ಮಹಿಳೆ ಎದೆಗೆ ಚಾಕು ಚುಚ್ಚಿ ಮಾಂಗಲ್ಯ ಸರ ಕದ್ದು ದುಷ್ಕರ್ಮಿಗಳು ಪರಾರಿ, ಎಲ್ಲಿ?

  • Publish Date - 7:16 am, Fri, 11 September 20
ಮಹಿಳೆ ಎದೆಗೆ ಚಾಕು ಚುಚ್ಚಿ ಮಾಂಗಲ್ಯ ಸರ ಕದ್ದು ದುಷ್ಕರ್ಮಿಗಳು ಪರಾರಿ, ಎಲ್ಲಿ?

ಆನೇಕಲ್: ಕಳ್ಳರಿಂದ ಮಹಿಳೆ ಬರ್ಬರ ಕೊಲೆಯಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕು ವ್ಯಾಪ್ತಿಯ ಸಿಂಗೇನ ಅಗ್ರಹಾರದಲ್ಲಿ ನಡೆದಿದೆ. ಶ್ವೇತಾ ಮೃತ ಮಹಿಳೆ.

ಕಳ್ಳತನಕ್ಕೆ ಬಂದಿದ್ದ ಖದೀಮರು ಶ್ವೇತಾ ಮನೆಯಲ್ಲಿ ಒಬ್ಬಳೆ ಇದ್ದಿದ್ದನ್ನು ಗಮನಿಸಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಮೃತ ಮಹಿಳೆಯ ಪತಿ ಮುರಳಿ ಮೆಡಿಕಲ್ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದರು. ಶ್ವೇತಾಳ ಮಗು ಮತ್ತು ಅತ್ತೆ ಊರಿಗೆ ತೆರಳಿದ್ದರು. ಈ ಕಾರಣದಿಂದಾಗಿ ರಾತ್ರಿ ಶ್ವೇತಾ ಮನೆಯಲ್ಲಿ ಒಂಟಿಯಾಗಿದ್ದಳು. ಇದನ್ನು ಗಮನಿಸಿದ ದುಷ್ಕರ್ಮಿಗಳು ನಿನ್ನೆ ರಾತ್ರಿ 9 ಘಂಟೆ ಸುಮಾರಿಗೆ ಮನೆಗೆ ನುಗ್ಗಿ ಚಾಕುವಿನಿಂದ ಎದೆ ಭಾಗಕ್ಕೆ ಚುಚ್ಚಿ ಕೊಲೆ ಮಾಡಿದ್ದಾರೆ.

ನಂತರ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ.ಡಿ.ಚನ್ನಣ್ಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳದಿಂದಲು ಸಹ ಸ್ಥಳ ಪರಿಶೀಲನೆ ನಡೆದಿದೆ. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸದ್ಯ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Click on your DTH Provider to Add TV9 Kannada