ಮೆಕ್ಸಿಕೋ: ಕಣ್ಮರೆಯಾಗಿದ್ದ ಗರ್ಭಿಣಿ ಮಹಿಳೆ ಶವವಾಗಿ ಪತ್ತೆಯಾದಾಗ ಅವಳ ಹೊಟ್ಟೆ ಬಗೆದು ಮಗುವನ್ನು ಕಿತ್ತುಕೊಳ್ಳಲಾಗಿತ್ತು!
ಗರ್ಭಿಣಿ ಲೂಯಿಸ್ ದೇಹವನ್ನು ಮರುದಿನ ಅವಳ ತಾಯಿ ಮರಿಸಿಲಾ ಲೂಯಿಸ್ ಗಲ್ಲಿಗೋಸ್ ರೋದಿಸುತ್ತಾ ಗುರುತು ಹಿಡಿದಿದ್ದಾಳೆ. ಲೂಯಿಸ್ ಹೊಟ್ಟೆಯಲ್ಲಿದ್ದ ಮಗು ಎಲ್ಲಿದೆ, ಬದುಕಿದೆಯಾ ಸತ್ತಿದೆಯಾ ಅನ್ನೋದು ಇನ್ನೂ ಗೊತ್ತಾಗಿಲ್ಲ.
ಮೆಕ್ಸಿಕೋ: ಕಣ್ಮರೆಯಾಗಿದ್ದ ಗರ್ಭಿಣಿ ಮಹಿಳೆಯೊಬ್ಬಳ ಮೃತದೇಹ ಅವಳ ಗೆಳತಿಯ ಶವದ ಪಕ್ಕದಲ್ಲ್ಲೇ ಪತ್ತೆಯಾಗಿರುವ ಜೊತೆಗೆ ಅವಳ ಹೊಟ್ಟೆಯನ್ನು ಬಗೆದು ಭ್ರೂಣವನ್ನು ಕಿತ್ತು ಬಿಸಾಡಿರುಬ ಭೀಕರ ಘಟನೆ ಮೆಕ್ಸಿಕೋದ ನ್ಯೂಯೋ ಲಿಯಾನ್ (Nuevo León) ರಾಜ್ಯದ ಎಸ್ಕೊಬಿಡೊ (Escobedo) ಎಂಬಲ್ಲಿ ಬೆಳಕಿಗೆ ಬಂದಿದೆ. ಅವಳ ಗೆಳೆತಿಯನ್ನೂ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕೊಲೆಯಾಗಿರುವ ಮಹಿಳೆಯನ್ನು 19-ವರ್ಷ-ವಯಸ್ಸಿನ ಮಾರ್ಥ ಅರೋರ ರಾಮಿರೆಜ್ ಲೂಯಿಸ್ (Martha Aurora Ramirez Luis) ಎಂದು ಗುರುತಿಸಲಾಗಿದ್ದು ಆಕೆ 8-ತಿಂಗಳು ಗರ್ಭಿಣಿಯಾಗಿದ್ದಳು. ನವೆಂಬರ್ 26 ರಂದು ಅವಳು ಟ್ಯಾಕ್ಸಿ ಌಪ್ ನಿಂದ ಬುಕ್ ಮಾಡಿ ಅದರಲ್ಲಿ ಹತ್ತುವಾಗಲಷ್ಟೇ ಕೊನೆಯಬಾರಿಗೆ ಅವಳು ಕಂಡಿದ್ದು.
ಎಸ್ಕಡಬಿಡೋನಲ್ಲಿ ಟ್ಯಾಕ್ಸಿ ಹತ್ತುವಾಗ ಅವಳ ಗೆಳತಿ 34-ವರ್ಷ-ವಯಸ್ಸಿನ ಕ್ಲಾಡಿಯೋ ಗೊನ್ಜಾಲೆಜ್ ಪಿರೇಲ್ಸ್ ಜೊತೆಗಿದ್ದಳು. ಅವರಿಬ್ಬರು ಜೊತೆಯಾಗಿ ಕ್ಯಾಬ್ ಹತ್ತುವುದನ್ನು ಜನ ನೋಡಿದ್ದಾರೆ. ಅದಾದ ಬಳಿಕ ಅವರು ಯಾರ ಕಣ್ಣಿಗೂ ಬಿದ್ದಿಲ್ಲ. ನಾಪತ್ತೆಯಾದ ಹಲವಾರು ದಿನಗಳ ನಂತರ ಮಹಿಳೆಯರ ದೇಹಗಳು ಪಾಸೊ ಕುಚಾರಸ್ ಎಂಬ ಸ್ಥಳದಲ್ಲಿರುವ ಒಂದು ಶಿಥಿಲಗೊಂಡಿರುವ ಗೋದಾಮಿನ ಬಳಿ ಪತ್ತೆಯಾಗಿವೆ.
