ಪಾರ್ಟಿಗೆ ಕರೆದು ವಿವಸ್ತ್ರಗೊಳಿಸಿ, ಮೈಮೇಲೆ ಮೂತ್ರ ವಿಸರ್ಜಿಸಿದ ಸ್ನೇಹಿತರು, ನೊಂದು ಬಾಲಕ ಆತ್ಮಹತ್ಯೆ

ಹುಟ್ಟುಹಬ್ಬದ ಪಾರ್ಟಿಗೆಂದು ಸ್ನೇಹಿತರು ಕರೆದರೆಂದು ಹೋಗಿದ್ದ ಬಾಲಕ ಇದೀಗ ಶವವಾಗಿ ಮಲಗಿದ್ದಾನೆ. ಪಾರ್ಟಿಗೆ ಹೋಗಿದ್ದ ಬಾಲಕನನ್ನು ಥಳಿಸಿ ಬಾಯಿಗೆ ಮೂತ್ರ ವಿಸರ್ಜನೆ ಮಾಡಿ ಚಿತ್ರಹಿಂಸೆ ನೀಡಿದ್ದ ಕಾರಣ ಆತ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.

ಪಾರ್ಟಿಗೆ ಕರೆದು ವಿವಸ್ತ್ರಗೊಳಿಸಿ, ಮೈಮೇಲೆ ಮೂತ್ರ ವಿಸರ್ಜಿಸಿದ ಸ್ನೇಹಿತರು, ನೊಂದು ಬಾಲಕ ಆತ್ಮಹತ್ಯೆ
Police 2024 12 24t112810.490Image Credit source: NDTV
Follow us
ನಯನಾ ರಾಜೀವ್
|

Updated on: Dec 24, 2024 | 11:31 AM

ಬಾಲಕನೊಬ್ಬ ಸ್ನೇಹಿತರು ನೀಡಿದ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬಸ್ತಿಯಲ್ಲಿ ನಡೆದಿದೆ. ಅಪ್ರಾಪ್ತ ಬಾಲಕನನ್ನು ಆದಿತ್ಯ ಎಂದು ಗುರುತಿಸಲಾಗಿದೆ. ಆತನನ್ನು ಹುಟ್ಟುಹಬ್ಬದ ಪಾರ್ಟಿಗೆ ಬಾ ಎಂದು ಕರೆದು ಆತನ ಬಟ್ಟೆಯನ್ನು ಬಿಚ್ಚಿಸಿ, ಥಳಿಸಿ, ಮೈಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ, ಇದರಿಂದ ನೊಂದ ಬಾಲಕ ಸಾವಿನ ಕದ ತಟ್ಟಿದ್ದಾನೆ.

ಈ ಕುರಿತು ಸಿಒ ಪ್ರದೀಪ್ ಕುಮಾರ್ ಎಎನ್​ಐ ಜತೆ ಮಾತನಾಡಿದ್ದು, ಬಾಲಕ ನೇಣು ಹಾಕಿಕೊಂಡು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಪಿಎಸ್ ಕಪ್ತಂಗಂಜ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂಬಂಧಿತ ವಿಭಾಗಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಸಾವಿಗೂ ಮುನ್ನ ಆದಿತ್ಯ ತೀವ್ರ ಕಿರುಕುಳ ನೀಡಿದ್ದರು ಎಂದು ಬಾಲಕನ ಕುಟುಂಬದವರು ಆರೋಪಿಸಿದ್ದಾರೆ.

ಆತನ ಚಿಕ್ಕಪ್ಪ ವಿಜಯ್ ಕುಮಾರ್ ಪ್ರಕಾರ, ಅಪ್ರಾಪ್ತ ಬಾಲಕನನ್ನು ಗ್ರಾಮದಲ್ಲಿ ಹುಟ್ಟುಹಬ್ಬದ ಪಾರ್ಟಿಗೆ ಆಹ್ವಾನಿಸಲಾಗಿತ್ತು, ಅಲ್ಲಿ ಆತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿದ್ದಾರೆ.

ಹುಟ್ಟು ಹಬ್ಬದ ಪಾರ್ಟಿಗೆಂದು ಆತನನ್ನು ಆಹ್ವಾನಿಸಿದ್ದು, ಆತನಿಗೆ ಅವಮಾನ ಮಾಡಲಿರಬಹುದು ಎಂದು ಪೊಲೀಸರು ಆಲೋಚಿಸಿದ್ದಾರೆ. ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ನಮ್ಮ ದೂರು ದಾಖಲಿಸಿಕೊಂಡಿಲ್ಲ ಎಂದು ಬಾಲಕನ ಚಿಕ್ಕಪ್ಪ ಹೇಳಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರು: ಪತ್ನಿ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಸ್ವಾಮಿ ಆತ್ಮಹತ್ಯೆ

ಡಿಸೆಂಬರ್ 20 ರಂದು ಘಟನೆ ಸಂಭವಿಸಿದೆ, ಆದರೆ ಮರುದಿನ ನಮಗೆ ವಿಷಯ ತಿಳಿಯಿತು, ಆದಿತ್ಯ ತಡರಾತ್ರಿ ಮನೆಗೆ ಬಂದು ಮರುದಿನ ವಿಚಾರಗಳ ಕುರಿತು ಹೇಳಿದ್ದ.

ನಾವು ಪ್ರಯತ್ನಪಟ್ಟರೂ ಅಧಿಕಾರಿಗಳು ಮೂರು ದಿನಗಳಾದರೂ ನಮ್ಮ ದೂರು ದಾಖಲಿಸಲಿಲ್ಲ. ಆತನಿಗೆ ಮತ್ತೆ ಕಿರುಕುಳ ನೀಡಲಾಯಿತು, ಅದು ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವಾಯಿತು. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