ವ್ಯಕ್ತಿಯ ಬರ್ಬರ ಕೊಲೆ, ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಕಾದಿತ್ತು ಆಶ್ಚರ್ಯ! ಅದೇನು ಗೊತ್ತಾ?

ಈತನಿಗೆ ಎರಡು ಮದುವೆಯಾಗಿ ಐವರು ಮಕ್ಕಳಿದ್ದಾರೆ. ಆದರೂ ಈತನೊಂದಿಗೆ ಯಾರೂ ನಿಂತಿಲ್ಲ. ಸಂಜೆಯಾಗುತಲ್ಲೇ ಕುಡಿದು ಮನೆಯಲ್ಲಿ ಒಂಟಿಯಾಗಿದ್ದ ಈತ ಬೆಳಗ್ಗೆ ಬರ್ಬರವಾಗಿ ಕೊಲೆಯಾಗಿದ್ದ.

ವ್ಯಕ್ತಿಯ ಬರ್ಬರ ಕೊಲೆ, ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಕಾದಿತ್ತು ಆಶ್ಚರ್ಯ! ಅದೇನು ಗೊತ್ತಾ?
ಒಂಟಿಯಾಗಿದ್ದ ವೆಂಕಟೇಶಪ್ಪನ ಕೊಲೆ
Follow us
TV9 Web
| Updated By: Rakesh Nayak Manchi

Updated on: Nov 06, 2022 | 3:55 PM

ಕೋಲಾರ: ವೆಂಕಟೇಶನಿಗೆ ಎರಡು ಮದುವೆಯಾಗಿದ್ದರೂ ಐದು ಜನ ಮಕ್ಕಳಿದ್ದರೂ ಯಾರೂ ಅತನ ಜೊತೆಗೆ ವಾಸವಿರಲಿಲ್ಲ. ಒಂಬ್ಬಂಟಿಯಾಗಿ ಜೀವನ ಮಾಡಿಕೊಂಡಿದ್ದವನು. ಕುಡುಕುತನವನ್ನು ಸಹಿಸದ ಆತನ ಕುಟುಂಬಸ್ಥರು ದೂರವೇ ಉಳಿದುಕೊಂಡಿದ್ದರು. ಹೀಗೆ ಯಾರಿಗೂ ಬೇಡವಾಗಿದ್ದವನು ಬೆಳ್ಳಂಬೆಳಿಗ್ಗೆಯೇ ಬರ್ಬರವಾಗಿ ಕೊಲೆಯಾಗಿ ಬಿದ್ದಿದ್ದನು. ಇಂತಹ ಸ್ಥಿತಿಯಲ್ಲಿ ಈತನಿಗಾಗಿ ಮರುಗುವವರು ಯಾರೂ ಇಲ್ಲ, ಕಣ್ಣೀರು ಸುರಿಸುವವರು ಯಾರೂ ಇಲ್ಲ, ನ್ಯಾಯಕ್ಕಾಗಿ ಅಂಗಲಾಚುವವರೂ ಇಲ್ಲ. ಯಾಕಂದರೆ ಕುಟುಂಬಸ್ಥರನ್ನು ಅಷ್ಟರ ಮಟ್ಟಿಗೆ ಹಿಂಸೆ ನೀಡುತ್ತಿದ್ದನಂತೆ. ಈತನ ಕಾಟಕ್ಕೆ ಕುಟುಂಬವೇ ದೂರ ಹೋಗಿತ್ತು. ಹಾಗಿದ್ದರೆ ಕೊಲೆ ಮಾಡಿದ್ದು ಯಾರು?

