AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಹಾಡಹಗಲೇ 24 ಬಾರಿ ಕೊಚ್ಚಿ ಕೊಲೆ ಮಾಡಲು ಯತ್ನ: ಸಂತ್ರಸ್ತ ಬದುಕುಳಿದಿದ್ದೇ ಪವಾಡ!

ಬೆಳಗಾವಿಯ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಅನೈತಿಕ ಸಂಬಂಧದ ಆರೋಪದ ಹಿನ್ನೆಲೆಯಲ್ಲಿ ಭೀಕರ ಘಟನೆ ನಡೆದಿದೆ. ಮುತ್ತು ಗಣಾಚಾರಿ ಎಂಬಾತ ತನ್ನ ಪತ್ನಿಯ ಹಿಂದಿನ ಪ್ರೇಮಿಯಾದ ಮಕ್ತುಮ್ ತಟಗಾರ್ ಅವರ ಮೇಲೆ ಕುಡುಗೋಲಿನಿಂದ 24 ಬಾರಿ ಹಲ್ಲೆ ಮಾಡಿದ್ದಾನೆ. ಗಂಭೀರ ಗಾಯಗೊಂಡ ಮಕ್ತುಮ್ ಅವರನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಮುತ್ತು ಗಣಾಚಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿಯಲ್ಲಿ ಹಾಡಹಗಲೇ 24 ಬಾರಿ ಕೊಚ್ಚಿ ಕೊಲೆ ಮಾಡಲು ಯತ್ನ: ಸಂತ್ರಸ್ತ ಬದುಕುಳಿದಿದ್ದೇ ಪವಾಡ!
ಆರೋಪಿ ಮುತ್ತು ಗಣಾಚಾರಿ
ಸಹದೇವ್​ ಮಾನೆ
| Edited By: ವಿವೇಕ ಬಿರಾದಾರ|

Updated on:Dec 25, 2024 | 8:38 AM

Share

ಬೆಳಗಾವಿ, ಡಿಸೆಂಬರ್​​ 25: ಅನೈತಿಕ ಸಂಬಂಧ ಆರೋಪ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಹಾಡಹಗಲೇ ಕುಡುಗೋಲಿನಿಂದ 24 ಬಾರಿ ಕೊಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಳಗಾವಿ (Belagavi) ಜಿಲ್ಲೆ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ನಡೆದಿದೆ. ಅರವಳ್ಳಿ ಗ್ರಾಮದ ಮಕ್ತುಮ್ ತಟಗಾರ್‌ ಹಲ್ಲೆಗೊಳಗಾದ ವ್ಯಕ್ತಿ. ಮುತ್ತು ಗಣಾಚಾರಿ ಹಲ್ಲೆ ಮಾಡಿದ ಆರೋಪಿ.

ಎಂಟು ತಿಂಗಳ ಹಿಂದಷ್ಟೇ ಗಣಾಚಾರಿ ಮದುವೆಯಾಗಿದೆ. ಆದರೆ, ಮುತ್ತು ಗಣಾಚಾರಿ ಪತ್ನಿಯನ್ನು ಮಕ್ತುಮ್ ತಟಗಾರ್‌ ಈ ಹಿಂದೆ ಪ್ರೀತಿಸ್ತಿದ್ದನಂತೆ. ಮದುವೆ ಬಳಿಕವೂ ಗಣಾಚಾರಿ ಪತ್ನಿಯ ಜೊತೆ ಮಕ್ತುಮ್ ಸಂಪರ್ಕದಲ್ಲಿ ಇದ್ದನಂತೆ. ಈ ವಿಷಯ ಮುತ್ತು ಗಣಾಚಾರಿಗೆ ಗೊತ್ತಾಗಿದೆ. ಈ ವಿಚಾರವಾಗಿ ಮುತ್ತು ಗಣಾಚಾರಿ ಮತ್ತು ಆತನ ಪತ್ನಿಯ ನಡುವೆ ಗಲಾಟೆಯಾಗಿದೆ. ಪತಿ ಮುತ್ತು ಗಣಾಚಾರಿಯನ್ನು ಬಿಟ್ಟಯ ಪತ್ನಿ ತವರು ಮನೆ ಸೇರಿದ್ದಾಳೆ.

ಇದನ್ನೇ ಮುಂದಿಟ್ಟುಕೊಂಡು ಮುಕ್ತುಮ್, ಮುತ್ತು ಗಣಾಚಾರಿಗೆ ರೇಗಿಸುತ್ತಿದ್ದನಂತೆ. ಇದರಿಂದ ಮುತ್ತು ಗಣಾಚಾರಿ ಆಕ್ರೋಶಗೊಂಡು, ಸಂತೆಗೆ ಬಂದಿದ್ದ ಮುಕ್ತುಮ್ ತಟಗಾರ್ ಮೇಲೆ ಕುಡುಗೋಲು ಬೀಸಿದ್ದಾನೆ. ಕೆಳಗೆ ಬೀಳುತ್ತಿದ್ದಂತೆ ಬರೋಬ್ಬರಿ 24 ಬಾರಿ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ್ದಾನೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಮಕ್ತುಮ್​​ ತಟಗಾರ್​ನನ್ನು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಕೃತ್ಯ ಎಸಗಿ ಬೈಕ್​​ನಲ್ಲಿ ಪರಾರಿ​​ಯಾಗಲು ಯತ್ನಿಸುತ್ತಿದ್ದ ಆರೋಪಿ ಮುತ್ತು ಗಣಾಚಾರಿಯನ್ನು ಸೋಮವಾರ ಪೇಟೆಯಲ್ಲಿ ಕಿತ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ದೊಡ್ಡವಾಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅನೈತಿಕ ಸಂಬಂಧ ಆರೋಪಕ್ಕೆ ಪಾಪಿ ರಾಕ್ಷನಂತೆ ವರ್ತಿಸಿದ್ದಾನೆ. ಬೆಳಗಾವಿ ಜನ ನಡುಗಿ ಹೋಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:34 am, Wed, 25 December 24

Follow Us
ಸಹದೇವ್​ ಮಾನೆ
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More