ಯಾರದೋ ಮೇಲಿನ ಸಿಟ್ಟಿಗೆ, ಇನ್ಯಾರದ್ದೋ ಮೇಲೆ…ಹೌದು, ಗುರುಗ್ರಾವ್ನ ಈ ಪ್ರಕರಣವು ಇಡೀ ಊರನ್ನೇ ಬೆಚ್ಚಿಬೀಳಿಸಿತ್ತು. ಯಾಕೆಂದರೆ ಈ ಘಟನೆಯಲ್ಲಿ ಅಸುನೀಗಿದ್ದು 18 ತಿಂಗಳ ಮಗು. ಆರು ತಿಂಗಳ ಹಿಂದೆ ನಡೆದ ಅಮಾನುಷ ಕೃತ್ಯವನ್ನು ಬೇಧಿಸುವಲ್ಲಿ ಫರಿದಾಬಾದ್ ಪೊಲೀಸರು ಯಶಸ್ವಿಯಾಗಿದ್ದಾರೆ. ಅಂದರೆ ಫೆಬ್ರವರಿಯಲ್ಲಿ ಗುರುಗಾವ್ನ ಫರಿದಾಬಾದ್ ಸೆಕ್ಟರ್ನಲ್ಲಿ 22ರ ಹರೆಯದ ನರೇಶ್ ಎಂಬ ಯುವಕ ವಾಸಿಸುತ್ತಿದ್ದ. ನಿರುದ್ಯೋಗಿಯಾಗಿದ್ದ ಆತ ಮಾದಕ ವ್ಯಸಕ್ಕೆ ಒಳಗಾಗಿದ್ದ. ಅದೊಂದು ದಿನ ಪಕ್ಕದ ಮನೆಯ 8 ವರ್ಷದ ಹುಡುಗಿ ಕೈಯ್ಯಲ್ಲಿದ್ದ 50 ರೂ. ಅನ್ನು ನರೇಶ್ ಕಸಿದಿದ್ದ. ಈ ಘಟನೆಯನ್ನು ಅಲ್ಲೇ ಹತ್ತಿರದಲ್ಲಿದ್ದ ಮತ್ತೋರ್ವ ನೆರೆ ಮನೆಯ ವ್ಯಕ್ತಿಯೊಬ್ಬರು ನೋಡಿದ್ದರು. ಈ ವಿಚಾರವಾಗಿ ಜಗಳವಾಗಿತ್ತು.
ಘಟನೆ ನಡೆದು ಒಂದೆರೆಡು ದಿನಗಳ ಕಳೆಯುವುದರೊಳಗೆ ನರೇಶ್ ಮತ್ತೆ ಸಾಕ್ಷಿ ಹೇಳಿದ್ದ ವ್ಯಕ್ತಿಯೊಂದಿಗೆ ಜಗಳಕ್ಕಿಳಿದಿದ್ದ. ಹೀಗೆ ಕಂಡಾಗೆಲ್ಲಾ ಜಗಳ ಮಾಡಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದ. ಈ ವಿಚಾರವಾಗಿ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ ನರೇಶ್ ಸಂದರ್ಭಕ್ಕಾಗಿ ಕಾಯುತ್ತಿದ್ದನು. ಫೆಬ್ರವರಿ 5 ರಂದು ಸಾಕ್ಷಿ ನುಡಿದಿದ್ದ ವ್ಯಕ್ತಿಯ 18 ತಿಂಗಳ ಮಗು ಮನೆಯ ಬಳಿ ಒಬ್ಬನೇ ಆಡುತ್ತಿರುವುದನ್ನು ನರೇಶ್ ಗಮನಿಸಿದ್ದ.
ಮಗುವನ್ನು ಪುಸಲಾಯಿಸಿ ತನ್ನ ಫ್ಲಾಟ್ಗೆ ಕರೆದುಕೊಂಡು ಹೋದ ನರೇಶ್, ಬಳಿಕ ದೊಡ್ಡದಾದ ನೀರಿನ ಟ್ಯಾಂಕ್ನಲ್ಲಿ ಮುಗಿಸಿ ಕೊಲೆ ಮಾಡಿದ್ದ. ಇತ್ತ ಮಗುವಿನ ಪಾಲಕರು ಹುಡುಕಾಟ ಶುರು ಮಾಡಿದರು ಪತ್ತೆಯಾಗಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಇದೇ ಸಂದರ್ಭದಲ್ಲಿ ನರೇಶ್ ಪರಾರಿಯಾಗಿದ್ದ.
ನರೇಶ್ ಹುಡುಕಾಟಕ್ಕಾಗಿ ಪೊಲೀಸರು ಬಲೆ ಬೀಸಿದ್ದರು. ಆದರೆ ಸದಾ ಒಂದೊಂದು ಸ್ಥಳ ಬದಲಿಸುತ್ತಿದ್ದ ಆರೋಪಿಯನ್ನು ಬಂಧಿಸುವುದು ಕೂಡ ಸುಲಭವಾಗಿರಲಿಲ್ಲ. ಇದೀಗ ಮೊಬೈಲ್ ಟ್ರ್ಯಾಕ್ ಮಾಡುವ ಮೂಲಕ 6 ತಿಂಗಳ ಬಳಿಕ ಕೊಲೆಗಡುಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ವೇಳೆ ವಿಚಾರಣೆಗೆ ಒಳಪಡಿಸಿದಾಗ ಟ್ಯಾಂಕ್ನಲ್ಲಿ ಬಾಯಿ ಮುಚ್ಚಿ ಮುಳುಗಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ಕೊಲೆಗೆ ಕಾರಣ ಅವತ್ತು 50 ರೂ. ಜಗಳ ಎಂದು ಬಾಯಿಬಿಟ್ಟಿದ್ದಾನೆ. ಸದ್ಯ ಆರೋಪಿ ನರೇಶ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ICC Test Rankings: ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್: ಒಂದೇ ಪಂದ್ಯದಿಂದ 18 ಸ್ಥಾನ ಮೇಲೇರಿದ ಸಿರಾಜ್
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿದು ಹರಕಲು ಬಾಯಿ ಎಂದ ಮಾಜಿ ಕ್ರಿಕೆಟಿಗ
ಇದನ್ನೂ ಓದಿ: T20 World Cup 2021: 7 ಮಂದಿ ಔಟ್: ಟಿ20 ವಿಶ್ವಕಪ್ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ
ಇದನ್ನೂ ಓದಿ: T20 World Cup: ಕೊಹ್ಲಿ ಹುಟ್ಟುಹಬ್ಬದಂದು ಟಿ20 ವಿಶ್ವಕಪ್ನಲ್ಲಿ ಭಾರತದ ಎದುರಾಳಿ ಯಾರು?
(Man fights with neighbour for Rs 50, drowns his 18-month-old child to revenge)