ಪಾರ್ಕಿಂಗ್​​ ವಿಚಾರಕ್ಕೆ ಸಹೋದರರಿಬ್ಬರ ಮೇಲೆ ಹಲ್ಲೆ: ಎಂಟು ಜನರಿಂದ ಹಲ್ಲೆ ಆರೋಪ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 24, 2024 | 6:32 PM

ಮಂಗಳೂರು ನಗರದ ರಾವ್ ಆಂಡ್​​ ರಾವ್ ಸರ್ಕಲ್ ಬಳಿ ಪಾರ್ಕಿಂಗ್​​ ವಿಚಾರಕ್ಕೆ ಸಹೋದರರಿಬ್ಬರ ಮೇಲೆ ಹಲ್ಲೆ ಮಾಡಿದ್ದು, ತೀವೃ ಗಾಯಗಳಾಗಿರುವಂತಹ ಘಟನೆ ನಡೆದಿದೆ. ಹೋಟೆಲ್​​​ ಮಾಲೀಕನ ತಮ್ಮ ಹಾಗೂ ಇತರರಿಂದ ಕಲ್ಲು, ಕೈಯಿಂದ ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದಾರೆ. ಸಹೋದರಿಬ್ಬರ ತಲೆಗೆ, ತುಟಿಗೆ ಗಾಯಗಳಾಗಿದ್ದು, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

ಪಾರ್ಕಿಂಗ್​​ ವಿಚಾರಕ್ಕೆ ಸಹೋದರರಿಬ್ಬರ ಮೇಲೆ ಹಲ್ಲೆ: ಎಂಟು ಜನರಿಂದ ಹಲ್ಲೆ ಆರೋಪ
ಹಲ್ಲೆ ನಡೆಸಿದ ಆರೋಪ
Follow us on

ಮಂಗಳೂರು, ಜನವರಿ 24: ಪಾರ್ಕಿಂಗ್​​ (parking) ವಿಚಾರಕ್ಕೆ ಸಹೋದರರಿಬ್ಬರ ಮೇಲೆ ಹಲ್ಲೆ ಮಾಡಿದ್ದು, ತೀವೃ ಗಾಯಗಳಾಗಿರುವಂತಹ ಘಟನೆ ನಗರದ ರಾವ್ ಆಂಡ್​​ ರಾವ್ ಸರ್ಕಲ್ ಬಳಿ ನಡೆದಿದೆ. ಫಾರೂಕ್ ಮತ್ತು ಇತರೆ ಎಂಟು ಮಂದಿಯಿಂದ ಉಲ್ಲಾಸ್ ರಾವ್, ಹರ್ಷಿತ್ ರಾವ್ ಸಹೋದರರ ಮೇಲೆ ಹಲ್ಲೆ ನಡೆಸಿದ ಆರೋಪ ಮಾಡಲಾಗಿದೆ. ಎಂಪಾಯರ್ ಹೊಟೇಲ್​​ಗೆ ಊಟಕ್ಕೆಂದು ಸಹೋದರರು ಹೋಗಿದ್ದಾರೆ. ಹೋಟೆಲ್​​​ ಮಾಲೀಕನ ತಮ್ಮ ಹಾಗೂ ಇತರರಿಂದ ಕಲ್ಲು, ಕೈಯಿಂದ ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದಾರೆ. ಸಹೋದರಿಬ್ಬರ ತಲೆಗೆ, ತುಟಿಗೆ ಗಾಯಗಳಾಗಿದ್ದು, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬಿಜಿ ಕೆರೆ ಬಳಿ ಲಾರಿಗೆ ಸರ್ಕಾರಿ ಬಸ್ ಡಿಕ್ಕಿ: ನಾಲ್ವರಿಗೆ ಗಾಯ