ಗರ್ಭಿಣಿ ಲೂಯಿಸ್ ದೇಹವನ್ನು ಮರುದಿನ ಅವಳ ತಾಯಿ ಮರಿಸಿಲಾ ಲೂಯಿಸ್ ಗಲ್ಲಿಗೋಸ್ ರೋದಿಸುತ್ತಾ ಗುರುತು ಹಿಡಿದಿದ್ದಾಳೆ. ಲೂಯಿಸ್ ಹೊಟ್ಟೆಯಲ್ಲಿದ್ದ ಮಗು ಎಲ್ಲಿದೆ, ಬದುಕಿದೆಯಾ ಸತ್ತಿದೆಯಾ ಅನ್ನೋದು ಇನ್ನೂ ಗೊತ್ತಾಗಿಲ್ಲ.
ಲೂಯಿಸ್ ಮತ್ತು ಪೀರೆಲ್ಸ್ ಇಬ್ಬರನ್ನೂ ಉಸಿರುಗಟ್ಟಿಸಿ ಸಾಯಿಸಲಾಗಿದೆಯೆಂದು ನ್ಯೂವೋ ಲಿಯಾನ್ ಪ್ರಾಸಿಕ್ಯೂಟರ್ ಕಚೇರಿ ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಮಗಳ ಅಂತ್ಯಕ್ರಿಯೆ ನಡೆಸಲು ಧನ ಸಹಾಯದ ಅಗತ್ಯವಿದೆಯೆಂದು ಮರಿಸಿಲಾ ಸೋಷಿಯಲ್ ಮಿಡಿಯಾ ವಿಜ್ಞಾಪನೆ ಮಾಡಿಕೊಂಡಿದ್ದಾರೆ. ‘ದಯವಿಟ್ಟು ಸಹಾಯ ಮಾಡಿರೆಂದು ಕೋರುತ್ತೇನೆ, ಯಾಕೆಂದರೆ ನನ್ನ ಮಗಳ ಅಂತ್ಯಕ್ರಿಯೆ ನಡೆಸಲು ನನ್ನಲ್ಲಿ ಹಣವಿಲ್ಲ,’ ಎಂದು ಆಕೆ ಮನವಿ ಮಾಡಿದ್ದಾಳೆ.
ಮರಿಸಿಲಾಳ ಹಣೆಬರಹ ನೋಡಿ ಹೇಗಿದೆ. ಆಕೆಯ ಇನ್ನೊಬ್ಬ ಮಗಳು ಮತ್ತು ಲೂಸಿಯಾಳ ಮಲ-ಸಹೋದರಿ 25-ವರ್ಷ-ವಯಸ್ಸಿನ ಇರ್ಮ ಯಮೆಲ್ ಮಾರ್ಟಿನೆಜ್ ಲೂಯಿಸ್ ಳನ್ನು ಕಳೆದ ವರ್ಷ ಮಾಂಟೆರ್ರೀ ಪ್ರದೇಶದಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು.
ಆ ಕೊಲೆ ಪ್ರಕರಣದ ತನಿಖೆ ಜಾರಿಯಲ್ಲಿದೆ.
ನವೆಂಬರ್ 30 ರಂದು ವೆರಾಕ್ರೂಜ್ ನಗರದ ಲಾಸ್ ಬಜಾದಾಸ್ ಹೆಸರಿನ ಏರಿಯಾದಲ್ಲಿ ಮತ್ತೊಬ್ಬ ಗರ್ಭಣಿ ಮಹಿಳೆಯನ್ನು ಅವಳ ಹೊಟ್ಟೆಯಲ್ಲಿನ ಮಗುವಿಗಾಗಿ ಅಪಹರಿಸಿ ಕೊಲ್ಲಲಾಗಿತ್ತು. ರೊಸಾ ಇಸೆಲ ಕ್ಯಾಸ್ಟ್ರೊ ವಾರ್ಕೆಜ್ ಹೆಸರಿನ 30-ವರ್ಷದ ಮಹಿಳೆ ತನ್ನ ಹುಟ್ಟಲಿರುವ ಮಗುವಿಗೆ ಉಚಿತವಾಗಿ ಬಟ್ಟೆ ನೀಡುವುದಾಗಿ ಪ್ರಾಮಿಸ್ ಮಾಡಿದ್ದ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದವಳ ಬಳಿ ಹೋದ ನಂತರ ನಾಪತ್ತೆಯಾಗಿದ್ದಳು.
