ಕಾಮತೃಷೆ ನೀಗಿಸಲು ನಿರಾಕರಿಸಿದ ಪತ್ನಿಯನ್ನು ಶೂಟ್ ಮಾಡಿ ತನ್ನ ಮೂವರು ಮಕ್ಕಳನ್ನು ಕಾಲುವೆಗೆ ಎಸೆದ
ಪ್ರಾಯಶಃ ಪಶುಗಳೂ ಹೀಗೆ ಮಾಡಲಾರವು, ಹಾಗಾಗಿ, ಬಿಹಾರಿನ ಮುಜಫರ್ನಗರದ ಒಬ್ಬ ವ್ಯಕ್ತಿ ಎಸಗಿರುವ ಭೀಕರ ಕೃತ್ಯವನ್ನು ಪಾಶವೀ ಅಂತಲೂ ಹೇಳಲಾಗದು, ಹಾಗೆ ಹೇಳಿದ್ದೇಯಾದರೆ ಅದು ಪಶುಗಳಿಗೆ ಅವಮಾನ.
ಪ್ರಾಯಶಃ ಪಶುಗಳೂ ಹೀಗೆ ಮಾಡಲಾರವು, ಹಾಗಾಗಿ, ಬಿಹಾರಿನ ಮುಜಫರ್ನಗರದ ಒಬ್ಬ ವ್ಯಕ್ತಿ ಎಸಗಿರುವ ಭೀಕರ ಕೃತ್ಯವನ್ನು ಪಾಶವೀ ಅಂತಲೂ ಹೇಳಲಾಗದು, ಹಾಗೆ ಹೇಳಿದ್ದೇಯಾದರೆ ಅದು ಪಶುಗಳಿಗೆ ಅವಮಾನ. 37-ವರ್ಷ ವಯಸ್ಸಿನ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿ ತನ್ನ ಕಾಮತೃಷೆಯನ್ನು ನೀಗಿಸಲು ಕಳೆದ 15 ದಿನಗಳಿಂದ ನಿರಾಕರಿಸುತ್ತಿದ್ದ ಕಾರಣಕ್ಕೆ ತನ್ನ ಹೆಂಡತಿ ಮತ್ತು ಅವರಿಬ್ಬರಿಗೆ ಹುಟ್ಟಿದ ಮೂರು ಮಕ್ಕಳನ್ನು ನಿರ್ದಯವಾಗಿ ಕೊಂದು ಹಾಕಿದ್ದಾನೆ. ಹೆಂಡತಿಯನ್ನು ಪಿಸ್ತೂಲಿನಿಂದ ಶೂಟ್ ನಂತರ ಅವನು ಮಕ್ಕಳನ್ನು ಮನೆ ಪಕ್ಕದಲ್ಲಿದ್ದ ಕಾಲುವೆಗೆ ಎಸೆದಿದ್ದಾನೆ. ಅಮಾಯಕ ಮಕ್ಕಳ ದೇಹಗಳೂ ಇನ್ನೂ ಪತ್ತೆಯಾಗಿಲ್ಲ. ಈ ಹೃದಯವಿದ್ರಾವಕ ಘಟನೆಯ ಮುಜಫರ್ನಗರ ಜಿಲ್ಲೆಯ ಬಸೆದಿ ಹೆಸರಿನ ಗ್ರಾಮದಲ್ಲಿ ಮಂಗಳವಾರದಂದು ನಡೆದಿದೆ.
ಅರೋಪಿ ಪಪ್ಪು ಕುಮಾರ್ 36 ವರ್ಷ ವಯಸ್ಸಿನ ತನ್ನ ಹೆಂಡತಿ ಡಾಲಿಯನ್ನು ಗುಂಡಿಕ್ಕಿ ಕೊಂದ ನಂತರ ಮಕ್ಕಳಾದ ಸೋನಿಯ (5), ವಂಶ್ (3) ಮತ್ತು ಕೇವಲ 15 ತಿಂಗಳು ಪ್ರಾಯದ ಹರ್ಷಿತಾಳನ್ನು ನಾಲೆಗೆ ಎಸೆದು ಪರಾರಿಯಾಗಿದ್ದ. ಆದರೆ ಸ್ಥಳೀಯರು ವಿಷಯವನ್ನು ಪುರ್ಕಾಜಿ ಪೊಲೀಸರ ಗಮನಕ್ಕೆ ತಂದ ನಂತರ ಅವನನ್ನು ಬಂಧಿಸಲಾಗಿದೆ.
ಪೊಲೀಸರಿಗೆ ಸೆರೆಸಿಕ್ಕ ಮೇಲೆ ಪಪ್ಪು, ಹೆಂಡತಿಯನ್ನು ಕೊಂದು ಮಕ್ಕಳನ್ನು ಕಾಲುವೆಗೆ ಎಸೆದಿರುವುದನ್ನು ಒಪ್ಪಿಕೊಂಡಿದ್ದಾನೆ. ‘ಮಕ್ಕಳ ದೇಹಗಳು ಇನ್ನೂ ಸಿಕ್ಕಿಲ್ಲ, ಅವುಗಳನ್ನು ಹುಡುಕುವ ಕಾರ್ಯ ಜಾರಿಯಲ್ಲಿದೆ,’ ಎಂದು ಪುರ್ಕಾಜಿ ಪೊಲೀಸರು ಹೇಳಿದ್ದಾರೆ.
