Madhya Pradesh Crime: ಕಲ್ಲಿನಿಂದ ತಲೆ ಒಡೆದು, ಚಾಕುವಿನಿಂದ ಕತ್ತು ಸೀಳಿ ಮೂವರು ಅಪ್ರಾಪ್ತ ಬಾಲಕರಿಂದ ಬರ್ಬರ ಹತ್ಯೆ

ಮೂವರು ಅಪ್ರಾಪ್ತ ಬಾಲಕರು ಸೇರಿ ಬಾಲಕನೋರ್ವನ ತಲೆ ಒಡೆದು, ಕತ್ತು ಸೀಳಿ ಹತ್ಯೆ ಮಾಡಿ, ಪ್ಲಾಸ್ಟಿಕ್​ ಬ್ಯಾಗ್​ನಲ್ಲಿ ತುಂಬಿ ಎಸೆದಿರುವ ಘಟನೆ ಮಧ್ಯಪ್ರದೇಶದ ಸಿಯೋನಿಯಲ್ಲಿ ನಡೆದಿದೆ.

Madhya Pradesh Crime: ಕಲ್ಲಿನಿಂದ ತಲೆ ಒಡೆದು, ಚಾಕುವಿನಿಂದ ಕತ್ತು ಸೀಳಿ ಮೂವರು ಅಪ್ರಾಪ್ತ ಬಾಲಕರಿಂದ ಬರ್ಬರ ಹತ್ಯೆ
Crime Scene
Image Credit source: Times Of India

Updated on: May 16, 2023 | 8:28 AM

ಮೂವರು ಅಪ್ರಾಪ್ತ ಬಾಲಕರು ಸೇರಿ ಬಾಲಕನೋರ್ವನ ತಲೆ ಒಡೆದು, ಕತ್ತು ಸೀಳಿ ಹತ್ಯೆ ಮಾಡಿ, ಪ್ಲಾಸ್ಟಿಕ್​ ಬ್ಯಾಗ್​ನಲ್ಲಿ ತುಂಬಿ ಎಸೆದಿರುವ ಘಟನೆ ಮಧ್ಯಪ್ರದೇಶದ ಸಿಯೋನಿಯಲ್ಲಿ ನಡೆದಿದೆ. 11 ವರ್ಷದ ಅಪ್ರಾಪ್ತ 12 ವರ್ಷದ ತನ್ನ ಸ್ನೇಹಿತನನ್ನೇ ಸೈಕಲ್​ಚೈನ್​ನಿಂದ ಕತ್ತು ಹಿಸುಕಿ, ಕೊಯ್ದು ಕೊಲೆ ಮಾಡಿ ಬಳಿಕ ಕಲ್ಲಿನಿಂದ ತಲೆಯನ್ನು ಒಡೆದಿದ್ದಾರೆ, ಮನೆಯ ಬಳಿ ಕಸದ ರಾಶಿಯಲ್ಲಿ ಇದನ್ನು ಬಿಸಾಡಿದ್ದರು. ಮಹಿಳೆಯೊಬ್ಬರು ರಕ್ತಸಿಕ್ತ ಚೀಲವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಅಪರಾಧ ಬೆಳಕಿಗೆ ಬಂದಿದೆ.

ಹಳೆ ಜಗಳವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಮೂವರು ಬಾಲಕರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು 14 ದಿನಗಳ ಕಾಲ ಸುಧಾರಣಾ ಗೃಹಕ್ಕೆ ಕಳುಹಿಸಲಾಗಿದೆ. ಇಬ್ಬರು ಸಹೋದರರು ಸೇರಿದಂತೆ ಕ್ರಮವಾಗಿ 16, 14 ಮತ್ತು 11 ವರ್ಷ ವಯಸ್ಸಿನ ಮೂವರು 12 ವರ್ಷದ ಬಾಲಕನನ್ನು ಸಿಯೋನಿ ಜಿಲ್ಲಾ ಕೇಂದ್ರದಿಂದ ಸುಮಾರು 28 ಕಿಮೀ ದೂರದಲ್ಲಿರುವ ಮಗರ್‌ಕಥಾ ಗ್ರಾಮದ ನಿರ್ಜನ ಸ್ಥಳಕ್ಕೆ ಭಾನುವಾರ ಕರೆದಿದ್ದಾರೆ ಎಂದು ಬರ್ಘಾಟ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪ್ರಸನ್ನ ಶರ್ಮಾ ತಿಳಿಸಿದ್ದಾರೆ.

ಮತ್ತಷ್ಟು ಓದಿ: ವೋಟ್ ಹಾಕಿಲ್ಲವೆಂದು ಅಣ್ಣ ತಮ್ಮಂದಿರ ನಡುವೆ ಕಿರಿಕ್; ದೊಡ್ಡಪ್ಪನನ್ನೇ ಕೊಲೆ ಮಾಡಿದ ಮಗ

ಮೂವರು ಬಾಲಕರು ಈ ಹಿಂದೆ ಕೊಲೆ ಮಾಡಿ ಅನುಭವ ಇರುವವರ ರೀತಿ ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಮೊದಲು ಹತ್ಯೆ ಮಾಡಲು ಸಂಚು ರೂಪಿಸಿದ್ದರು, ಬಳಿಕ ಬಾಲಕನನ್ನು ಸ್ಥಳಕ್ಕೆ ಕರೆದೊಯ್ದಿದ್ದರು, ಅವನನ್ನು ಹಿಡಿದು ಸೈಕಲ್ ಚೈನ್‌ನಿಂದ ಕತ್ತು ಹಿಸುಕಿ ಕೊಂದರು. ಹುಡುಗ ನೋವಿನಿಂದ ನರಳುತ್ತಿರುವಾಗ ಅವರು ದೊಡ್ಡ ಕಲ್ಲಿನಿಂದ ಅವನ ತಲೆಯನ್ನು ಒಡೆದು, ಕತ್ತು ಸೀಳಿದ್ದರು ಎಂದು ಶರ್ಮಾ ಹೇಳಿದರು.

12 ವರ್ಷದ ಬಾಲಕನ ಶವವನ್ನು ಪಾಲಿಥಿನ್ ಚೀಲದಲ್ಲಿ ತುಂಬಿ ಅವರ ಮನೆ ಬಳಿಯ ಬೆಣಚುಕಲ್ಲುಗಳ ರಾಶಿಯ ಮೇಲೆ ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಇತರೆ ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us