ಒಂಬತ್ತು ತಿಂಗಳು ಗರ್ಭಿಣಿಯಾಗಿದ್ದ ಇಸೆಲ ಬಟ್ಟೆ ಕೊಡುತ್ತೇನೆಂದು ಹೇಳಿದ ಉದಾರಿಯನ್ನು ಭೇಟಿಯಾಗಲು ಅಪಾಯಿಂಟ್ ಮೆಂಟ್ ಪಡೆದು ಅಲ್ಲಿಗೆ ಹೋಗಲು ಟ್ಯಾಕ್ಸಿಯೊಂದನ್ನು ಹತ್ತುವಾಗ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು.
ಡಿಸೆಂಬರ್ 3 ರಂದು ಅವಳ ಮೃತದೇಹ ಮೆಡಿಲಿನ್ ಡಿ ಬ್ರಾವೊ ಪುರಸಭೆ ವ್ಯಾಪ್ತಿಯಲ್ಲಿನ ಲಾಸ್ ಅರಿಯರೋಸ್ ಎಂಬಲ್ಲಿ ಪತ್ತೆಯಾಗಿತ್ತು.
ಅಕ್ಟೋಬರ್ 29ರಂದು ಮೆಕ್ಸಿಕೋ ದೇಶದ ಪ್ರವಾಸದಲ್ಲಿದ್ದ ಶಾಂಕ್ವೆಲ್ಲ ರಾಬಿನ್ಸನ್ ಹೆಸರಿನ ಮಹಿಳೆಯ ಕೊಲೆಯಾಗಿತ್ತು. ಆಕೆಯ ಮೇಲೆ ಹಲ್ಲೆ ನಡೆಯುತ್ತಿದ್ದ ವಿಡಿಯೋ ಸಿಕ್ಕ ನಂತರ ಅವಳನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದರು.
ಮೂಲತಃ ಅಮೆರಿಕ ನಾರ್ತ್ ಕೆರೊಲಿನಾದಲ್ಲಿರುವ ಚಾರ್ಲೋಟ್‌ನ ಸಂಸ್ಥೆಯ ಒಡತಿಯಾಗಿದ್ದ ಶಾಂಕ್ವೆಲ್ಲ ತನ್ನ ಆರು ಸ್ನೇಹಿತರೊಂದಿಗೆ ಫಂಡಡೋರ್ಸ್ ಬೀಚ್ ಕ್ಲಬ್‌ನಲ್ಲಿನ ರೆಸಾರ್ಟ್ ಸಿಟಿ ಸ್ಯಾನ್ ಜೋಸ್ ಡೆಲ್ ಕಾಬೊಗೆ ಭೇಟಿ ನೀಡಿದ್ದಳು. ಪತ್ತೆಯಾದ ವೀಡಿಯೊದಲ್ಲಿ ಯಾರೋ ಒಬ್ಬರು ಶಾಂಕ್ವೆಲ್ಲಳಿಗೆ ‘ನೀನು ಕನಿಷ್ಟ ಹೋರಾಟವಾದರೂ ಮಾಡಬಹುದು,’ ಅಂತ ಹೇಳಿರುವುದು ಕೇಳಿಸಿದೆ.
ವಿಷಯುಕ್ತ ಮದ್ಯ ಸೇವನೆಯಿಂದ ಅವಳ ಸಾವು ಸಂಭವಿಸಿದೆ ಎಂದು ಮೆಕ್ಸಿಕನ್ ಪೊಲೀಸರು ತನಗೆ ಮಾಹಿತಿ ನೀಡಿದರೆಂದು ಶಾಂಕ್ವೆಲ್ಲಳ ಅಮ್ಮ ಸಲ್ಲಮೊಂಡ್ರ ಡಬ್ಲ್ಯೂಬಿಟಿವಿಗೆ ಹೇಳಿದ್ದಾರೆ. ಆದರೆ ಆಕೆಯ ಮರಣ ಪ್ರಮಾಣ ಪತ್ರದ ಪ್ರಕಾರ ಅವಳ ಬೆನ್ನು ಮೂಳೆಗೆ ಆದ ತೀವ್ರ ಸ್ವರೂಪದ ಗಾಯದಿಂದ ಸಾವು ಸಂಭವಿಸಿದೆ.
‘ಆಕೆಗೆ ಆರೋಗ್ಯ ಸರಿಯಿರಲಿಲ್ಲ, ಆಲ್ಕೋಹಾಲಲ್ಲಿ ವಿಷ ಬೆರೆಸಲಾಗಿತ್ತು , ಎಂದು ಪೊಲೀಸರು ಹೇಳಿದರು, ವಿಡಿಯೋ ಕ್ಲಿಪ್ಪಿಂಗ್ ನಲ್ಲಿರುವ ಕೆಲವರನ್ನು ನಾನು ಗುರುತಿಸಬಲ್ಲೆ,’ ಎಂದು ಆಕೆ ಹೇಳಿದ್ದಾರೆ.
ಮತ್ತಷ್ಟು ಕ್ರೈಮ್ ಕತೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