ಮಲಗಿದ್ದ ಗೆಳತಿಯ ಕಣ್ಣಿನ ರೆಪ್ಪೆ ಅರಳಿಸಿ ಮೊಬೈಲ್ ಲಾಕ್ ಓಪನ್ ಮಾಡಿ 18 ಲಕ್ಷ ರೂ ದೋಚಿದ ಯುವಕ
ಫೇಸ್ ಲಾಕ್ ಇದ್ದರೂ ಮಲಗಿದ್ದ ಗೆಳತಿಯ ಕಣ್ಣು ಓಪನ್ ಮಾಡಿ ಮೊಬೈಲ್ ಲಾಕ್ ಓಪನ್ ತೆಗೆದು ವ್ಯಕ್ತಿಯೊಬ್ಬ ತನ್ನ ಗೆಳತಿಯ ಫೋನಿನಿಂದ ಲಕ್ಷಾಂತರ ರೂ.ಗಳನ್ನು ದೋಚಿದ ಘಟನೆ ನಡೆದಿದೆ.

ಫೋನಿನ ಸುರಕ್ಷತೆಗಾಗಿ ಫೇಸ್ ಲಾಕ್ ಇಟ್ಟುಕೊಳ್ಳುವುದು ಸಾಮಾನ್ಯ. ಆದರೆ ಅದು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಮೂಡುತ್ತದೆ. ಮೊಬೈಲ್ಗೆ ಇಟ್ಟುಕೊಳ್ಳುವ ಲಾಕ್ಗಳು ಸುರಕ್ಷಿತವಲ್ಲ ಎನ್ನುವುದಕ್ಕೆ ಉದಾಹರಣೆ ಎನ್ನುವಂತಹ ಘಟನೆ ಚೀನಾದಲ್ಲಿ ನಡೆದಿದೆ. ಫೇಸ್ ಲಾಕ್ ಇದ್ದರೂ ಮಲಗಿದ್ದ ಗೆಳತಿಯ ಕಣ್ಣು ಓಪನ್ ಮಾಡಿ ಮೊಬೈಲ್ ಲಾಕ್ ತೆಗೆದು ವ್ಯಕ್ತಿಯೊಬ್ಬ ತನ್ನ ಗೆಳತಿಯ ಫೋನಿನಿಂದ ಲಕ್ಷಾಂತರ ರೂ.ಗಳನ್ನು ದೋಚಿದ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಗೆಳತಿ ಮಲಗಿದ್ದ ವೇಳೆ ಆಕೆಯ ಕಣ್ಣುಗಳನ್ನು ಓಪನ್ ಮಾಡಿಕೊಂಡು ಮೊಬೈಲ್ ಅನ್ನು ಅನ್ಲಾಕ್ ಮಾಡಿ ಬರೋಬ್ಬರಿ 18 ಲಕ್ಷ ರೂಗಳನ್ನು ದೋಚಿದ್ದಾನೆ. ಚೀನಾದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ, ಕೋರ್ಟ್ ಗೆ ಹಾಜರುಪಡಿಸಿದ್ದು, ನ್ಯಾಯಾಲಯ 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ಹುವಾಂಗ್ ನಗರದ ವ್ಯಕ್ತಿಯೊಬ್ಬ ಜೂಜಾಟದಲ್ಲಿ ದೊಡ್ಡ ಪ್ರಮಾಣದ ಸಾಲ ಮಾಡಿಕೊಂಡಿದ್ದ ಎನ್ನಲಾಗಿದ್ದು, ಅದನ್ನು ತೀರಿಸಲು ತನ್ನ ಗೆಳತಿಯ ಫೋನ್ನಿಂದ ಹಣ ಲಪಟಾಯಿಸಿದ್ದಾನೆ. ಗೆಳತಿಯ ಫೊನ್ನಲ್ಲಿ ಮೊದಲು ಫಿಂಗರ್ಪ್ರಿಂಟ್ ಮೂಲಕ ಓಪನ್ ಮಾಡಲು ಪ್ರಯತ್ನಿಸಿದ್ದಾನೆ. ಬಳಿಕ ಆಕೆಯ ಕಣ್ಣಿನ ರೆಪ್ಪೆಗಳನ್ನು ಬಿಡಿಸಿ ಫೇಸ್ ಲಾಕ್ ಓಪನ್ ಮಾಡಿ ಆನ್ಲೈನ್ ಹಣ ಪಾವತಿ ಆ್ಯಪ್ ಅಲಿಪೇಗೆ ಲಾಗ್ ಇನ್ ಆಗಿದ್ದಾನೆ. ತಕ್ಷಣ ಪಾಸ್ವರ್ಡ್ ಬದಲಿಸಿ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಖಾತೆಯಲ್ಲಿ ಹಣ ಕಾಣೆಯಾಗಿರುವುದನ್ನು ಕಂಡು ಯುವತಿ ಪೊಲೀಸರಿಗೆ ದೂರು ನೀಡಿದ್ದರು ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಸಾಬೀತಾಗಿದ್ದು, ಯುವಕನನ್ನು ತಪ್ಪಿತಸ್ತ ಎಂದು ಪರಿಗಣಿಸಿ 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.
ಫೋನ್ನ ಸುರಕ್ಷತೆಗಾಗಿ ಫೇಸ್ ಲಾಕ್ ಅಥವಾ ಫಿಂಗರ್ಪ್ರಿಂಟ್ ಲಾಕ್ ಇಡುವುದರ ಬದಲು ಪಿನ್ ನಂಬರ್ ಇಡುವುದು ಒಳಿತು. ಈ ರೀತಿಯಲ್ಲಿ ಆನ್ಲೈನ್ನಲ್ಲಿ ವ್ಯವಹಾರ ನಡೆಸುವಾಗ ಫೋನ್ ಹಾಗೂ ಅದರ ಪಾಸ್ವರ್ಡ್ಗಳನ್ನು ಸರಿಯಾದ ಕ್ರಮಗಳಲ್ಲಿ ಜೋಡಿಸಿಕೊಂಡಿರುವುದು ಮುಖ್ಯವಾಗಿರುತ್ತದೆ.
ಇದನ್ನೂ ಓದಿ:
ಕಾರಿನಲ್ಲಿ ಹಿಂಬಾಲಿಸಿ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದ ಎಂಎಸ್ ವಿದ್ಯಾರ್ಥಿ ಅರೆಸ್ಟ್