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಗ್ರಾಮದ ಬಳಿ ಲಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ಬಸ್ ನಲ್ಲಿದ್ದ ನಾಲ್ವರಿಗೆ ಗಾಯಗಳಾಗಿರುವಂತಹ ಘಟನೆ ನಡೆದಿದೆ. ಗಾಯಾಳುಗಳು ಮೊಳಕಾಲ್ಮೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಮಂಡ್ಯ: ಶಿಕ್ಷಕಿ ಕೊಲೆಯಾದ 30 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಪೊಲೀಸರು

ರಾ.ಹೆ 150ಎ ರಲ್ಲಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಅನಾಹುತ ತಪ್ಪಿದೆ. ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ದೇವಸ್ಥಾನದ ಬೀಗ ಹೊಡೆದು ಕಳ್ಳತನ

ಮಂಡ್ಯ: ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿಯ ಬನ್ನೂರಮ್ಮ ದೇವಸ್ಥಾನದ ಬೀಗ ಮುರಿದು ಹುಂಡಿಯಲ್ಲಿದ್ದ ಹಣ, ಚಿನ್ನಾಭರಣ ದೋಚಿ ಪರಾರಿ‌ ಆಗಿರುವಂತಹ ಘಟನೆ ನಡೆದಿದೆ. ಕಳ್ಳತನದ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ ಆಗಿದೆ. 2019ರಿಂದ ಇದುವರೆಗೆ ದೇವಾಲಯದಲ್ಲಿ 6 ಬಾರಿ ಕಳ್ಳತನ ಮಾಡಲಾಗಿದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಕಂಡುಬಂದಿದೆ.

ಸ್ಕೂಟಿಯಲ್ಲಿ ಇಟ್ಟಿದ್ದ 1 ಲಕ್ಷ 40 ಸಾವಿರ ರೂ. ಹಣ ಕದ್ದ ಖದೀಮ 

ಬೆಳಗಾವಿ: ಸ್ಕೂಟಿಯಲ್ಲಿ ಇಟ್ಟಿದ್ದ 1ಲಕ್ಷ 40 ಸಾವಿರ ರೂ. ಹಣವನ್ನ ಕಳ್ಳತನ ಮಾಡಿರುವಂತಹ ಘಟನೆ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ನಡೆದಿದೆ. ಎಪಿಎಂಸಿ ರಾಜದೀಪ ತರಕಾರಿ ಅಂಗಡಿ ಮುಂದೆ ನಿಲ್ಲಿಸಿದ್ದ ಸ್ಕೂಟಿಯಲ್ಲಿನ ಹಣವನ್ನು ಎಗರಸಲಾಗಿದೆ.

ಇದನ್ನೂ ಓದಿ: ಅನ್ಯಧರ್ಮೀಯ ಯುವಕನನ್ನು ಪ್ರೀತಿಸಿದ ಯುವತಿಯ ಅಣ್ಣ; ಅವಳೊಂದಿಗೆ ತಾಯಿಯನ್ನೂ ಕೆರೆಗೆ ನೂಕಿ ಕೊಂದುಬಿಟ್ಟನೇ?

ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಕಳ್ಳನ ಕರಾಮತ್ತು ಸೆರೆಯಾಗಿದೆ. ತರಕಾರಿ ವ್ಯಾಪಾರಿ ರಾಜು ಎಂಬುವವರಿಗೆ ಹಣ ಸೇರಿದೆ. ಸ್ಥಳಕ್ಕೆ ಎಪಿಎಂಸಿ ಪೋಲಿಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಬೈಕ್​ಗೆ ಕ್ಯಾಂಟರ್ ಡಿಕ್ಕಿ, ಬೈಕ್ ಸವಾರ ಸಾವು

ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಚಿಕ್ಕಬಿದರಕಲ್ಲು ಬಳಿ ಬೈಕ್​​ಗೆ ಕ್ಯಾಂಟರ್ ಡಿಕ್ಕಿಯಾಗಿ ಬೈಕ್​​ ಸವಾರ ಜಗದೀಶ್ (42) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಮಧ್ಯೆ, ಕ್ಯಾಂಟರ್ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:31 pm, Wed, 24 January 24