ನವೆಂಬರ್ 4ರಂದು ಬೆಳ್ಳಂಬೆಳಿಗ್ಗೆ ವೇಮಗಲ್​ ಪಟ್ಟಣದ ಬಿ2 ಬ್ಲಾಕ್​ನಲ್ಲಿ ವೆಂಕಟೇಶ ಬರ್ಬರ ಕೊಲೆಯಾಗಿ ಹೋಗಿದ್ದ, ಮನೆಯ ಅಕ್ಕಪಕ್ಕದವರು ಅದನ್ನ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರಿಗೆ ಒಂದು ಆಶ್ಚರ್ಯ ಕಾದಿತ್ತು. ಯಾಕೆಂದರೆ ವಾರದ ಹಿಂದಷ್ಟೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ವೆಂಕಟೇಶ್​ ತಮ್ಮ ನಾಗರಾಜ್​ ಕೊಲೆಯಾದಾಗ ಇದೇ ವೆಂಕಟೇಶ್​ನನ್ನು ಪೊಲೀಸರು ಕರೆಸಿ ವಿಚಾರಣೆ ನಡೆಸಿ ಕಳುಹಿಸಿದ್ದರು. ಇದಾಗಿ ಇನ್ನೂ ಆರು ದಿನ ಕಳೆಯುವ ಮುನ್ನವೇ ವೆಂಕಟೇಶ್​ ಕೂಡಾ ಹೀಗೆ ಕೊಲೆಯಾಗಿ ಹೋಗಿದ್ದಾನೆ. ಅಷ್ಟಕ್ಕೂ ಈ ಕೊಲೆಯಾದ ವೆಂಕಟೇಶಪ್ಪನ ಕಥೆ ಏನು ಅಂತ ನೋಡುವುದಾದರೆ ಇವನು ಎರಡು ಮದುವೆಯಾಗಿದ್ದ ಮೊದಲ ಹೆಂಡತಿ ಜಯಮ್ಮರನ್ನು ತಾನೇ ಕೊಲೆ ಮಾಡಿ ಜೈಲಿಗೂ ಹೋಗಿ ಬಂದಿದ್ದ.

ಕೊಲೆಯ ನಂತರ ರತ್ನಮ್ಮ ಎಂಬಾಕೆಯನ್ನು ಎರಡನೇ ಮದುವೆ ಮಾಡಿಕೊಂಡಿದ್ದ. ಇಬ್ಬರು ಹೆಂಡತಿಯರಿಗೂ ಸೇರಿ ಒಟ್ಟು ಐದು ಜನ ಮಕ್ಕಳಿದ್ದರು, ಆದರೆ ಯಾರೂ ಕೂಡಾ ಈತನ ಜೊತೆಗೆ ವಾಸವಿರಲಿಲ್ಲ. ಕುಡಿದು ಬಂದು ಹಿಂಸಿಸುತ್ತಿದ್ದ, ಮನಸ್ಸಿಗೆ ಬಂದಂತೆ ಹೊಡೆಯುವುದು, ಬಡಿಯುವುದು ಮಾಡುತ್ತಿದ್ದ. ಹೀಗಾಗಿ ಯಾರೂ ಈತನ ಜೊತೆಗೆ ಇರಲು ಇಷ್ಟಪಡದೇ ಎಲ್ಲರೂ ಈತನಿಂದ ದೂರವೇ ಇದ್ದರು. ತಾನೊಬ್ಬನೇ ವೇಮಗಲ್​ನ ಬಿ2 ಬ್ಲಾಕ್​ನ ಮನೆಯಲ್ಲಿ ವಾಸವಾಗಿದ್ದ. ಅಲ್ಲಿ ಇಲ್ಲಿ ತಿನ್ನುವುದು ಸಂಜೆಗೆ ಒಂದಷ್ಟು ಕುಡಿದು ಮಲಗುತ್ತಿದ್ದ. ಹೀಗಿರುವಾಗ ಆ ವೆಂಕಟೇಶಪ್ಪನೇ ಕೊಲೆಯಾಗಿ ಹೋಗಿದ್ದಾನೆ.