ಮಹಾರಾಷ್ಟ್ರದಿಂದ ವರದಿಯಾಗಿರುವ ಮತ್ತೊಂದು ದಾರುಣ ಘಟನೆಯಲ್ಲಿ 40-ವರ್ಷ ವಯಸ್ಸಿನ ದಿನಗೂಲಿ ಕಾರ್ಮಿಕನೊಬ್ಬ ಪತ್ನಿಯೊಂದಿಗೆ ಜಗಳವಾಡಿದ ನಂತರ ತನ್ನ ಹಸುಗೂಸನ್ನು ಕೊಂದು ಹಾಕಿದ್ದಾನೆ. ಸದರಿ ಘಟನೆಯು ನಾಗ್ಪುರ ಜಿಲ್ಲೆಯ ವಕೋಡಿ ಗ್ರಾಮದಲ್ಲಿ ನಡೆದಿದೆ.
ಘಟನೆ ಕುರಿತು ವಿವರಣೆ ನೀಡಿರುವ ಪೊಲೀಸರು, ಮಂಗಳವಾರ ರಾತ್ರಿ ಭಜನ ಮೆತಾಬ್ ಕವ್ರೇಟಿ ಹೆಸರಿನ ದಿನಗೂಲಿ ನೌಕರ ಮದ್ಯಪಾನ ಮಾಡಲು ಹೆಂಡತಿಯ ಹತ್ತಿರ ಹಣ ಕೇಳಿದ್ದಾನೆ. ಆಕೆ ನಿರಾಕರಿಸಿದಾಗ ಇಬ್ಬರ ನಡುವೆ ಜಗಳ ಶುರುವಾಗಿದೆ. ಆವೇಶದಲ್ಲಿ ಕವ್ರೇಟಿ ತನ್ನ ಒಂದು ವರ್ಷದ ಮಗ ಸತ್ಯಂನನ್ನು ಎತ್ತಿ ಗೋಡೆಗೆ ಅಪ್ಪಳಿಸಿದ್ದಾನೆ. ಹಸುಳೆ ಕೂಡಲೇ ಪ್ರಾಣ ಬಿಟ್ಟಿದೆ.
ಕಳೆದೆರಡು ವರ್ಷಗಳಲ್ಲಿ ಕೊವಿಡ್-19 ಪಿಡುಗು ದೇಶದೆಲ್ಲೆಡೆ ಹಬ್ಬಿದ ನಂತರ ಕೌಟುಂಬಿಕ ಹಿಂಸೆಯ ಪ್ರಕರಣಗಳು ಜಾಸ್ತಿಯಾಗಿವೆ. ರಾಷ್ಟ್ರೀಯ ಮಹಿಳಾ ಆಯೋಗದಿಂದ ಲಬ್ಯವಾಗಿರುವ ಅಧಿಕೃತ ಮಾಹಿತಿಯ ಪ್ರಕಾರ ಕಳೆದ ಏಪ್ರಿಲ್ ನಂತರ ಕೌಟುಂಬಿಕ ಹಿಂಸೆ ಪ್ರಕರಣಗಳು ಎರಡೂವರೆ ಪಟ್ಟು ಹೆಚ್ಚಾಗಿವೆ.
ಜಾಗತಿವಾಗಿಯೂ ಕೌಟುಂಬಿಕ ಹಿಂಸೆಯ ಪ್ರಕರಣಗಳು ಹೆಚ್ಚಾಗಿವೆ. ಅಮೇರಿಕನ್ ಜರ್ನಲ್ ಆಫ್ ಎಮರ್ಜೆನ್ಸಿ ಮೆಡಿಸಿನ್ ಮತ್ತು ಯುಎನ್ ವುಮೆನ್ ಪ್ರಕಾರ, ಕೊವಿಡ್ ಪಿಡುಗು ಶುರುವಾದ ಮೇಲೆ ಕೌಟುಂಬಿಕ ಹಿಂಸೆಯ ಪ್ರಕರಣಗಳು ಚೀನಾದ ಹುಬೇಯಲ್ಲಿ ಶೇಕಡಾ 300, ಅರ್ಜೆಂಟೀನಾದಲ್ಲಿ ಶೇಕಡಾ 25, ಸೈಪ್ರಸ್ನಲ್ಲಿ ಶೇಕಡಾ 30, ಸಿಂಗಫುರ್ನಲ್ಲಿ ಶೇಕಡಾ 33 ಮತ್ತು ಬ್ರೆಜಿಲ್ನಲ್ಲಿ ಶೇಕಡಾ 50ರಷ್ಟು ಹೆಚ್ಚಾಗಿರುವುದು ವರದಿಯಾಗಿದೆ.
ಇದನ್ನೂ ಓದಿ: Bangalore Crime: ಟಿವಿ ನೋಡುವ ವಿಷಯಕ್ಕೆ ದಂಪತಿ ಜಗಳ: ಮೂರು ವರ್ಷದ ಮಗಳನ್ನೇ ಕೊಂದ ತಾಯಿ