು ಸಂಶಯಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕೊಳಚೆ ನೀರು ಕೆರೆಗೆ ಹರಿಬಿಟ್ಟ ಪರಿಣಾಮ ಲಕ್ಷಾಂತರ ಮೀನುಗಳ ಮಾರಾಣ ಹೋಮ

ಕೋಲಾರ: ಕೆರೆಯಲ್ಲಿ ಲಕ್ಷಾಂತರ ಮೀನುಗಳ ಮಾರಾಣ ಹೋಮ ನಡೆದಿರುವಂತಹ ಘಟನೆ ಕೋಲಾರ ತಾಲ್ಲೂಕಿನ ಚಿನ್ನಾಪುರ ಕೆರೆಯಲ್ಲಿ ನಡೆದಿದೆ. ಚಿನ್ನಾಪುರ ಗ್ರಾಮದ ಕೆರೆಗೆ ಕೋಲಾರ ನಗರದ ಕೊಳಚೆ ನೀರು ಹರಿಯುವ ಹಿನ್ನೆಲೆ ಮೀನುಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಲಕ್ಷಾಂತರ ಮೀನುಗಳು ನೀರಿನಲ್ಲಿ ಸತ್ತು ತೇಲಾಡುತ್ತಿದ್ದು, ನಾಯಿಗಳಿಗೆ ಆಹಾರವಾಗಿವೆ.

ಇದನ್ನೂ ಓದಿ: ಧಾರವಾಡ: ತಾಯಿಯನ್ನು ಕೊಂದು ಬಳಿಕ ಆತ್ಮಹತ್ಯೆಗೆ ಶರಣಾದ ಮಗ

ಇದೀಗ ಮೀನು ಸಾಕಾಣಿಕೆ ಗುತ್ತಿಗೆ ಪಡೆದವರಲ್ಲಿ ಆತಂಕ‌ ಶುರುವಾಗಿದೆ. ಬಿಸಿಲಿನಿಂದ ಕೆರೆಯಲ್ಲಿ ನೀರು ಕಡಿಮೆಯಾಗಿರುವ ಹಿನ್ನಲೆ ಅಥವಾ ನಗರದ ಕೊಳಚೆ ನೀರು ಸರಿಯಾಗಿ ಶುದ್ದೀಕರಣ ಮಾಡದೆ ಹರಿಸಿರುವ ಶಂಕೆ ಮೀನುಗಳು ಸಾವನ್ನಪ್ಪಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಚೆಕ್‌ಪೋಸ್ಟ್‌ನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಅಕ್ಕಿ ಕಳ್ಳರು ಎಸ್ಕೇಪ್‌

ಗದಗ: ಪೊಲೀಸರ ಮೇಲೆ ಹಲ್ಲೆ ಮಾಡಿ ಅಕ್ಕಿ ಕಳ್ಳರು ಎಸ್ಕೇಪ್ ಆಗಿರುವಂತಹ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಚೆಕ್ ಪೋಸ್ಟ್ ಬಳಿ ನಡೆದಿದೆ. ಲಕ್ಷ್ಮೇಶ್ವರ ಠಾಣೆಯ ಪೊಲೀಸ್ ಪೇದೆ ಎಚ್.ಎನ್.ಗೊರವರ್ ಮೇಲೆ ಹಲ್ಲೆ ಮಾಡಲಾಗಿದೆ. ಅನ್ನಭಾಗ್ಯ ಅಕ್ಕಿ ವಾಹನ ತಪಾಸಣೆ ಮಾಡುವ ವೇಳೆ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲೊಂದು ಅಮಾನುಷ ಕೃತ್ಯ, ಹೆತ್ತ ತಾಯಿಯಿಂದಲೇ ಮಗುವಿನ ಮೇಲೆ ಹಲ್ಲೆ

ರಾಮಗೇರಿ ಚೆಕ್ ಪೋಸ್ಟ್​​ನಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಪೊಲೀಸ್ ಸಮವಸ್ತ್ರ ಧರಿಸಿ ಕರ್ತವ್ಯ ನಿರತ ಪೇದೆಯ ಮೇಲೆಯೇ ಪುಂಡರು ಹಲ್ಲೆ ಮಾಡಿದ್ದಾರೆ. ಸಮವಸ್ತ್ರ ಹರಿದು, ಮೈ ಕೈ ಮೇಲೆ ಬಾಸುಂಡೆ ಬೀಳುವಂತೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಮಾಡಲಾಗಿದೆ. ಘಟನೆ ನಡೆದ ಕೂಡಲೇ ವಾಹನ ಸಮೇತವಾಗಿ ಸ್ಥಳದಿಂದ ಆರೋಪಿಗಳು ಪರಾರಿಯಾಗಿದ್ದಾರೆ. ಜಿಲ್ಲೆಯಲ್ಲಿ ಎಗ್ಗಿಲ್ಲದೇ ಅಕ್ರಮ ಅನ್ನ ಭಾಗ್ಯ ಅಕ್ಕಿ ಸಾಗಾಟ ನಡೆದಿದೆ. ಲಕ್ಷ್ಮೇಶ್ವರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.