ವೆಂಕಟೇಶಪ್ಪ ಕೊಲೆಯಾಗಿದ್ದ ಬಗ್ಗೆ ಪೊಲೀಸರು ವಿಷಯ ತಿಳಿಸಿದ ನಂತರವೇ ಕುಟುಂಬಸ್ಥರು ಆಗಮಿಸಿದ್ದರು. ಆದರೆ ಯಾರೊಬ್ಬರಿಗೂ ವೆಂಕಟೇಶಪ್ಪ ಕೊಲೆಯಾಗಿರುವ ಬಗ್ಗೆ ಬೇಸರವಿರಲಿಲ್ಲ, ಯಾಕಂದರೆ ಕುಟುಂಬಸ್ಥರನ್ನು ಅಷ್ಟರ ಮಟ್ಟಿಗೆ ಹಿಂಸೆ ನೀಡುತ್ತಿದ್ದನಂತೆ. ಅಷ್ಟೇ ಅಲ್ಲದೆ ಯಾರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ವಿಚಿತ್ರ ವರ್ತನೆಯಿಂದ ತನ್ನ ಕುಟುಂಬಸ್ಥರೆಲ್ಲರಿಂದ ದೂರಾಗಿ ಹೋಗಿದ್ದ. ಅದಕ್ಕಾಗಿಯೇ ಅವನು ಕೊಲೆಯಾಗಿ ಹೋಗಿದ್ದರೂ ಪೊಲೀಸರಿಗೆ ಕೊಲೆ ಆರೋಪಿಗಳನ್ನು ಹುಡುಕಿಕೊಡಿ ನಮಗೆ ಯಾರ ಮೇಲೆ ಅನುಮಾವಿದೆ ಎಂದು ಕೂಡಾ ಹೇಳಲು ಸಿದ್ದವಿರಲಿಲ್ಲ. ಜೊತೆಗೆ ಅವರ್ಯಾರಿಗೂ ವೆಂಕಟೇಶಪ್ಪನ ವ್ಯವಹಾರ ಏನು ಗೊತ್ತಿರಲಿಲ್ಲವಂತೆ. ಇನ್ನು ಪೊಲೀಸರು ನೀಡಿದ ಮಾಹಿತಿ ಮೇರೆಗೆ ಬಂದು ಶವದ ಮರಣೋತ್ತರ ಪರೀಕ್ಷೆ ಸೇರಿದಂತೆ ಕಾರ್ಯಗಳನ್ನು ಮಾಡಲು ಮುಂದಾಗಿದ್ದರು. ಇನ್ನು ವಾರದ ದಿನಗಳ ಹಿಂದೆ ಕೊಲೆಯಾಗಿದ್ದ ನಾಗರಾಜ್​ ಮತ್ತು ವೆಂಕಟೇಶಪ್ಪ ಇಬ್ಬರ ಸಾವಿನಲ್ಲಿ ಏನೋ ಅನುಮಾನವಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಒಟ್ಟಾರೆ ವೆಂಕಟೇಶಪ್ಪ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾನೆ. ಆದರೆ ಕೊಲೆಯಾದವನ ಬಗ್ಗೆ ಯಾರೊಬ್ಬರು ತಲೆಕೆಡಿಸಿಕೊಳ್ಳುವವರಿಲ್ಲ, ಕಣ್ಣೀರು ಹಾಕುವವರು ಇಲ್ಲ. ಇಂಥ ಪರಿಸ್ಥಿತಿಯಲ್ಲಿದ್ದವನನ್ನು ಕೊಲೆ ಮಾಡಿದ್ಯಾರು? ಕೊಲೆ ಮಾಡಿದ್ದೇಕೆ? ಅನ್ನೋದನ್ನ ಸದ್ಯ ಪೊಲೀಸರು ತನಿಖೆ ಮಾಡಿದ ನಂತರವಷ್ಟೇ ತಿಳಿದು ಬರಲಿದೆ.

ವರದಿ: ರಾಜೇಂದ್ರಸಿಂಹ ಟಿವಿ9 ಕೋಲಾರ

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು
ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು
‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ
‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