ಬೆಂಗಳೂರಲ್ಲಿ ಡೆಡ್ಲಿ ಅಟ್ಯಾಕ್.. ಚೇಸ್ ಮಾಡಿಕೊಂಡು ಬಂದು ವ್ಯಕ್ತಿಯ ಕೈ ಕತ್ತರಿಸಿ ಪರಾರಿ..!

ಇಂದು(ಡಿಸೆಂಬರ್ 24) ಮಟ, ಮಟ ಮಧ್ಯಾಹ್ನ 12 ಗಂಟೆಗೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡೆಡ್ಲಿ ಅಟ್ಯಾಕ್ ನಡೆದಿದೆ. ಹೋಟೆಲ್​ನಲ್ಲಿ ಊಟ ಮಾಡುತ್ತಿದ್ದ ವ್ಯಕ್ತಿ ಮೇಲೆ ದುಷ್ಕರ್ಮಿಗಳು ಏಕಾಏಕಿ ನುಗ್ಗಿ ಲಾಂಗ್​ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮಚ್ಚಿನಿಂದ ಕೈ ಕತ್ತರಿಸಿ, ಕಾಲು ದೇಹದ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇದರಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಮತ್ತೊಂದೆಡೆ ಬೆಳಗಾವಿಯಲ್ಲೂ ಸಹ ಹಾಡುಹಗಲೇ ನಡು ರಸ್ತೆಯಲ್ಲಿ ವ್ಯಕ್ತಿಯೋರ್ವನ ಹತ್ಯೆ ಯತ್ನ ನಡೆದಿದೆ.

ಬೆಂಗಳೂರಲ್ಲಿ ಡೆಡ್ಲಿ ಅಟ್ಯಾಕ್.. ಚೇಸ್ ಮಾಡಿಕೊಂಡು ಬಂದು ವ್ಯಕ್ತಿಯ ಕೈ ಕತ್ತರಿಸಿ ಪರಾರಿ..!
ಸಾಂದರ್ಭಿಕ ಚಿತ್ರ
Follow us
Shivaprasad
| Updated By: ರಮೇಶ್ ಬಿ. ಜವಳಗೇರಾ

Updated on: Dec 24, 2024 | 7:28 PM

ಬೆಂಗಳೂರು, (ಡಿಸೆಂಬರ್ 24): ಏಕಾಏಕಿ ಹೋಟೆಲ್​ಗೆ ನುಗ್ಗಿದ ದುರ್ಷರ್ಮಿಗಳು ಊಟ ಮಾಡುತ್ತಿದ್ದ ವ್ಯಕ್ತಿ ಮೇಲೆ ಮಚ್ಚನಿಂದ ಮನಸ್ಸೋ ಇಚ್ಛೆ ದಾಳಿ ಮಾಡಿದ್ದಾರೆ. ಮಚ್ಚಿನಿಂದ ಮಂಜುನಾಥ್ ಎಂಬಾತನ ಕೈ ಕತ್ತರಿಸಿ, ಕಾಲು ದೇಹದ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಭಯಾನಕ ಘಟನೆ ಬೆಂಗಳೂರಿನ ದೇವನಹಳ್ಳಿಯ ವಿಶ್ವನಾಥಪುರದಲ್ಲಿ ನಡೆದಿದೆ. ಶ್ರೀರಾಮ್ ಎಂಬುವನೇ ದಾಳಿ ಮಾಡಿ ಪರಾರಿಯಾಗಿದ್ದಾನೆ. ಹಲ್ಲೆಗೊಳಗಾದ ಮಂಜುನಾಥ್, ಶ್ರೀರಾಮ್​ನ​ ಅತ್ತೆ ಮಗ. ತಂದೆ ಕೊಲೆ ಪ್ರಕರಣದಲ್ಲಿ ಸಹಾಯಕ್ಕೆ ಬಂದಿಲ್ಲವೆಂದು ಶ್ರೀರಾಮ್, ಮಂಜುನಾಥ್​ ಮೇಲೆ ದ್ವೇಷ ಬೆಳೆಸಿದ್ದ, ಇಂದು(ಡಿಸೆಂಬರ್ 24) ಏಕಾಏಕಿ ಅಟ್ಯಾಕ್ ಮಾಡಿದ್ದಾನೆ.

