Murder: ಗಂಡನ ಉಗುರಿನಲ್ಲಿದ್ದ ರಕ್ತದ ಕಲೆಯಿಂದ ಬಯಲಾಯ್ತು ಹೆಂಡತಿ ಕೊಲೆಯ ರಹಸ್ಯ!

Crime News: ಮನೋಜ್ ಪ್ರಜಾಪತಿ ಮತ್ತು ಅವರ ಪತ್ನಿ ರೀಮಾ ಭೋಲಾ ಯಾದವ್ ಕಳೆದ ಎರಡು ದಿನಗಳಿಂದ ಖೈರಾನಿ ರಸ್ತೆ ಪ್ರದೇಶದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಸ್ನೇಹಿತರೊಬ್ಬರು ಇಂದು ಬೆಳಿಗ್ಗೆ ಅವರ ಮನೆಗೆ ಬಂದಾಗ ರೀಮಾ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ.

Murder: ಗಂಡನ ಉಗುರಿನಲ್ಲಿದ್ದ ರಕ್ತದ ಕಲೆಯಿಂದ ಬಯಲಾಯ್ತು ಹೆಂಡತಿ ಕೊಲೆಯ ರಹಸ್ಯ!
ಸಾಂದರ್ಭಿಕ ಚಿತ್ರ
Edited By:

Updated on: May 10, 2022 | 9:15 PM

ಮುಂಬೈ: ಕೊಲೆಗಾರ ಎಷ್ಟೇ ಬುದ್ಧಿವಂತನಾದರೂ ಒಂದಾದರೂ ಸುಳಿವು ಬಿಟ್ಟಿರುತ್ತಾನೆ ಎಂಬ ಮಾತೇ ಇದೆ. ಇದು ಖಂಡಿತ ಸುಳ್ಳಲ್ಲ. ಯಾವುದೇ ವಿಚಾರದಲ್ಲಿ ಯಾರೂ ಪರ್ಫೆಕ್ಟ್​ ಆಗಿರಲು ಸಾಧ್ಯವಿಲ್ಲ. ಕೊಲೆ ಕೂಡ ಅದಕ್ಕೆ ಹೊರತಾಗಿಲ್ಲ. ಮುಂಬೈನ ಸಕಿನಾಕಾ ಪ್ರದೇಶದಲ್ಲಿ 22 ವರ್ಷದ ವ್ಯಕ್ತಿಯ ಉಗುರಿನಲ್ಲಿದ್ದ ರಕ್ತದ ಕಲೆಯಿಂದಾಗಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆತ ಮಾಡಿಕೊಂಡ ಸಣ್ಣ ಎಡವಟ್ಟಿನಿಂದ ಆತನ ಅಪರಾಧ ಬಯಲಾಗಿದೆ.

ಮುಂಬೈನಲ್ಲಿ ನಡೆದ ಕೊಲೆಯೊಂದರ ತನಿಖೆಯನ್ನು ಆರಂಭಿಸಿದ ಸಕಿನಾಕಾ ಪ್ರದೇಶದ ಪೊಲೀಸರು ಮೃತ ಮಹಿಳೆಯ ಗಂಡನ ಉಗುರಿನ ಮೇಲೆ ರಕ್ತದ ಕಲೆಗಳನ್ನು ಕಂಡು ಆ ಕೊಲೆಯಲ್ಲಿ ಆತನೂ ಭಾಗಿಯಾಗಿರುವ ಬಗ್ಗೆ ಅನುಮಾನಗೊಂಡು ತನಿಖೆ ಆರಂಭಿಸಿದ್ದರು. ಆಗ ನಿಜವಾದ ಸಂಗತಿ ಬಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿ ಮನೋಜ್ ಪ್ರಜಾಪತಿ ಮತ್ತು ಅವರ ಪತ್ನಿ ರೀಮಾ ಭೋಲಾ ಯಾದವ್ ಕಳೆದ ಎರಡು ದಿನಗಳಿಂದ ಖೈರಾನಿ ರಸ್ತೆ ಪ್ರದೇಶದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಸ್ನೇಹಿತರೊಬ್ಬರು ಇಂದು ಬೆಳಿಗ್ಗೆ ಅವರ ಮನೆಗೆ ಬಂದಾಗ ರೀಮಾ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ರೀಮಾ ಅವರ ಕತ್ತು ಸೀಳಲಾಗಿತ್ತು. ನಮ್ಮ ತನಿಖೆಯ ಸಮಯದಲ್ಲಿ ನಾವು ಪ್ರಜಾಪತಿಯ ಉಗುರುಗಳ ಮೇಲೆ ರಕ್ತದ ಕಲೆಗಳನ್ನು ಕಂಡು ಅವರನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಅವರು ಮೊದಲು ನಮ್ಮನ್ನು ದಾರಿ ತಪ್ಪಿಸಲು ಪ್ರಯತ್ನಿಸಿದರು. ಆದರೆ, ನಿರಂತರ ವಿಚಾರಣೆಯಲ್ಲಿ ಅವರು ಅಪರಾಧವನ್ನು ಒಪ್ಪಿಕೊಂಡರು. ಆಕೆ ಸಾಯುವ ಮೊದಲು ಕೊನೆಯದಾಗಿ ಅವರೇ ಆಕೆಗೆ ಫೋನ್ ಮಾಡಿ ಮಾತನಾಡಿರುವುದು ಕೂಡ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