Drugs ಜಾಲ: ವಿರೇನ್ ಆಪ್ತ ಆದಿತ್ಯ ಅರೆಸ್ಟ್, A15 ಶೆಟ್ಟಿ ಪೊಲೀಸ್ ಕಸ್ಟಡಿಗೆ
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿದಂತೆ ಆರೋಪಿ ವಿರೇನ್ ಖನ್ನಾ ಆಪ್ತ ಆದಿತ್ಯ ಅಗರ್ವಾಲ್ನ ಬಂಧನವಾಗಿದೆ. ಹರಿಯಾಣ ಮೂಲದ ಆದಿತ್ಯ ಅಗರ್ವಾಲ್ನ CCB ಅಧಿಕಾರಿಗಳು ಬಂಧಿಸಿದ್ದಾರೆ. ಆದಿತ್ಯ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹಾಗಾಗಿ, ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದ ಆದಿತ್ಯ ಅಗರ್ವಾಲ್ನ CCB ತಂಡವೊಂದು ಬಂಧಿಸಿದೆ. ಪ್ರಕರಣದ A3 ಆರೋಪಿ ವಿರೇನ್ ಖನ್ನಾ ಸಹಚರನಂತೆ ಕೆಲಸ ಮಾಡುತ್ತಿದ್ದ ಆದಿತ್ಯ ಡ್ರಗ್ ಪೆಡ್ಲರ್ಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ. ಹಾಗಾಗಿ, CCB […]
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿದಂತೆ ಆರೋಪಿ ವಿರೇನ್ ಖನ್ನಾ ಆಪ್ತ ಆದಿತ್ಯ ಅಗರ್ವಾಲ್ನ ಬಂಧನವಾಗಿದೆ. ಹರಿಯಾಣ ಮೂಲದ ಆದಿತ್ಯ ಅಗರ್ವಾಲ್ನ CCB ಅಧಿಕಾರಿಗಳು ಬಂಧಿಸಿದ್ದಾರೆ.
ಆದಿತ್ಯ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹಾಗಾಗಿ, ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದ ಆದಿತ್ಯ ಅಗರ್ವಾಲ್ನ CCB ತಂಡವೊಂದು ಬಂಧಿಸಿದೆ. ಪ್ರಕರಣದ A3 ಆರೋಪಿ ವಿರೇನ್ ಖನ್ನಾ ಸಹಚರನಂತೆ ಕೆಲಸ ಮಾಡುತ್ತಿದ್ದ ಆದಿತ್ಯ ಡ್ರಗ್ ಪೆಡ್ಲರ್ಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ. ಹಾಗಾಗಿ, CCB ಅಧಿಕಾರಿಗಳು ಸರ್ಚ್ ವಾರಂಟ್ ಪಡೆದು ಅಗರ್ವಾಲ್ ಮನೆಯನ್ನ ತಡರಾತ್ರಿ ಪರಿಶೀಲಿಸಿದ್ದರು.
A15 ಆರೋಪಿ ಪ್ರತೀಕ್ ಶೆಟ್ಟಿ ಪೊಲೀಸ್ ಕಸ್ಟಡಿಗೆ ಜೊತೆಗೆ, ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಬ್ಬ ಆರೋಪಿ ಪ್ರತೀಕ್ ಶೆಟ್ಟಿನ ಸೆಪ್ಟೆಂಬರ್ 15ರವರೆಗೆ CCB ವಶಕ್ಕೆ ನೀಡಲಾಗಿದೆ. ಪ್ರತೀಕ್ ಶೆಟ್ಟಿನ ಸಿಸಿಬಿ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಈತನನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಜಡ್ಜ್ ಮುಂದೆ ಹಾಜರುಪಡಿಸಲಾಗಿತ್ತು.
ಇದನ್ನೂ ಓದಿ: ರಾಗಿಣಿ, ರವಿಶಂಕರ್ ಹೆಸರು ಬಾಯಿಬಿಟ್ಟಿದ್ದ ಟೆಕ್ಕಿ A15 ಅರೆಸ್ಟ್
Published On - 5:09 pm, Fri, 11 September 20