ಮಟ, ಮಟ ಮಧ್ಯಾಹ್ನ 12 ಗಂಟೆಗೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಡೆಡ್ಲಿ ಅಟ್ಯಾಕ್ ನಡೆದಿದೆ. ಮಂಜುನಾಥ್ ಎಂಬುವವರನ್ನು ಚೇಸ್ ಮಾಡಿಕೊಂಡು ಹೋಟೆಲ್‌ಗೆ ನುಗ್ಗಿದ್ದಾರೆ. ಏಕಾಏಕಿ ಅಟ್ಯಾಕ್ ಮಾಡಿದ ಗ್ಯಾಂಗ್ ಮಂಜುನಾಥ್ ಕೈ ಕತ್ತರಿಸಿ, ಕಾಲು ದೇಹದ ಮೇಲೆ ಲಾಂಗ್ ಬೀಸಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಶ್ವೇತಾ ಗೌಡ ಜತೆ ವರ್ತೂರ್‌ ಪ್ರಕಾಶ್‌ ಎಂಗೇಜ್​ಮೆಂಟ್​ಗೆ ಸಿದ್ಧತೆ: ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ

ತಂದೆಯ ಕೊಲೆ ಕೇಸ್ ನಲ್ಲಿ ಸಹಾಯ ಮಾಡಿಲ್ಲವೆಂದು ಶ್ರೀರಾಮ್, ಮಂಜುನಾಥ್ ಮೇಲೆ ದ್ವೇಷ ಬೆಳೆಸಿದ್ದ. ಇವತ್ತು ಮಂಜುನಾಥ್​ನನ್ನು ಹಿಂಬಾಲಿಸಿ ಮಚ್ಚು ಬೀಸಿ ಪರಾರಿಯಾಗಿದ್ದಾರೆ. ಮಚ್ಚು ಬೀಸಿದಕ್ಕೆ ಹೋಟೆಲ್ ಸಿಬ್ಬಂದಿ ಸೇರಿದಂತೆ ಅಲ್ಲಿದ್ದ ಜನರು ಭಯಗೊಂಡಿದ್ದಾರೆ. ಎಲ್ಲರೂ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯ ಭೋವಿಪಾಳ್ಯದ ನಿವಾಸಿಗಳು ಎಂದು ತಿಳಿದುಬಂದಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಚಿಕ್ಕಜಾಲ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಬೆಳಗಾವಿಯಲ್ಲಿ ಕೊಚ್ಚಿ ವ್ಯಕ್ತಿಯ ಹತ್ಯೆಗೆ ಯತ್ನ

ಬೆಳಗಾವಿ: ಮತ್ತೊಂದೆಡೆ ಬೆಳಗಾವಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಹಾಡಹಗಲೇ ನಡು ರಸ್ತೆಯಲ್ಲೇ ಕೊಚ್ಚಿ ವ್ಯಕ್ತಿಯ ಹತ್ಯೆಗೆ ಯತ್ನ ನಡೆದಿದೆ. ಕುಡಗೋಲಿನಿಂದ ಕೊಚ್ಚಿ ಕೊಲೆಗೆ ಯತ್ನಿಸುತ್ತಿರುವ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸವಟಗಿ ಗ್ರಾಮದ ಮುತ್ತು ಗಣಾಚಾರಿ ಎಂಬಾತ ಅರವಳ್ಳಿ ಗ್ರಾಮದ ಮಕ್ತುಮ್ ತಟಗಾರ್‌ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಮಕ್ತುಮ್ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.